Tuesday, 17th May 2022

ವಲಸಿಗರ ಮೇಲೆ ನಿಗಾ ವಹಿಸಿ ಕೋವಿಡ್ ಪರೀಕ್ಷೆ ನಡೆಸುವಂತೆ ಸೂಚನೆ

ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಛೇರಿಯಲ್ಲಿ ನಡೆದ ಕೋವಿಡ್-೧೯ ನಿರ್ವಹಣ ಸಭೆಯಲ್ಲಿ ಮಾತನಾಡಿ ಮಹಾರಾಷ್ಟç, ಆಂದ್ರ ಪ್ರದೇಶ,ತೆಲಂಗಾಣ ಗಡಿಗಳನ್ನು ಹೊಂದಿರುವ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಬೆಂಗಳೂರಿಗೆ ದುಡಿಯಲು ಹೋಗಿ ವಾಪಾಸು ಬರುವ ವಲಸಿಗರ ಮೇಲೆ ನಿಗಾ ವಹಿಸಿ ಕೋವಿಡ್ ಪರಿಕ್ಷೇಗಳನ್ನು ನಡೆಸುವಂತೆ ತಾಲ್ಲೂಕು ಆರೋಗ್ಯಧಿಕಾರಿಗಳಿಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಸೂಚಿಸಿದರು.

ತಾಲ್ಲೂಕಿನಲ್ಲಿ ವಲಸಿಗರಿಂದ ಕೊರೋನ ರೂಪಾಂತರಿಯಾದ ಓಮಿಕ್ರನ್ ಬರುವ ಸಾಧ್ಯತೆ ಇರುವುದರಿಂದ ಪೋಲಿಸ್ ಇಲಾಖೆ ಹಾಗೂ ತಾಲ್ಲೂಕು ಆಡಳಿತದಿಂದ ತಾಲ್ಲೂಕಿನ ಗಡಿ ಭಾಗದಲ್ಲಿ ರಾಷ್ಟಿçÃಯ ಹೆದ್ದಾರಿ ಯಲ್ಲಿರುವ ಕಲ್ಲೂರು,ಪೋತ್ನಾಳ್,ಗಿಲ್ಲೇಸುಗೂರು,ರಾಜಲಬಂಡಗಳಲ್ಲಿ ಸಿರವಾರ ತಾಲ್ಲೂಕಿನ ಗಡಿಯಲ್ಲಿ ಕೋವಿಡ್ ತಪಾಸಣಾ ತನಿಖಾ ಠಾಣೆಗಳನ್ನು ಏರ್ಪಡಿಸಿ ನಿಗಾವಹಿಸಬೇಕು ಕೋವಿಡ್ ಎದುರಿಸಲು ಎರಡನೇ ಅವಧಿಯ ಲಸಿಕೆ ಹಾಕಲು ಮನೆ ಮನೆಗೆ ತೇರಳಿ ಲಸಿಕೆ ಹಾಕುವ ಮೂಲಕ ಶೇ ೧೦೦ ರಷ್ಟು ಗುರಿ ಸಾಧಿಸಬೇಕು ೧೫ರಿಂದ ೧೮ ವರ್ಷದ ಮಕ್ಕಳಿಗೆ ಲಸಿಕೆ ಹಾಕುವುದಕ್ಕೆ ಇನ್ನು ಶೇ ೫೦ರಷ್ಟು ಮಾತ್ರ ಸಾಧ್ಯವಾಗಿದ್ದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶೇ ೧೦೦ರಷ್ಟು ಗುರಿ ಸಾಧಿಸಬೇಕು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಹಚ್ಚಿ ಲಸಿಕೆ ನೀಡುವಂತೆ ಸೂಚಿಸಿದರು.

ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಜನರೇಟರ್ ಪ್ಲಾಂಟ್ ಅನ್ನು ಒಂದು ವಾರ ದೊಳಗಾಗಿ ನೀಡುವುದಾಗಿ ಜಿ.ಪಂ.ಸಿ.ಇ.ಒ.ಭರವಸೆ ನೀಡಿದ್ದು ತಾಲ್ಲೂಕಿಗೆ ಅಗತ್ಯವಿರುವ ಆಮ್ಲಜನಕವನ್ನು ನಾವೇ ಉತ್ಪಾದಿಸಿಕೊಳ್ಳಲು ಅನುಕೂಲವಾಗುತ್ತದೆ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ಅಗತ್ಯವಿರುವ ಸುರಕ್ಷ ಉಪಕರಣಗಳನ್ನು ನೀಡುವಂತೆ ತಿಳಿಸಿದರು.

ತಾ.ಆರೋಗ್ಯಧಿಕಾರಿ ಡಾ.ಚಂದ್ರಶೇಖರಯ್ಯ ಸ್ವಾಮಿ ಮಾತನಾಡಿ ತಾಲ್ಲೂಕಿನಲ್ಲಿ ೪೭ ಸಕ್ರಿಯ ಪ್ರಕರಣಗಳು ವರದಿಯಾಗಿದ್ದು ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚಲು ಪ್ರತಿದಿನ ೪ನೂರು ಜನರ ಸ್ವಾಬ್ ಪರೀಕ್ಷೆ ನಡೆಸಲಾಗುತ್ತಿದೆ. ಪಟ್ಟಣದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್ ಆರೈಕೆ ಕೇಂದ್ರವನ್ನು ತೆರೆಯಲಾಗಿದೆ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ೩೦ ಆಕ್ಸಿಜನ್ ಸಹಿತ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಭಾರಿ ತಹಸೀಲ್ದಾರ್ ಅಬ್ದುಲ್ ವಾಹಿದ್ ಮಾತನಾಡಿ ತಾಲ್ಲೂಕು ಆಡಳಿತದಿಂದ ಕೋವಿಡ್-೧೯ ಅಂಗವಾಗಿ ಕರೆಯುವ ತುರ್ತು ಸಭೆಗಳಲ್ಲಿ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿದ್ದು ಸರಕಾರಕ್ಕೆ ಅಗತ್ಯವಿರುವ ಮಾಹಿತಿಗಳನ್ನು ಕಡ್ಡಾಯವಾಗಿ ನೀಡಬೇಕು.ಪಟ್ಟಣದಲ್ಲಿ ಪುರಸಭೆಯವರು ಹಾಗೂ ಗ್ರಾಮೀಣ ಭಾಗದಲ್ಲಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸದಸ್ಯರು ಶ್ರಮವಹಿಸುವಂತೆ ತಿಳಿಸಿದರು. ತಾಲ್ಲೂಕು ಪಂಚಾಯಿತಿ ಸಿ.ಇ.ಒ.ಸ್ಟೇಲಾ ವರ್ಗೀಸ್ ಅಗತ್ಯವಾದ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಕಂದಾಯ ನಿರೀಕ್ಷಕರಾದ ಚರಣಸಿಂಗ್ ಠಾಕೂರು,ಶಿರಸ್ಥೆದಾರರಾದ ವಿನಾಯಕ ರಾವ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವೀಂದ್ರ ಉಪ್ಪಾರ, ಅರಣ್ಯಾಧಿಕಾರಿ ರಾಜೇಶ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಾಳ, ಪುರಸಭೆ ಮುಖ್ಯಾಧಿಕಾರಿ ಗಂಗಾಧರ, ತೋಟಗಾರಿಕೆ ಅಧಿಕಾರಿ ಚಂದ್ರಶೇಖರ, ಕೃಷಿ ಇಲಾಖೆ ಯಂಕಣ್ಣ ಯಾದವ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಶಶಿಕಾಂತ ವಂದಾಲಿ, ಎಪಿಎಂಸಿ ಕಾರ್ಯದರ್ಶಿ ರ‍್ರಿಗೌಡ ಸೇರಿದಂತೆ ಇನ್ನಿತರರು ಇದ್ದರು.