Sunday, 3rd July 2022

ಹಿರಿಯ ನಟ ಪ್ರೇಮ್ ಚೋಪ್ರಾ ದಂಪತಿಗೆ ಸೋಂಕು

ಮುಂಬೈ: ಮಹಾರಾಷ್ಟ್ರದಲ್ಲಿ ಕರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಹಿರಿಯ ನಟ ಪ್ರೇಮ್ ಚೋಪ್ರಾ ದಂಪತಿಗೆ ಸೋಂಕು ಕಾಣಿಸಿಕೊಂಡಿದೆ.

ಮುಂಬೈನಲ್ಲಿ ಪ್ರಕರಣಗಳು ತೀವ್ರ ಗತಿಯಲ್ಲಿ ಏರುತ್ತಿರುವ ಬೆನ್ನಲ್ಲೇ, ಬಾಲಿವುಡ್ ತಾರೆಯರೂ ಸೋಂಕಿಗೆ ತುತ್ತಾಗುತ್ತಿದ್ದಾರೆ.

ಸೋಮವಾರ ನಿರ್ಮಾಪಕಿ ಏಕ್ತಾ ಕಪೂರ್ ಹಾಗೂ ಜಾನ್ ಅಬ್ರಹಾಂ – ಪ್ರಿಯಾ ರುಂಚಾಲ್ ದಂಪತಿ ಸೋಂಕಿಗೆ ತುತ್ತಾಗಿದ್ದರು. ಇದೀಗ ಮತ್ತೋರ್ವ ಹಿರಿಯ ನಟ ಪ್ರೇಮ್ ಚೋಪ್ರಾ ಸೋಂಕಿಗೆ ತುತ್ತಾಗಿದ್ದಾರೆ. ಪ್ರೇಮ್ ಚೋಪ್ರಾ ಪತ್ನಿ ಉಮಾ ಚೋಪ್ರಾ ಅವರಿಗೂ ಪಾಸಿಟಿವ್ ಆಗಿದ್ದು, ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಚ್ಚಿನ ನಟನಿಗೆ ಸೋಂಕು ತಗುಲಿ, ಆಸ್ಪತ್ರೆಗೆ ದಾಖಲಾಗಿದ್ದಕ್ಕೆ ಅಭಿಮಾನಿಗಳು ಆತಂಕಿತರಾಗಿದ್ದಾರೆ.

ಒಂದು ಅಥವಾ ಎರಡು ದಿನದಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು” ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೇ 86 ವರ್ಷವಾದರೂ ಕೂಡ ಚಿಕಿತ್ಸೆಗೆ ಅವರು ಉತ್ತಮವಾಗಿ ಸ್ಪಂದಿಸುತ್ತಿದ್ದು, ಶೀಘ್ರದಲ್ಲೇ ಗುಣಮುಖರಾಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ಧಾರೆ.

ಪ್ರೇಮ್ ಚೋಪ್ರಾ ‘ಬಾಬ್ಬಿ’, ‘ದೊ ರಾಸ್ತೆ’, ‘ಉಪಕಾರ್’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು, ಇತ್ತೀಚೆಗೆ ಸೈಫ್ ಅಲಿ ಖಾನ್ ನಟನೆಯ ‘ಬಂಟಿ ಔರ್ ಬಬ್ಲಿ 2’ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು.