ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming: ಅತಿಯಾದ ಕೆಲಸದ ಒತ್ತಡ ; ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಬ್ಯಾಂಕ್‌ ಮ್ಯಾನೇಜರ್

ಕೆಲಸದ ಒತ್ತಡದಿಂದ ( Work Pressure) ಬೇಸತ್ತು ಬ್ಯಾಂಕ್ ಮ್ಯಾನೇಜರ್ ಒಬ್ಬರು ಆತ್ಮಹತ್ಯೆಗೆ (Self Harming) ಶರಣಾದ ಘಟನೆ ಪುಣೆಯಲ್ಲಿ (Pune) ನಡೆದಿದೆ. ಶಿವಶಂಕರ್ ಮಿತ್ರ (40) ಆತ್ಮಹತ್ಯೆಗೆ ಶರಣಾದ ಬ್ಯಾಂಕ್ ಮ್ಯಾನೇಜರ್ (Bank Manager). ಮಹಾರಾಷ್ಟ್ರದ (Maharastra) ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ( Baramati) ರಾಷ್ಟ್ರೀಕೃತ ಬ್ಯಾಂಕಿನ ಹಿರಿಯ ಅಧಿಕಾರಿಯಾಗಿದ್ದ ಶಿವಶಂಕರ್ ಗುರುವಾರ ತಡರಾತ್ರಿ ಬ್ಯಾಂಕ್ ಆವರಣದಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಬ್ಯಾಂಕ್‌ ಮ್ಯಾನೇಜರ್‌

ಪುಣೆ: ಕೆಲಸದ ಒತ್ತಡದಿಂದ ( Work Pressure) ಬೇಸತ್ತು ಬ್ಯಾಂಕ್ ಮ್ಯಾನೇಜರ್ ಒಬ್ಬರು ಆತ್ಮಹತ್ಯೆಗೆ (Self Harming) ಶರಣಾದ ಘಟನೆ ಪುಣೆಯಲ್ಲಿ (Pune) ನಡೆದಿದೆ. ಶಿವಶಂಕರ್ ಮಿತ್ರ (40) ಆತ್ಮಹತ್ಯೆಗೆ ಶರಣಾದ ಬ್ಯಾಂಕ್ ಮ್ಯಾನೇಜರ್ (Bank Manager). ಮಹಾರಾಷ್ಟ್ರದ (Maharastra) ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ( Baramati) ರಾಷ್ಟ್ರೀಕೃತ ಬ್ಯಾಂಕಿನ ಹಿರಿಯ ಅಧಿಕಾರಿಯಾಗಿದ್ದ ಶಿವಶಂಕರ್ ಗುರುವಾರ ತಡರಾತ್ರಿ ಬ್ಯಾಂಕ್ ಆವರಣದಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಆತ್ಮಹತ್ಯೆ (Self Harming) ಮಾಡಿಕೊಂಡ ಸ್ಥಳದಲ್ಲಿ ಒಂದು ಪತ್ರವು ಸಿಕ್ಕಿದ್ದು, ಇದರಲ್ಲಿ ಕೆಲಸದ ಒತ್ತಡದ ಬಗ್ಗೆಯೂ ಉಲ್ಲೇಖಿಸಿದ್ದಾರೆ ಎಂದು ಬಾರಾಮತಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪುಣೆ ಜಿಲ್ಲೆಯ ಬಾರಾಮತಿಯ ರಾಷ್ಟ್ರೀಕೃತ ಬ್ಯಾಂಕಿನ ಹಿರಿಯ ಅಧಿಕಾರಿಯಾಗಿದ್ದ ಶಿವಶಂಕರ್ ಕೆಲಸದ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುಮಾರು 40ರ ವರ್ಷದವರಾದ ಶಿವಶಂಕರ್ ಮಿತ್ರ ಗುರುವಾರ ತಡರಾತ್ರಿಯೇ ಬ್ಯಾಂಕ್ ಆವರಣದಲ್ಲಿ ನೇಣು ಬಿಗಿದುಕೊಂಡಿದ್ದಾರೆ.

ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಶಿವಶಂಕರ್ ಕೆಲಸದ ಹೊರೆಯನ್ನು ಉಲ್ಲೇಖಿಸಿ ಜುಲೈ 11ರಂದು ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ಅವರು ನೋಟಿಸ್ ಅವಧಿಯನ್ನು ಪೂರೈಸುತ್ತಿದ್ದರು ಎನ್ನಲಾಗಿದೆ.

ಬ್ಯಾಂಕಿಂಗ್ ಸಮಯದ ಅನಂತರ ಮಿತ್ರಾ ಅವರು ಬ್ಯಾಂಕ್ ಶಾಖೆಯನ್ನು ಮುಚ್ಚುವುದಾಗಿ ಹೇಳಿ ಎಲ್ಲಾ ಸಿಬ್ಬಂದಿಯನ್ನು ಮನೆಗೆ ಕಳುಹಿಸಿದ್ದರು. ಬ್ಯಾಂಕ್ ಭದ್ರತಾ ಸಿಬ್ಬಂದಿ ಕೂಡ ರಾತ್ರಿ 9.30ರ ಸುಮಾರಿಗೆ ಹೊರಟುಹೋಗಿದ್ದರು. ಬಳಿಕ ಅವರು ಈ ಹಿಂದೆಯೇ ಸಹೋದ್ಯೋಗಿ ಒಬ್ಬರಿಂದ ತರಿಸಿದ್ದ ಹಗ್ಗದಿಂದ ರಾತ್ರಿ 10 ಗಂಟೆ ಸುಮಾರಿಗೆ ನೇಣು ಬಿಗಿದುಕೊಂಡಿದ್ದಾರೆ. ಇದರ ದೃಶ್ಯವಾಳಿಗಳು ಬ್ಯಾಂಕಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮಿತ್ರ ಅವರು ಮನೆಗೆ ಬಾರದೆ ಇದ್ದುದರಿಂದ ಹಾಗೂ ಕರೆಗಳಿಗೆ ಉತ್ತರಿಸದೇ ಇದ್ದುದರಿಂದ ಅವರ ಪತ್ನಿ ಮಧ್ಯರಾತ್ರಿಯ ಸುಮಾರಿಗೆ ಬ್ಯಾಂಕ್ ಗೆ ಬಂದಿದ್ದಾರೆ. ಬ್ಯಾಂಕ್ ನ ದೀಪಗಳು ಉರಿಯುತ್ತಿರುವುದನ್ನು ನೋಡಿ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಅವರು ಬ್ಯಾಂಕ್ ಸಿಬ್ಬಂದಿಗೆ ಮಾಹಿತಿ ನೀಡಿದರು. ಸಿಬ್ಬಂದಿ ಬಂದು ಬ್ಯಾಂಕ್ ನ ಬೀಗ ತೆಗೆದು ಒಳಗೆ ಹೋದಾಗ ಮಿತ್ರ ಅವರು ಸೀಲಿಂಗ್‌ಗೆ ಫ್ಯಾನ್ ಗೆ ನೇಣು ಹಾಕಿರುವುದು ಕಂಡುಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳದಲ್ಲಿದ್ದ ಮಿತ್ರ ಅವರು ಇಟ್ಟಿದ್ದ ಪತ್ರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Joe Root: ದ್ರಾವಿಡ್‌, ಕ್ಯಾಲಿಸ್‌ ದಾಖಲೆ ಮುರಿಯಲು ರೂಟ್‌ಗೆ 31 ರನ್‌ ಅಗತ್ಯ

ಪತ್ರದಲ್ಲಿ ಅವರು ತಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಹೇಳಿದ್ದು, ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಮಿತ್ರ ಅವರ ಸಾವಿನ ಕುರಿತು ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.