Tuesday, 21st March 2023

ವ್ಯಸನಮುಕ್ತ ದಿನಾಚರಣೆಯ ಪ್ರತಿಜ್ಞಾವಿಧಿ

ಕೋಲಾರ: ದುಶ್ಚಟಗಳು ಮಾನವನ ಆರೋಗ್ಯ, ಕುಟುಂಬ ಹಾಗೂ ಸಮಾಜದ ಮೇಲೆ ಮಾರಕ ಪರಿಣಾಮ ಬೀರುತ್ತವೆ ಎಂದು ತಹಶಿಲ್ದಾರ ಪಿ.ಜಿ ಪವಾರ್ ಹೇಳಿದರು.

ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮದಿನದ ಪ್ರಯುಕ್ತ ವ್ಯಸನಮುಕ್ತ ದಿನಾ ಚರಣೆಯ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಅವರು ದುಶ್ಚಟಗಳು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮೂಲಕ ಬದುಕಿಗೆ ಮಾರಕವಾಗಿ ಪರಣಮಿಸುತ್ತವೆ ಹಾಗಾಗಿ ದುಶ್ಚಟಗಳನ್ನು ತೊರೆಯುವ ಮೂಲಕ ಸಮಾಜಕ್ಕೆ ಪೂರಕವಾಗಿ ಬದುಕುವ ಸಂಕಲ್ಪ ಮಾಡಬೇಕು ಎಂದು ಅವರು ಹೇಳಿದರು.

ತಹಶಿಲ್ದಾರ ಪಿ.ಜಿ ಪವಾರ್ ಸರ್ವರಿಗೂ ವ್ಯಸನಮುಕ್ತ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!