Wednesday, 11th December 2024

Shocking News :500 ರೂಪಾಯಿ ಕದ್ದಿದ್ದಕ್ಕೆ 10 ವರ್ಷದ ಮಗನನ್ನು ಪೈಪ್‌ನಲ್ಲಿ ಹೊಡೆದು ಕೊಂದ ತಂದೆ

Shocking news

ಗಾಜಿಯಾಬಾದ್: ಮನೆಯಿಂದ 500 ರೂಪಾಯಿ ಕದ್ದ ತಪ್ಪಿಗೆ 10 ವರ್ಷದ ಮಗನನ್ನು ಪೈಪ್‌ನಿಂದ ಹೊಡೆದು ಕೊಂದ ಘಟನೆ ಗಾಜಿಯಾಬಾದ್ ನಲ್ಲಿ ನಡೆದಿದೆ. ಗಾಜಿಯಾಬಾದ್‌ನ ತ್ಯೋಡಿ ಗ್ರಾಮದಲ್ಲಿ 10 ವರ್ಷದ ಆದ್ ಮೃತಪಟ್ಟವ. ಆತನ ತಂದೆ ನೌಶಾದ್ ಕೊಲೆ ಆರೋಪಿ. ತಾಯಿ ಮೃತಪಟ್ಟ ಬಳಿಕ ಬಾಲಕ ಮಲತಾಯಿ ರಜಿಯಾ ಅವರೊಂದಿಗೆ ವಾಸಿಸುತ್ತಿದ್ದ. ಶನಿವಾರ ಬೆಳಿಗ್ಗೆ ದಂಪತಿ ಮನೆಯಲ್ಲಿ ಇಟ್ಟಿದ್ದ 500 ರೂಪಾಯಿ ಕಾಣುತ್ತಿಲ್ಲ ಎಂದು ಹುಡುಕಿದ್ದಾರೆ. ಈ ವೇಳೆ ಪುತ್ರ ಹಣವನ್ನು ಕದ್ದಿದ್ದಾನೆ ಎಂದು ಶಂಕಿಸಿ ಥಳಿಸಲು ಆರಂಭಿದ್ದರು.

ಒಂದು ಹಂತದಲ್ಲಿ ಕೋಪಗೊಂಡ ನೌಶಾದ್ ಪುತ್ರನ ಮೇಳೆ ಲೋಹದಿಂದ ಮಾಡಿದ ಒಲೆ ಊದುವ ಪೈಪ್‌ನಿಂದ ಹಲ್ಲೆ ಮಾಡಿದ್ದಾನೆ. ಒಂದು ಏಟು ತಲೆಗೆ ಬಿದ್ದು ಆತ ಮೂರ್ಛೆ ತಪ್ಪಿ ಬಿದ್ದಿದ್ದಾನೆ. ಆತನನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಘಟನೆ ಬಳಿಕ ಪೊಲೀಸರು ನೌಶಾದ್ ಮತ್ತು ರಜಿಯಾಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮನೆಯ ಪಕ್ಕದ ನಿವಾಸಿಯಾಗಿರುವ ರಾಹತ್ ಅಲಿ ಎಂಬುವರು ಮಾತನಾಡಿ ನೌಶಾದ್ ತನ್ನ ಮಗನನ್ನು ಪ್ರತಿ ದಿನವೂ ಹೊಡೆಯುತ್ತಿದ್ದ. ಮನೆಯಿಂದ 500 ರೂ ಕಾಣೆಯಾಗಿದ್ದಕ್ಕೆ ನಿರಂತರವಾಗಿ ಹೊಡೆದಿದ್ದಾನೆ. ಏಟಿನ ಪ್ರಹಾರಕ್ಕೆ ಹುಡುಗ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Pralhad Joshi: ಯಾವ ಕಾಲಕ್ಕೂ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಪ್ರಲ್ಹಾದ್‌ ಜೋಶಿ

ಮೃತ ಬಾಲಕ ಆದ್‌ನ ಅಜ್ಜಿ ಪೊಲೀಸ್ ದೂರು ದಾಖಲಿಸಿದ್ದಾರೆ ಎಂದು ಗಾಜಿಯಾಬಾದ್ ಸಹಾಯಕ ಪೊಲೀಸ್ ಆಯುಕ್ತ ಗ್ಯಾನ್ ಪ್ರಕಾಶ್ ರೈ ತಿಳಿಸಿದ್ದಾರೆ.

ದಂಪತಿ ಮಗನ ಮೇಲೆ ಆಗಾಗ ಥಳಿಸುತ್ತಿದ್ದ. ಶನಿವಾರದ ಹೊಡೆಯುವ ಪ್ರಮಾಣ ಮಿತಿಮೀರಿತ್ತು. ನೌಶಾದ್ ಮತ್ತು ರಜಿಯಾ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.