Tuesday, 26th October 2021

ಡಿಕೆಶಿಗೆ ತುಮಕೂರಿನಲ್ಲಿ ಸಾವಿರಾರು ಕೋಟಿ ಬೇನಾಮಿ ಆಸ್ತಿಯಿದೆ: ಸೊಗಡು ಶಿವಣ್ಣ ಆರೋಪ

ತುಮಕೂರು: ಡಿ.ಕೆ.ಶಿವಕುಮಾರ್ ಗೆ ಸೇರಿದ ಸಾವಿರಾರು ಕೋಟಿ ಬೇನಾಮಿ ಆಸ್ತಿ ತುಮಕೂರಿನಲ್ಲಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿ, ಡಿಕೆ ಶಿವಕುಮಾರ್ ಹೋಲ್ ಸೇಲ್ ವ್ಯಾಪಾರಿ, ಆತ ರಿಟೈಲ್ ವ್ಯಾಪಾರಿ ಅಲ್ಲ. ಉಗ್ರಪ್ಪ ಹಾಗೂ ಸಲೀಂ ಮಾತನಾಡಿರು ವುದು ಸತ್ಯ ಎಂದರು.

ಪಾವಗಡ ಸೋಲಾರ್ ಪಾರ್ಕ್, ಚಿಕ್ಕನಾಯಕನಹಳ್ಳಿಯಲ್ಲಿ ಗಣಿಗಾರಿಕೆ ಹಾಗೂ ತುಮಕೂರು ನಗರದಲ್ಲಿ 100ಕೋಟಿ ಮೌಲ್ಯದ ಹೆಂಚಿನ ಫ್ಯಾಕ್ಟರಿ ಬೇನಾಮಿ ಆಸ್ತಿಯಿದೆ ಎಂದು ತಿಳಿಸಿದರು. ಕೃಷ್ಣಮೂರ್ತಿ ಎಂಬ ಹೆಸರಿನಲ್ಲಿ ಬೇನಾಮಿ ಆಸ್ತಿಯಿದೆ. ಅಷ್ಟೊಂದು ಸಾವಿರಾರು ಕೋಟಿ ಹೇಗೆ ಬಂತು, ಈ ಬಗ್ಗೆ ತನಿಖೆಯಾಗಲಿ ಎಂದರು.

ಎಸ್.ಎಂ.ಕೃಷ್ಣ ಸಿಎಂ ಆಗಿದ್ದಾಗ, ಅವರ ಹೆಸರು ಹೇಳಿಕೊಂಡು ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ದೂರಿದರು.

Leave a Reply

Your email address will not be published. Required fields are marked *