Wednesday, 1st February 2023

ರಜೆಗೆ ಹೋಗಬೇಡಿ ಆಡ್ಕೊಂಡು, ಕುಣ್ಕೊಂಡು ಮಠದಲ್ಲಿ ಇರ್ರಿ: ಸಿದ್ದಲಿಂಗ ಸ್ವಾಮೀಜಿ ಬಾವುಕ ನುಡಿ

ತುಮಕೂರು: ದಸರೆ ರಜೆಗೆ ಮಕ್ಕಳು ಊರಿಗೆ ಹೋಗಬೇಡಿ ಆಡ್ಕೊಂಡು, ಕುಣ್ಕೊಂಡು ಮಠದಲ್ಲೇ ಇರ್ರಿ ಎಂದು ಸಿದ್ದಲಿಂಗ ಸ್ವಾಮೀಜಿ ಅವರ ಬಾವುಕ ನುಡಿಗಳು ಮಾನವೀಯತೆಯ ಪ್ರತೀಕವಾಗಿದೆ.
ಶಾಲೆಗೆ ದಸರಾ ರಜೆ ನೀಡಿರುವ  ಕಾರಣ ಊರಿಗೆ ಹೋಗಲು ಸಿದ್ದಗಂಗಾ ಮಠದ ಮಕ್ಕಳು ಸಿದ್ದಲಿಂಗ ಸ್ವಾಮೀಜಿ ಅವರ ಆಶೀ ರ್ವಾದ ಪಡೆಯಲು ಹೋದಾಗ, ನೀವೆಲ್ಲ ಊರಿಗೆ ಹೋದ್ರೆ ಬೇಜಾರಾಗುತ್ತೆ. ಆಡ್ಕೊಂಡು, ಕುಣ್ಕೊಂಡು, ಹೊಟ್ಟೆ ತುಂಬಾ ಊಟ ಮಾಡ್ಕೊಂಡು ಮಠದಲ್ಲೇ ಇರ್ರಿ ಎಂದು ಬಾವುಕರಾಗಿದ್ದಾರೆ. ಇದನ್ನು ಕಂಡು ಮಕ್ಕಳು ಗದ್ಗದಿತರಾಗಿದ್ದಾರೆ.
ಈ ಬಗ್ಗೆ ವಿದ್ಯಾರ್ಥಿಯೊಬ್ಬ ಸ್ವಾಮೀಜಿಯವರ ಭಾವುಕ ನುಡಿಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.
error: Content is protected !!