ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nithari Murder Case: ನಿಥಾರಿ ಹತ್ಯೆ ಪ್ರಕರಣದ ಆರೋಪಿ ಖುಲಾಸೆ; ಸಂತ್ರಸ್ತ ಕುಟುಂಬದ ಗೋಳಾಟ ಕೇಳೋರಿಲ್ಲ!

ನೋಯ್ಡಾದ ನಿಥಾರಿ ಗ್ರಾಮದಲ್ಲಿ 2006ರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಆರೋಪಿಯನ್ನು ಖುಲಾಸೆಗೊಳಿಸಿದೆ. ಇದರಿಂದ ದುಃಖಿತರಾಗಿರುವ ಕುಟುಂಬ ತಮ್ಮ ಮಗಳನ್ನು ಸುರೇಂದ್ರ ಕೋಲಿ ಕೊಲೆ ಮಾಡಿಲ್ಲ ಎಂದಾದರೆ ಬೇರೆ ಯಾರು ಮಾಡಿದ್ದಾರೆ ಎಂದು ಪ್ರಶ್ನಿಸಿದೆ. ನಮಗೆ ದೇವರ ಮೇಲೆ ವಿಶ್ವಾಸವಿದೆ. ಒಂದಲ್ಲ ಒಂದು ದಿನ ದೇವರು ಇದರ ನ್ಯಾಯ ಮಾಡುತ್ತಾರೆ ಎಂದು ಹೇಳಿದೆ.

ನಿಥಾರಿ ಹತ್ಯೆ ಪ್ರಕರಣ ಆರೋಪಿ ಖುಲಾಸೆ

ನಿಥಾರಿ ಹತ್ಯೆ ಪ್ರಕರಣದ ಆರೋಪಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಖುಲಾಸೆಗೊಳಿಸಿದೆ. (ಸಂಗ್ರಹ ಚಿತ್ರ) -

ನೋಯ್ಡಾ: ನಿಥಾರಿ ಹತ್ಯೆ ಪ್ರಕರಣಕ್ಕೆ (Nithari murder case) ಸಂಬಂಧಿಸಿ ಸುಪ್ರೀಂ ಕೋರ್ಟ್ (Supreme Court) ತೀರ್ಪಿನ ಬಳಿಕ ನಿರಾಶರಾಗಿರುವ ಝಬ್ಬು ಲಾಲ್ ಮತ್ತು ಸುನೀತಾ ದಂಪತಿ ತಮ್ಮ ಮಗಳ ಹತ್ಯೆಯ ತೀರ್ಪನ್ನು ದೇವರು ನೀಡುತ್ತಾನೆ. ನಮಗೆ ದೇವರ ಮೇಲೆ ವಿಶ್ವಾಸವಿದೆ. ಖಂಡಿತಾ ಒಂದಲ್ಲ ಒಂದು ದಿನ ದೇವರು ಇದರ ನ್ಯಾಯ ಮಾಡುತ್ತಾರೆ ಎಂದು ಹೇಳಿದ್ದಾರೆ. 2006ರಲ್ಲಿ ತಮ್ಮ ಮಗಳು ಜ್ಯೋತಿಯನ್ನು ಕಳೆದುಕೊಂಡ ಝಬ್ಬು ಲಾಲ್ ದಂಪತಿ ಬಳಿಕ ನ್ಯಾಯಕ್ಕಾಗಿ ಹೋರಾಡುತ್ತಲೇ ಇದ್ದು, ತಮ್ಮ ಮಗಳನ್ನು ಸುರೇಂದ್ರ ಕೋಲಿ ಕೊಲೆ (Murder case) ಮಾಡಿಲ್ಲ ಎಂದಾದರೆ ಬೇರೆ ಯಾರು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಮಗಳು ಜ್ಯೋತಿಗೆ ನ್ಯಾಯ ಕೊಡಿಸಲು ಕಳೆದ ಒಂಬತ್ತು ವರ್ಷಗಳಿಂದ ಹೋರಾಡುತ್ತಿರುವ 63 ವರ್ಷದ ಜಬ್ಬು ಲಾಲ್ ಮತ್ತು ಅವರ ಪತ್ನಿ 60 ವರ್ಷದ ಸುನೀತಾ ಮೂಲತಃ ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯವರು. ನಾಲ್ಕು ದಶಕಗಳ ಹಿಂದೆ ದಂಪತಿ ಕೆಲಸ ಹುಡುಕಿಕೊಂಡು ದೆಹಲಿಯ ನಿಥಾರಿ ಗ್ರಾಮಕ್ಕೆ ವಲಸೆ ಬಂದಿದ್ದರು.

ಇದನ್ನೂ ಓದಿ: Meghana Raj: ಜೈಲರ್ 2 ಸಿನಿಮಾದಲ್ಲಿ ನಟಿ ಮೇಘನಾ ರಾಜ್‌? ತಮಿಳು ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟ ನಟಿ!

ಬಟ್ಟೆ ಇಸ್ತ್ರಿ ಮಾಡುವ ಮೂಲಕ ಜೀವನೋಪಾಯವನ್ನು ಕಂಡುಕೊಂಡಿದ್ದ ಲಾಲ್, ನನಗೆ ಆರು ಮಕ್ಕಳಿದ್ದು, ಅವರಲ್ಲಿ ಐದನೆಯವಳು ಜ್ಯೋತಿ. 2006ರಲ್ಲಿ ಆಕೆ ಕಾಣೆಯಾಗಿದ್ದು, ಆಕೆಯ ಶವ ಸುರೇಂದ್ರ ಕೋಲಿ ಕೆಲಸ ಮಾಡುತ್ತಿದ್ದ ಬಂಗಲೆ ಸಂಖ್ಯೆ ಡಿ5ರ ಹೊರಗಿನ ಚರಂಡಿಯಲ್ಲಿ ಪತ್ತೆಯಾಗಿತ್ತು. ಈ ಬಂಗಲೆ ಮೊನಿಂದರ್ ಪಂಧೇರ್ ಎಂಬವರಿಗೆ ಸೇರಿದ್ದಾಗಿದೆ.

ಜ್ಯೋತಿ ಕೊಲೆ ಪ್ರಕರಣದ ತನಿಖೆ ವೇಳೆ ಬಂಗಲೆಯ ಪಕ್ಕದಲ್ಲಿರುವ ಚರಂಡಿಯಲ್ಲಿ ಹಲವಾರು ಮಕ್ಕಳ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದವು.

ಜ್ಯೋತಿ ಕೊಲೆಯಾದ ಬಳಿಕ ಲಾಲ್ ಅವರು ನಿರಂತರವಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಇದಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದಾರೆ. ದೆಹಲಿಯ ಸಂಗಮ್ ವಿಹಾರ್‌ನಲ್ಲಿರುವ ಬೆಲೆಬಾಳುವ ವಸ್ತುಗಳು, ಮನೆಯನ್ನು ಕೂಡ ಮಾರಾಟ ಮಾಡಿರುವುದಾಗಿ ಅವರು ಹೇಳಿದ್ದಾರೆ.

ಸುರೇಂದ್ರ ಕೋಲಿ ವಿರುದ್ಧದ 13 ನೇ ಮತ್ತು ಅಂತಿಮ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅವರನ್ನು ಖುಲಾಸೆಗೊಳಿಸಿರುವುದರಿಂದ ನಿರಾಶೆಗೊಂಡ ಜ್ಯೋತಿ ಕುಟುಂಬ, ಅವರು ಅಪರಾಧ ಮಾಡಿಲ್ಲ ಎಂದಾದರೆ ಬೇರೆ ಯಾರು ಮಾಡಿದ್ದಾರೆ?, ಅವರನ್ನು ಇಷ್ಟು ವರ್ಷಗಳ ಕಾಲ ಜೈಲಿನಲ್ಲಿ ಏಕೆ ಇರಿಸಲಾಗಿತ್ತು ಎಂದು ಪ್ರಶ್ನಿಸಿದ್ದಾರೆ.

ಮಗಳು ಸಾವನ್ನಪ್ಪಿ ಇಷ್ಟು ವರ್ಷಗಳಾದರೂ ನೋವು ಮಾಸಿಲ್ಲ. ಆ ಬಂಗಲೆಯನ್ನು ನಾವು ಹಾದು ಹೋಗುವಾಗ ನಮ್ಮ ಪ್ರಪಂಚವೇ ಕೊನೆಗೊಂಡ ಸ್ಥಳದಲ್ಲಿ ನಿಂತಿದ್ದೇವೆ ಎಂಬಂತೆ ಭಾಸವಾಗುತ್ತದೆ. ನಮಗೆ ನಮ್ಮ ಮಗು ಎಂದಿಗೂ ಹಿಂದಿರುಗುವುದಿಲ್ಲ. ಆದರೆ ನೆನಪುಗಳು ಮತ್ತು ನ್ಯಾಯಕ್ಕಾಗಿ ಜೀವನ ಪೂರ್ತಿ ಕಾಯುತ್ತೇವೆ ಎಂದರು.

ಸದ್ಯ ತಾತ್ಕಾಲಿಕ ಗುಡಿಸಲಿನಲ್ಲಿ ವಾಸವಾಗಿರುವ ಕುಟುಂಬ ಇನ್ನು ಕೂಡ ಬಟ್ಟೆಗಳನ್ನು ಇಸ್ತ್ರಿ ಮಾಡುವ ಕೆಲಸದಿಂದ ಜೀವನ ಸಾಗಿಸುತ್ತಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪು ಏನು ಹೇಳಿದೆ?

2005-2006ರಲ್ಲಿ ನಡೆದ ಕುಖ್ಯಾತ ನಿಥಾರಿ ಹತ್ಯೆಗಳಿಗೆ ಸಂಬಂಧಿಸಿದ ಕೊನೆಯ ಕೊಲೆ ಪ್ರಕರಣದಲ್ಲಿ ಸುರೇಂದ್ರ ಕೋಲಿ ವಿರುದ್ಧ ಆರೋಪಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಅರ್ಜಿದಾರರನ್ನು ಆರೋಪಗಳಿಂದ ಮುಕ್ತಗೊಳಿಸಲಾಗಿದೆ. ಅರ್ಜಿದಾರರನ್ನು ತಕ್ಷಣವೇ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರ ಪೀಠ ಈ ಆದೇಶವನ್ನು ನೀಡಿದೆ. ಈ ಪ್ರಕರಣವು 2024ರಲ್ಲಿ 'ಸೆಕ್ಟರ್ 36' ಹಿಂದಿ ಚಲನಚಿತ್ರವಾಗಿ ತೆರೆಗೆ ಬಂದಿದೆ.

15 ವರ್ಷದ ಬಾಲಕಿ ಜ್ಯೋತಿಯ ಹತ್ಯೆವಿಚಾರದಲ್ಲಿ ಕೋಲಿಗೆ ವಿಧಿಸಿರುವ ಶಿಕ್ಷೆಯು ಕೇವಲ ಹೇಳಿಕೆ ಮತ್ತು ಅಡುಗೆ ಚಾಕುವನ್ನು ವಶಪಡಿಸಿಕೊಂಡ ಆಧಾರದ ಮೇಲೆ ನಡೆದಿದೆ. ನಿಥಾರಿ ಹತ್ಯೆಗಳ ತನಿಖೆಯಲ್ಲಿ ವಿಫಲತೆಯಾಗಿರುವುದನ್ನು ಗಮನಿಸಿರುವ ಸುಪ್ರೀಂ ಕೋರ್ಟ್, ಪೋಲೀಸರ ನಿರ್ಲಕ್ಷ್ಯ, ಕಾರ್ಯವಿಧಾನಗಳಲ್ಲಿ ಆಗಿರುವ ಲೋಪ ಮತ್ತು ವಿಳಂಬದಿಂದ ಸಾಕ್ಷಿಗಳು ನಾಶವಾಗಿರಬಹುದು. ದೀರ್ಘಾವಧಿಯ ತನಿಖೆಯ ಹೊರತಾಗಿಯೂ ಅಪರಾಧಿಯನ್ನು ಪತ್ತೆ ಮಾಡಲು ಸಾಧ್ಯವಾಗದೇ ಇರುವುದಕ್ಕೆ ನ್ಯಾಯಾಲಯ ತೀವ್ರ ವಿಷಾದ ವ್ಯಕ್ತಪಡಿಸಿದೆ.

ಇದನ್ನೂ ಓದಿ: Gaddappa Channe Gowda Death: 'ತಿಥಿ' ಸಿನಿಮಾ ಖ್ಯಾತಿಯ 'ಗಡ್ಡಪ್ಪ' ಇನ್ನಿಲ್ಲ

ಏನಾಗಿತ್ತು?

ದೇಶವನ್ನೇ ಬೆಚ್ಚಿ ಬೀಳಿಸಿದ್ದ ಅಪರಾಧಗಳಲ್ಲಿ ಒಂದಾಗಿರುವ ನಿಥಾರಿ ಹತ್ಯೆ ಪ್ರಕರಣ 2006ರ ಡಿಸೆಂಬರ್ ನಲ್ಲಿ ಬೆಳಕಿಗೆ ಬಂದಿತ್ತು. ನೋಯ್ಡಾದ ನಿಥಾರಿ ಪ್ರದೇಶದ ಉದ್ಯಮಿ ಮೋನಿಂದರ್ ಸಿಂಗ್ ಪಂಧೇರ್ ಅವರ ಬಂಗಲೆ ಬಳಿಕ ಚರಂಡಿಯಲ್ಲಿ ಹಲವಾರು ಮಕ್ಕಳ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದವು. ಪ್ರಕರಣದ ಆರೋಪಿಗಳಾಗಿ ಅವರ ಮನೆ ಕೆಲಸಗಾರರಾದ ಪಂಧೇರ್ ಮತ್ತು ಸುರೇಂದ್ರ ಕೋಲಿ ಅವರನ್ನು ಬಂಧಿಸಲಾಗಿತ್ತು.

ಜ್ಯೋತಿಯ ಕೊಲೆಗೆ ಸಂಬಂಧಿಸಿ ಅಲಹಾಬಾದ್ ಹೈಕೋರ್ಟ್ ಸುರೇಂದ್ರ ಕೋಲಿಯನ್ನು ತಪ್ಪಿತಸ್ಥನೆಂದು ಘೋಷಿಸಿದ್ದು, ಪಂಧೇರ್ ನನ್ನು ಖುಲಾಸೆಗೊಳಿಸಿತ್ತು. ಇದರ ವಿರುದ್ಧ ಕೋಲಿ ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು 2011 ರಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಅನಂತರ 2014 ರಲ್ಲಿ ಕೋಲಿ ಸಲ್ಲಿಸಿದ ಪುನರ್ ಪರಿಶೀಲನಾ ಅರ್ಜಿಯನ್ನು ಸಹ ತಿರಸ್ಕರಿಸಲಾಗಿತ್ತು. 2015 ರಲ್ಲಿ ಕೋಲಿಯ ಕ್ಷಮಾದಾನ ಅರ್ಜಿಯನ್ನು ಹೈಕೋರ್ಟ್ ಜೀವಾವಧಿ ಶಿಕ್ಷೆಯಾಗಿ ಇಳಿಸಿ ತೀರ್ಪು ನೀಡಿತ್ತು. ಸಿಬಿಐ ಮತ್ತು ಸಂತ್ರಸ್ತ ಕುಟುಂಬವು ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ 14 ಮೇಲ್ಮನವಿ ಅರ್ಜಿ ಸಲ್ಲಿಸಿದ್ದು ಇದನ್ನು ಕೂಡ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.