Wednesday, 11th December 2024

Physical Abuse: ಹಾಸ್ಟೆಲ್‌ನಲ್ಲೇ ಮಗುವನ್ನು ಹೆತ್ತು ಕಿಟಿಕಿಯಿಂದ ಹೊರಗೆಸೆದ ಬಾಲಕಿ

Physical Abuse

ಹೈದರಾಬಾದ್‌: ಎರಡನೇ ವರ್ಷದ ಇಂಟರ್ಮೀಡಿಯೆಟ್ ವಿದ್ಯಾರ್ಥಿನಿಯಾಗಿರುವ ಆಂಧ್ರಪ್ರದೇಶದ ನಂದ್ಯಾಲ್‍ನ ಹದಿಹರೆಯದ ಬಾಲಕಿಯೊಬ್ಬಳು ಹಾಸ್ಟೆಲ್‍ನಲ್ಲಿ ಗರ್ಭಿಣಿಯಾಗಿ ನಂತರ  ಮಗುವಿಗೆ ಜನ್ಮ ನೀಡಿ ಆ ಮಗುವನ್ನು ಕಿಟಕಿಯಿಂದ ಹೊರಗೆ ಎಸೆದಿದ್ದಾಳೆ. ಇತ್ತೀಚೆಗೆ  ಮುಂಜಾನೆ ಬಾಲಕಿಯೊಬ್ಬಳು ನವಜಾತ(Physical Abuse) ಶಿಶುವನ್ನು ಕಿಟಕಿಯಿಂದ ಹೊರಗೆ ಎಸೆಯುತ್ತಿರುವುದನ್ನು ಪಕ್ಕದ ಅಪಾರ್ಟ್ಮೆಂಟ್ ಕಟ್ಟಡದ ನೆರೆಹೊರೆಯವರು ನೋಡಿ ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಹಾಗೂ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಸ್ಟೆಲ್ ಹಿಂಭಾಗದಲ್ಲಿ ಮೃತ ಮಗುವನ್ನು ಪತ್ತೆ ಮಾಡಿದ್ದಾರೆ. ಅದರ ಮೇಲೆ ರಕ್ತದ ಕಲೆಗಳಿದ್ದವು ಮತ್ತು ಅದರ ಹೊಕ್ಕುಳಬಳ್ಳಿ ಇನ್ನೂ ಇತ್ತು ಎನ್ನಲಾಗಿದೆ.

ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ತನಿಖಾಧಿಕಾರಿಗಳು ಹಾಸ್ಟೆಲ್ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಹೆರಿಗೆಯ ನಂತರ, ಬಾಲಕಿ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಆಕೆಯನ್ನು ಚಿಕಿತ್ಸೆಗಾಗಿ ಸರ್ವಜನಿಕ ಆಸ್ಪತ್ರೆಗೆ ಕಳುಹಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ, ಮಗುವಿನ ದೇಹವನ್ನು ಆಸ್ಪತ್ರೆಯ ಶವಾಗಾರಕ್ಕೆ ಕರೆದೊಯ್ಯಲಾಯಿತು. ಇದಲ್ಲದೇ ಅಧಿಕಾರಿಗಳು ಪುರಾವೆಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡಗಳನ್ನು ಕಳುಹಿಸಿದ್ದಾರೆ ಮತ್ತು ಬಾಲಕಿಯ ಸ್ನೇಹಿತರು ಮತ್ತು ರೂಮೇಟ್‌ಗಳನ್ನು ಪ್ರಶ್ನಿಸಿದ್ದಾರೆ.

Physical Abuse

ಕಾನ್ವೆಂಟ್‍ನಲ್ಲಿ ಸನ್ಯಾಸಿನಿ ಆಗಲು ತರಬೇತಿ ಪಡೆಯುತ್ತಿದ್ದ ಬಾಲಕಿ, ತರಬೇತಿಯಲ್ಲಿರುವ ಕ್ರಿಶ್ಚಿಯನ್ ಫಾದರ್‌ನೊಂದಿಗೆ ಸಂಬಂಧ ಹೊಂದಿರಬಹುದು ಎಂದು ಪ್ರಾಥಮಿಕ ಸಂಶೋಧನೆಗಳು ತಿಳಿಸಿವೆ. ತರಬೇತಿ ನೀಡುತ್ತಿರುವ ಫಾದರ್‌ ಬಗ್ಗೆ ಕೆಲವು ದುರ್ವರ್ತನೆಯ ಆರೋಪಗಳು ಹೊರಬಂದ ನಂತರ ಆತನನ್ನು ವಿಚಾರಣೆಗಾಗಿ ಬಂಧಿಸಲಾಗಿದೆ.

ಈ ಘಟನೆಯಿಂದಾಗಿ  ಮಕ್ಕಳ ಮೇಲೆ ಸಾಕಷ್ಟು ನಿಗಾ ಇಡಲು ವಿಫಲವಾದ ಕಾರಣ ವಸತಿ ನಿಲಯದ ಆಡಳಿತ ಬಗ್ಗೆ ಭಾರಿ ಟೀಕೆಗೆ ಗುರಿಯಾಗಿದೆ. ಹುಡುಗಿಯ ದೈಹಿಕ ಬದಲಾವಣೆಗಳ ಹೊರತಾಗಿಯೂ, ಅವಳು ಗರ್ಭಿಣಿ ಎನ್ನುವುದು ಏಕೆ ತಿಳಿಯಲಿಲ್ಲ ಎಂಬ ಬಗ್ಗೆ ಪ್ರಶ್ನೆಗಳು ಮೂಡಿವೆ. ವರದಿಗಳ ಪ್ರಕಾರ, ಆಕೆಗೆ ಹೆರಿಗೆಗೆ ಸಹಾಯ ಮಾಡಿ ಈ ವಿಚಾರ ಅಧಿಕಾರಿಗಳಿಗೆ ತಿಳಿಸಲು ವಿಫಲವಾದ ಇತರ ವಸತಿ ನಿಲಯದ ಸಿಬ್ಬಂದಿಗಳನ್ನು ವಿಚಾರಣೆ ಮಾಡಲಾಗಿದೆ.  

ಈ ಸುದ್ದಿಯನ್ನೂ ಓದಿ:ಶವಪೆಟ್ಟಿಗೆಯೊಳಗಿದ್ದ ಮಹಿಳೆ ಒಮ್ಮೆಲೆ ಕಣ್ಣು ಬಿಟ್ಳು! ಬೆಚ್ಚಿಬಿದ್ದ ಜನ- ವಿಡಿಯೊ ವೈರಲ್

ಎಲೂರು ಡಯೋಸಿಸ್ ಆಂಧ್ರಪ್ರದೇಶದ ಎಲೂರಿನಲ್ಲಿರುವ ಸೇಂಟ್ ಜೋಸೆಫ್ ಕಾನ್ವೆಂಟ್‍ನ ಕಾರ್ಯಾಚರಣೆಗಳನ್ನು ಪೊಲೀಸರು ಮೇಲ್ವಿಚಾರಣೆ ಮಾಡಿದ್ದಾರೆ. ಯಾಕೆಂದರೆ ಇದು ಭಾರತದಲ್ಲಿ ಕ್ರಿಶ್ಚಿಯನ್ ಮಿಷನರಿ ಸಂಸ್ಥೆಗಳ ವ್ಯಾಪಕ ಜಾಲದ ಒಂದು ಭಾಗವಾಗಿದೆ. ಸಮುದಾಯ ಸೇವೆ, ಶಿಸ್ತು ಮತ್ತು ಆಧ್ಯಾತ್ಮಿಕ ಅಭಿವೃದ್ಧಿಗೆ ಬಲವಾದ ಒತ್ತು ನೀಡುವ ಮೂಲಕ ಕ್ರೈಸ್ತ ಸನ್ಯಾಸಿನಿಯರಾಗಿ ಸೇವೆಯ ಜೀವನಕ್ಕಾಗಿ ಯುವತಿಯರಿಗೆ ಶಿಕ್ಷಣ ನೀಡುವುದು ಮತ್ತು ಸಿದ್ಧಪಡಿಸುವುದು ಇದರ ಮುಖ್ಯ ಗುರಿಯಾಗಿದೆ.