ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಆಟವಾಡುತ್ತಿದ್ದ ಮಕ್ಕಳ ಮೇಲೆ ಕುದಿಯುವ ಎಣ್ಣೆ ಸುರಿದ ಕಿರಾತಕ: ಐವರಿಗೆ ಗಾಯ, ಇಬ್ಬರು ಗಂಭೀರ

ಆಟವಾಡುತ್ತಿದ್ದ ಮಕ್ಕಳ ಮೇಲೆ ವ್ಯಕ್ತಿಯೊಬ್ಬ ಕುದಿಯುವ ಎಣ್ಣೆ ಸುರಿದ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ. ಘಟನೆಯಲ್ಲಿ ಐವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಘಟನೆಯ ಬಳಿಕ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಆತನಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.

ಸಂಗ್ರಹ ಚಿತ್ರ

ಉತ್ತರ ಪ್ರದೇಶ: ಮಕ್ಕಳ (palying children) ಮೇಲೆ ದುಷ್ಕರ್ಮಿಯೊಬ್ಬ ಬಿಸಿ ಎಣ್ಣೆ (boiling oil) ಎರಚಿದ ಘಟನೆ ಉತ್ತರಪ್ರದೇಶದ (uttar pradesh) ಉನ್ನಾವೋದಲ್ಲಿ (Unnao) ನಡೆದಿದೆ. 100 ವರ್ಷ ವಯಸ್ಸಿನ ಹಿರಾಲಾಲ್ ಎಂಬವರು ಇತ್ತೀಚೆಗೆ ಸಾವನ್ನಪ್ಪಿದ್ದು, ಅವರ ಉತ್ತರ ಕ್ರಿಯೆ (Terahvi ceremony) ಸಮಾರಂಭ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಆರೋಪಿ ತಲೆ ಮರೆಸಿಕೊಂಡಿದ್ದು (abscond), ಪ್ರಕರಣ ದಾಖಲಿಸಿರುವ ಪೊಲೀಸರು (UP Police) ಆತನಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.

ಉನ್ನಾವೋದ ಹಸನ್‌ಪುರ್ ಡ್ರಾಗ್ಪಾಲ್ ಖೇಡಾ ಗ್ರಾಮದಲ್ಲಿ ಕಳೆದ ತಿಂಗಳಾಂತ್ಯದಲ್ಲಿ ಹಿರಾಲಾಲ್ ಎಂಬವರು ಸಾವನ್ನಪ್ಪಿದ್ದರು. ಅವರ ತೆರಾಹ್ವಿ ಅಂದರೆ 13ನೇ ದಿನದ ಸಮಾರಂಭ ನಡೆಯುತ್ತಿದ್ದಾಗ ಐವರು ಮಕ್ಕಳ ಮೇಲೆ ವ್ಯಕ್ತಿಯೊಬ್ಬ ಬಿಸಿ ಎಣ್ಣೆಯನ್ನು ಸುರಿದಿದ್ದಾನೆ. ಬಳಿಕ ತಲೆ ಮರೆಸಿಕೊಂಡಿದ್ದಾನೆ.

ಆಟವಾಡುವ ವೇಳೆ ನೀರಿನ ಸಂಪ್‌ಗೆ ಬಿದ್ದು ಎರಡೂವರೆ ವರ್ಷದ ಮಗು ಸಾವು

ಆರೋಪಿಯನ್ನು ವಿಶಾಲ್ ಎಂದು ಗುರುತಿಸಲಾಗಿದೆ. ವಿಶಾಲ್ ಮೇಲೆ ಹತ್ತಿರದಲ್ಲೇ ಆಟವಾಡುತ್ತಿದ್ದ ಕೆಲವು ಮಕ್ಕಳು ಆಕಸ್ಮಿಕವಾಗಿ ನೀರು ಸುರಿದಿದ್ದಾರೆ. ಇದರಿಂದ ಕೋಪಗೊಂಡ ವಿಶಾಲ್ ಹತ್ತಿರದಲ್ಲೇ ಇದ್ದ ಕುದಿಯುವ ಎಣ್ಣೆಯ ಪ್ಯಾನ್ ಅನ್ನು ತೆಗೆದುಕೊಂಡು ಮಕ್ಕಳ ಮೇಲೆ ಎಸೆದಿದ್ದಾನೆ. ಬಿಸಿ ಎಣ್ಣೆ ಬಿದ್ದು ಐವರು ಮಕ್ಕಳಿಗೆ ಗಂಭೀರ ಗಾಯವಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಮಕ್ಕಳ ಕಿರುಚಾಟ ಕೇಳಿ ಓಡಿ ಬಂದ ಸ್ಥಳೀಯರು ಮಕ್ಕಳನ್ನು ಕೂಡಲೇ ಉನ್ನಾವೊದಿಂದ ಸುಮಾರು 65 ಕಿ.ಮೀ ದೂರದಲ್ಲಿರುವ ಲಕ್ನೋದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾರೆ. ಗಾಯಗೊಂಡ ಮಕ್ಕಳನ್ನು ಸುಧೀರ್ (14), ರೌನಕ್ (11), ಸುಮಿತ್ (14), ಶ್ಯಾಂಬಾಬು (10) ಮತ್ತು ಮನೋಜ್ (12) ಎಂದು ಗುರುತಿಸಲಾಗಿದೆ. ಸುಧೀರ್ ಮತ್ತು ಮನೋಜ್ ಸ್ಥಿತಿ ಗಂಭೀರವಾಗಿದೆ ಎಂದು ಗ್ರಾಮದ ಮುಖ್ಯಸ್ಥ ಬಾಲ್ಮಿಕಿ ತಿಳಿಸಿದ್ದಾರೆ.

ಕುಡಿದ ಮತ್ತಿನಲ್ಲಿ ಅಣ್ಣ, ತಂಗಿಯನ್ನೇ ಬರ್ಬರ ಹತ್ಯೆ ಮಾಡಿದ ವ್ಯಕ್ತಿ!

ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿದ್ದು, ಪರಾರಿಯಾಗಿರುವ ವಿಶಾಲ್ ನನ್ನು ಹುಡುಕಲಾಗುತ್ತಿದೆ. ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಬೇಹುಗಾರಿಕೆ: ನೌಕಾಪಡೆ ಸಿಬ್ಬಂದಿ ಬಂಧನ

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಭಾರತೀಯ ನೌಕಾಪಡೆಯ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಶಂಕಿತ ಬೇಹುಗಾರಿಕೆ ಚಟುವಟಿಕೆಗಳ ಬಗ್ಗೆ ಗುಪ್ತಚರ ಮಾಹಿತಿಯ ನಂತರ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಬಂಧಿಸಿದೆ.

ಆರೋಪಿಯನ್ನು ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಕಾಗರೋಲ್ ನಿವಾಸಿ ಲಕ್ಕಿ ಅಲಿಯಾಸ್ ಆದರ್ಶ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ಕೇರಳದ ಕೊಚ್ಚಿಯಲ್ಲಿರುವ ಭಾರತೀಯ ನೌಕಾಪಡೆಯ ದಕ್ಷಿಣ ಕಮಾಂಡ್ ನೆಲೆಯಲ್ಲಿ ನಿಯೋಜನೆಗೊಂಡಿದ್ದನು. ಕುಮಾರ್ ನೌಕಾಪಡೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್‌ನೊಂದಿಗೆ ಸಂಪರ್ಕ ಹೊಂದಿರುವವರಿಗೆ ರವಾನಿಸುತ್ತಿದ್ದನು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author