Tuesday, 5th July 2022

ಕುಮಾರ್​ ಬಂಗಾರಪ್ಪ ಪುತ್ರಿ ವಿವಾಹ ಮುಂದೂಡಿಕೆ

ಶಿವಮೊಗ್ಗ: ಲಾಕ್​ಡೌನ್​ನಿಂದಾಗಿ, ಅನೇಕ ಮದುವೆ ಕಾರ್ಯಕ್ರಮಗಳು ಮುಂದೂಡಿಕೆಯಾಗಿವೆ. ಇದೀಗ ಶಾಸಕ ಕುಮಾರ ಬಂಗಾರಪ್ಪ ಅವರ ಪುತ್ರಿಯ ವಿವಾಹ ಮುಂದೂಡಲಾಗಿದೆ ಎನ್ನಲಾಗಿದೆ.

ಕುಮಾರ್​ ಬಂಗಾರಪ್ಪ ಅವರ ಪುತ್ರಿ ಲಾವಣ್ಯಳಿಗೆ ಹೈದರಾಬಾದ್ ಮೂಲದ ಡಾ.ವಿಕ್ರಮಾದಿತ್ಯ ಅಥೆಲಿ ಅವರೊಂದಿಗೆ ವಿವಾಹ ನಿಶ್ಚಯವಾಗಿತ್ತು. ಮೇ 30ಕ್ಕೆ ವಿವಾಹ ನಡೆಯಬೇಕಿತ್ತು. ಅದೇ ದಿನ ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರತಕ್ಷತೆ ಯನ್ನೂ ಇಟ್ಟುಕೊಳ್ಳಲಾಗಿತ್ತು.

ಹಾಗೆಯೇ, ಜೂನ್​ 4ಕ್ಕೆ ಸೊರಬದ ಎಸ್​ ಬಂಗಾರಪ್ಪ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಆರತಕ್ಷತೆ ನಡೆಸುವುದಾಗಿ ಹೇಳಲಾ ಗಿತ್ತು. ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸಲಾಗಿತ್ತು.