ಅಮೃತಸರ: ಕೆಲವರು ಅಪಾಯದ ಸೂಚನೆ ಸಿಕ್ಕಾಗ ಅಸಾಧಾರಣ ಧೈರ್ಯ ಮತ್ತು ಶಕ್ತಿ ಪ್ರದರ್ಶಿಸುತ್ತಾರೆ. ಪಂಜಾಬ್ನ ಮಹಿಳೆಯೊಬ್ಬರು ಇದಕ್ಕೆ ಉತ್ತಮ ಉದಾಹರಣೆ, ತಮ್ಮ ಮನೆಯನ್ನು ದರೋಡೆ ಮಾಡಲು ಬಂದ ಮೂವರು ದರೋಡೆಕೋರರನ ಜೊತೆ ಏಕಾಂಗಿಯಾಗಿ ಹೋರಾಡಿ ತಮ್ಮ ಮನೆಯನ್ನು ರಕ್ಷಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video)ಆಗಿದ್ದು, ಎಲ್ಲರೂ ಮಹಿಳೆಯ ಧೈರ್ಯ, ಸಾಹಸವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮನೆಯಲ್ಲಿ ಅಳವಡಿಸಲಾದ ಸಿಸಿಟಿವಿ ದೃಶ್ಯಾವಳಿಗಳು ಆಕೆಯ ಧೈರ್ಯವನ್ನು ರೆಕಾರ್ಡ್ ಮಾಡಿದೆ. ಅದರಲ್ಲಿ ಅವರು ತನ್ನ ಮನೆಯನ್ನು ರಕ್ಷಿಸಿಕೊಳ್ಳುವುದನ್ನು ಮತ್ತು ಮೂವರು ದರೋಡೆಕೋರರನ್ನು ಮನೆಯೊಳಗೆ ಬರದಂತೆ ತಡೆದು ಸೋಫಾವನ್ನು ಬಾಗಿಲಿಗೆ ತಡೆಯಾಗಿ ಇಟ್ಟಿರುವುದನ್ನು ನೋಡಬಹುದು. ಈ ವಿಡಿಯೊವನ್ನು ಪತ್ರಕರ್ತ ಅಜಿತ್ ಯಾದವ್ ಅವರು ತಮ್ಮ ಎಕ್ಸ್ ಪೇಜ್ನಲ್ಲಿ ಪೋಸ್ಟ್ ಮಾಡಿದ್ದಾರೆ. ನಂತರ ಇದನ್ನು ವಿವಿಧ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ಗಳಲ್ಲಿ ಮರು ಪೋಸ್ಟ್ ಮಾಡಲಾಗಿದೆ. ದರೋಡೆಕೋರರು ಮನೆಯನ್ನು ಲೂಟಿ ಮಾಡಲು ಪ್ರಯತ್ನಿಸಿದ್ದರು. ಆದರೆ ಮನೆಯಲ್ಲಿದ್ದ ಧೈರ್ಯಶಾಲಿ ಮಹಿಳೆಯ ಮುಂದೆ ದರೋಡೆಕೋರರು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಧೈರ್ಯಶಾಲಿ ಮಹಿಳೆ ಏಕಾಂಗಿಯಾಗಿ ಮೂವರು ದರೋಡೆಕೋರರನ್ನು ಸೋಲಿಸಿದ್ದಾರೆ ಎಂದು ಪೋಸ್ಟ್ ಮಾಡಲಾಗಿದೆ.
Robbers tried to loot a house, But the robbers could not do anything in front of the Brave Woman present in the house. The brave woman single-handedly overpowered three robbers🫡, Amritsar
— Ghar Ke Kalesh (@gharkekalesh) October 1, 2024
pic.twitter.com/NQuAwauAYf
ಮನೆಯ ಒಳಗಿನಿಂದ ಚಿತ್ರೀಕರಿಸಲಾದ ಈ ವಿಡಿಯೊ ಸಂಕಷ್ಟದ ಪರಿಸ್ಥಿತಿಯಲ್ಲೂ ಧೃತಿಗೆಡದೆ ಮಹಿಳೆಯ ತ್ವರಿತ ಚಿಂತನೆಯನ್ನು ತೋರಿಸುತ್ತದೆ. ಮೂವರು ದರೋಡೆಕೋರರ ಬಲದ ವಿರುದ್ಧ ತನ್ನ ಧೈರ್ಯದ ಸಹಾಯದಿಂದ ಬಾಗಿಲನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ. ಒಂದಿಂಚೂ ಬಾಗಿಲು ತೆರೆಯಲು ಬಿಡದೆ, ಅವಳು ಬುದ್ಧಿವಂತಿಕೆಯಿಂದ ಸೋಫಾವನ್ನು ಎಳೆದು ಬಾಗಿಲಿಗೆ ತಡೆಯನ್ನು ಹಾಕಿದ್ದಾಳೆ. ಅದರ ಜೊತೆಗೆ , ಸಹಾಯಕ್ಕಾಗಿ ಕೂಗಿದ್ದಾಳೆ.
ಇದನ್ನೂ ಓದಿ:ಕೋಚಿಂಗ್ ಸೆಂಟರ್ನಲ್ಲಿ ವಿದ್ಯಾರ್ಥಿನಿ ಜತೆ ಅಶ್ಲೀಲ ಕೃತ್ಯ; ಶಿಕ್ಷಕ ಸಾಹಿಲ್ ಸಿದ್ದಿಕಿ ಬಂಧನ
“ಈ ಧೈರ್ಯಶಾಲಿ ಮಹಿಳೆ ಮೂವರು ದರೋಡೆಕೋರರ ವಿರುದ್ಧ ಹೋರಾಡುವುದನ್ನು ನೋಡುವುದಕ್ಕೆ ನಿಜವಾಗಿಯೂ ನನ್ನ ಹೃದಯ ನಡುಗುತ್ತದೆ! ಸಂಕಷ್ಟದ ವೇಳೆ ಶಕ್ತಿಯು ಎಲ್ಲಾ ರೂಪಗಳಲ್ಲಿ ಬರುತ್ತದೆ. ಅವಳ ಧೈರ್ಯವು ಅವಳ ಮನೆಯನ್ನು ರಕ್ಷಿಸುವುದಲ್ಲದೆ ಅವಳ ಸುತ್ತಲಿನ ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ. ಅವಳಿಗೆ ಹ್ಯಾಟ್ಸ್ ಆಫ್!” ಎಂದು ಎಕ್ಸ್ ಬಳಕೆದಾರರೊಬ್ಬರು ಹೊಗಳಿದ್ದಾರೆ. ಹಾಗೇ ಆಕೆಯ ಬಗ್ಗೆ ಅನೇಕರು ಗೌರವವನ್ನು ವ್ಯಕ್ತಪಡಿಸಿದ್ದಾರೆ.