Saturday, 10th April 2021

ಸಿಪಿಐ ಪ್ರದೀಪ ಬಿ.ಯು. ಡಿವೈಎಸ್ಪಿಯಾಗಿ ಬಡ್ತಿ

ಶಿರಸಿ : ಕಳೆದ ಒಂದುವರೆ ವರ್ಷಗಳಿಂದ ಶಿರಸಿ ಯಲ್ಲಿ ವೃತ್ತ ನಿರೀಕ್ಷರಾಗಿ ( ಸಿಪಿಐ ) ನಿಷ್ಠೆ ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಿಸಿದ ಪ್ರದೀಪ ಬಿ.ಯುರವರು ಡಿ ವೈ ಎಸ್ ಪಿ ಯಾಗಿ ಪದೋನ್ನತಿ ಹೊಂದಿದ್ದಾರೆ.

ಶಿರಸಿಯಲ್ಲಿ ನಡೆದ ಮಾರಿಕಾಂಬಾ ಜಾತ್ರೆ ಹಾಗೂ ಲಾಕ್ ಡೌನ್ ಸಮಯದಲ್ಲಿ ಉತ್ತಮ ವಾಗಿ ಕಾರ್ಯನಿರ್ವಹಿಸಿ ಜನಮನ್ನಣೆ ಗಳಿಸಿದ ಅಧಿಕಾರಿಯಾಗಿದ್ದ ಪ್ರದೀಪ ಅವರನ್ನು ಡಿಎಸ್ಪಿಯಾಗಿ ಬಡ್ತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

ಪ್ರದೀಪ ಜೊತೆಯಲ್ಲಿ ಸಿದ್ದಾಪುರ ಪಿಐ ಮಹೇಶ ಎನ್. ಹಾಗೂ ಜೋಯಿಡಾದ ಪಿಐ ಹುಲ್ಲಣ್ಣನವರ್ ಅವರಿಗೂ ಸಹ ಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ.

Leave a Reply

Your email address will not be published. Required fields are marked *