Sunday, 14th August 2022

ಬ್ಯಾಡ್ಮಿಂಟನ್ ಆಟಗಾರ್ತಿಯ ನೃತ್ಯ ಕೌಶಲ್ಯ…

ಹೈದರಾಬಾದ್: ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ತನ್ನ ಶಟ್ಲಿಂಗ್ ಕೌಶಲ್ಯದ ಹೊರತಾಗಿ ನೃತ್ಯ ಕೌಶಲ್ಯಕ್ಕೂ ಹೆಸರುವಾಸಿಯಾಗಿದ್ದಾರೆ.

ಕಚ್ಚಾ ಬಾದಮ್ ಮತ್ತು ಮಾಯಾಕಿರ್ರಿಯೇ ಟ್ಯೂನ್‌ಗಳಿಗೆ ನೃತ್ಯ ಮಾಡುವ ಮೂಲಕ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದ ಪಿವಿ ಸಿಂಧು ಮತ್ತೊಂದು ಡ್ಯಾನ್ಸ್ ವಿಡಿಯೋವೊಂದನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಸ್ಟ್ ಮಾಡಿದ್ದಾರೆ.

ಟ್ರೆಂಡಿಂಗ್ ಹಾಡೊಂದಕ್ಕೆ ಹೆಜ್ಜೆ ಹಾಕಿರುವುದನ್ನು ಇದರಲ್ಲಿ ಕಾಣಬಹುದು.

“ನಿಮಗೆ ಯಾವುದು ನಿಜವಾಗಿಯೂ ಸಂತೋಷವನ್ನು ನೀಡುತ್ತದೆಯೋ, ಅದನ್ನು ಮಾಡಿ ಎಂದು ಪಿವಿ ಸಿಂಧು ಬರೆದು ಕೊಂಡಿದ್ದಾರೆ. ಈ ವಿಡಿಯೋದಲ್ಲಿ ಎರಡು ಟ್ರೆಂಡಿಂಗ್ ಆಡಿಯೋಗಳಿಗೆ ಡ್ಯಾನ್ಸ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ.