Saturday, 23rd November 2024

Navjot Singh Sidhu: ನಾಲ್ಕನೇ ಹಂತದ ಕ್ಯಾನ್ಸರ್‌ ವಿರುದ್ಧ ಸಿಕ್ಸರ್‌ ಸಿಧು ಪತ್ನಿಯ ಹೋರಾಟ ಹೇಗಿತ್ತು? ಡಯೆಟ್‌ನಲ್ಲಿ ಏನೇನಿತ್ತು?

Navjot Singh Sidhu

ನವದೆಹಲಿ: ಮಾಜಿ ಕ್ರಿಕೆಟರ್, ಸಂಸದ ನವಜೋತ್ ಸಿಂಗ್ ಸಿಧು (Navjot Singh Sidhu) ಅವರು ಇತ್ತೀಚೆಗೆ ತಮ್ಮ ಪತ್ನಿಯ ಆಹಾರ ಕ್ರಮದ ಬಗ್ಗೆ (strict diet) ಹಂಚಿಕೊಂಡಿದ್ದಾರೆ. ಅಲ್ಲದೇ ಈ ಕಟ್ಟುನಿಟ್ಟಿನ ಡಯೆಟ್‌ ಕಾರಣದಿಂದಲೇ ಅವರು ತಮ್ಮ ನಾಲ್ಕನೇ ಹಂತದ ಕ್ಯಾನ್ಸರ್ (stage 4 cancer) ಅನ್ನು ಸೋಲಿಸಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.

ಕಟ್ಟುನಿಟ್ಟಿನ ಆಹಾರ ಕ್ರಮದಿಂದಾಗಿ ನವಜೋತ್ ಸಿಂಗ್ ಸಿಧು ಅವರ ಪತ್ನಿಯು ನಾಲ್ಕನೇ ಹಂತದ ಕ್ಯಾನ್ಸರ್ ಅನ್ನು ಸೋಲಿಸಿದರು. ಅವರ ಆಹಾರ ಕ್ರಮ ಬೆಳಗ್ಗಿನ ನಿಂಬೆ ನೀರಿನಿಂದ ಪ್ರಾರಂಭವಾಗುತ್ತಿತ್ತು ಎಂದು ಸಿಧು ತಿಳಿಸಿದ್ದಾರೆ. ನವಜೋತ್ ಸಿಂಗ್ ಸಿಧು ಅವರು ಇತ್ತೀಚೆಗೆ ತಮ್ಮ ಪತ್ನಿ ನವಜೋತ್ ಕೌರ್ ಸಿಧು ಅವರು ಕ್ಯಾನ್ಸರ್‌ನಿಂದ ಮುಕ್ತರಾಗಿದ್ದಾರೆ ಎಂದು ಘೋಷಿಸಿದರು. ಚಿಕಿತ್ಸೆಯ ಸಮಯದಲ್ಲಿ ಅವರು ಕಟ್ಟುನಿಟ್ಟಾದ ಆಹಾರ ಕ್ರಮಕ್ಕೆ ಬದ್ಧರಾಗಿದ್ದರು ಎಂದು ಅವರು ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ನವಜೋತ್ ಸಿಂಗ್ ಸಿಧು, ತಮ್ಮ ಪತ್ನಿ, ಮಾಜಿ ಶಾಸಕಿ ನವಜೋತ್ ಕೌರ್ ಸಿಧು ಅವರು ಈಗ ಕ್ಯಾನ್ಸರ್‌ನಿಂದ ಮುಕ್ತರಾಗಿದ್ದಾರೆ ಎಂದು ತಿಳಿಸಿದರು. ಒಂದು ವರ್ಷದಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಅವರು ಬದುಕುಳಿಯಲು ಇದ್ದದ್ದು ಕೇವಲ ಶೇ. 3ರಷ್ಟು ಅವಕಾಶ ಮಾತ್ರ. ಆದರೂ ಅವರು ಹೋರಾಡಿ 4ನೇ ಹಂತದ ಕ್ಯಾನ್ಸರ್ ಅನ್ನು ಜಯಿಸಿದ್ದಾರೆ ಎಂದು ಬಹಿರಂಗಪಡಿಸಿದರು.

Navjot Singh Sidhu

ಚಿಕಿತ್ಸೆಯ ಸಮಯದಲ್ಲಿ ಅವರು ಅನುಸರಿಸಿದ ಕಟ್ಟುನಿಟ್ಟಾದ ಆಹಾರಕ್ರಮದ ಕುರಿತು ಹೇಳಿಕೊಂಡಿರುವ ಅವರು ಇದು ಕೌರ್ ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡಿದೆ ಎಂದು ತಿಳಿಸಿದರು.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕೌರ್ ತಮ್ಮ ದೈನಂದಿನ ಆಹಾರಕ್ರಮದಲ್ಲಿ ಹಸಿ ಅರಿಶಿನ, ಆಪಲ್ ಸೈಡರ್ ವಿನೆಗರ್ ಅನ್ನು ಸೇರಿಸುತ್ತಿದ್ದರು. ಜೊತೆಗೆ ನಿಂಬೆ ನೀರನ್ನು ಕುಡಿಯುತ್ತಿದ್ದರು. ಅರ್ಧ ಗಂಟೆಯ ಅನಂತರ 10- 12 ಬೇವಿನ ಸೊಪ್ಪು ಮತ್ತು ತುಳಸಿಯನ್ನು ಸೇವಿಸುತ್ತಿದ್ದರು. ಕುಂಬಳಕಾಯಿ, ದಾಳಿಂಬೆ, ಕ್ಯಾರೆಟ್, ಆಮ್ಲಾ, ಬೀಟ್‌ರೂಟ್ ಮತ್ತು ವಾಲ್‌ನಟ್‌ಗಳಿಂದ ತಯಾರಿಸಿದ ಹುಳಿ ಹಣ್ಣುಗಳು ಮತ್ತು ಜ್ಯೂಸ್‌ಗಳು ಅವರ ಆಹಾರದ ಅವಿಭಾಜ್ಯ ಅಂಗವಾಗಿತ್ತು. ಕ್ಯಾನ್ಸರ್ ಗೆ ಬಲವಾದ ಔಷಧ ಎಂದು ಕರೆಯಲಾಗುವ ಬೆರ್ರಿಗಳನ್ನು ಸೇವಿಸುತ್ತಿದ್ದರು.

ಸಂಜೆಯ ಆಹಾರದಲ್ಲಿ ಅಕ್ಕಿ ಮತ್ತು ರೊಟ್ಟಿಯನ್ನು ಬಿಟ್ಟು ಕ್ವಿನೋವಾಕ್ಕೆ ಆದ್ಯತೆ ನೀಡಿದ್ದರು. ಬೆಳಗಿನ ಚಹಾದಲ್ಲಿ ದಾಲ್ಚಿನ್ನಿ, ಕರಿಮೆಣಸು, ಲವಂಗ, ಬೆಲ್ಲ ಮತ್ತು ಏಲಕ್ಕಿಯಂತಹ ಮಸಾಲೆಗಳನ್ನು ಸೇರಿಸುತ್ತಿದ್ದರು. ಹೆಚ್ಚುವರಿಯಾಗಿ ಅವರು ಉರಿಯೂತ ಮತ್ತು ಕ್ಯಾನ್ಸರ್ ವಿರೋಧಿ ಆಹಾರಗಳನ್ನು ಸೇವಿಸಿದರು. ಅಡುಗೆಯಲ್ಲಿ ತೆಂಗಿನ ಎಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ಮಾತ್ರ ಬಳಸುತ್ತಿದ್ದರು. ಇನ್ನು ಕುಡಿಯುವ ನೀರಿನ ಗುಣಮಟ್ಟವನ್ನು ಕಾಪಾಡಿಕೊಂಡಿದ್ದರು. ಇದು ಅವರ ಆಹಾರದ ಪ್ರಮುಖ ಭಾಗವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಶಿಸ್ತು ಮತ್ತು ಕಟ್ಟುನಿಟ್ಟಾದ ದಿನಚರಿಯನ್ನು ಅನುಸರಿಸಿದ್ದರಿಂದ ಅವರು ಕ್ಯಾನ್ಸರ್ ಅನ್ನು ಸೋಲಿಸಿದರು. ತಮ್ಮ ಪತ್ನಿಯ ಚಿಕಿತ್ಸೆಗೆ ಕೆಲವೇ ಕೆಲವು ಲಕ್ಷಗಳನ್ನು ಮಾತ್ರ ಖರ್ಚು ಮಾಡಿರುವುದಾಗಿ ಸಿಧು ಹೇಳಿದ್ದಾರೆ.ಪಟಿಯಾಲಾದ ಸರ್ಕಾರಿ ರಾಜೇಂದ್ರ ವೈದ್ಯಕೀಯ ಕಾಲೇಜು ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಅವರು ಹೆಚ್ಚಿನ ಚಿಕಿತ್ಸೆಯನ್ನು ಪಡೆದರು. ಹೆಚ್ಚುವರಿಯಾಗಿ ವೈದ್ಯರು ಅವರಿಗೆ ಸ್ವಲ್ಪ ಭರವಸೆ ನೀಡಿದ್ದರು. ಮಗನ ಮದುವೆಯ ಬಳಿಕ ಕ್ಯಾನ್ಸರ್ ಮತ್ತೆ ಕಾಣಿಸಿಕೊಂಡಿತ್ತು. ಬದುಕುಳಿಯುವಿಕೆಯ ಬಗ್ಗೆ ಅವರಲ್ಲಿ ಅನುಮಾನವಿತ್ತು. ಆದರೆ ಎಂದಿಗೂ ಭರವಸೆ ಕಳೆದುಕೊಳ್ಳಲಿಲ್ಲ. ಕ್ಯಾನ್ಸರ್ ಅನ್ನು ಧೈರ್ಯದಿಂದ ಎದುರಿಸಿದರು ಎಂದು ತಿಳಿಸಿದರು.

Winter Season Care: ವಿಂಟರ್‌ ಬ್ಲೂ; ಚಳಿಗಾಲದ ಜಡತೆಯನ್ನು ಕಳೆಯುವುದು ಹೇಗೆ?

ಕ್ಯಾನ್ಸರ್ ಜೊತೆಗಿನ ತಮ್ಮ ಕುಟುಂಬದ ಹೋರಾಟವು ಇತರರಿಗೆ ಸ್ಫೂರ್ತಿಯಾಗಲಿ ಎಂದು ಹಾರೈಸಿದ ಅವರು, ಶಿಸ್ತು, ಧೈರ್ಯ ಮತ್ತು ಆರೋಗ್ಯಕರ ಜೀವನಶೈಲಿಯಿಂದ ಕ್ಯಾನ್ಸರ್ ಅನ್ನು ಸೋಲಿಸಬಹುದು ಎಂದು ಹೇಳಿಕೊಂಡಿದ್ದಾರೆ.