Friday, 30th September 2022

ಸೂರ್ಯ, ಚಂದ್ರ ಇರುವವರೆಗೂ ಬೆಳಗಾವಿ ಕರ್ನಾಟಕದ್ದೆ: ಎಂಇಎಸ್ ಪುಂಡರಿಗೆ ಸವದಿ ತಿರುಗೇಟು

ಬೆಳಗಾವಿ: ಸೂರ್ಯ, ಚಂದ್ರ ಇರುವವರೆಗೂ ಬೆಳಗಾವಿ ಕರ್ನಾಟಕದ್ದು ಎನ್ನುವ ಮೂಲಕ ಗಡಿಯಲ್ಲಿ ಕ್ಯಾತೆ ತೆಗೆಯುವ ಎಂಇಎಸ್ ಪುಂಡರಿಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ.

ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರದ ಗಡಿ ಜಿಲ್ಲೆಯ ಮರಾಠಿಗರಿಗೆ ಪತ್ರ ಕಳುಹಿಸುವ ಮೂಲಕ ಕರಾಳ ದಿನಾಚರಣೆಗೆ ಕರೆ  ನೀಡಿದ್ದರು. ಈ ವಿಚಾರವಾಗಿ ನಗರದಲ್ಲಿ ಡಿಸಿಎಂ ಸವದಿ ಪ್ರತಿಕ್ರಿಯಿಸಿ, ಯಾರು ಎಷ್ಟೇ ಕೂಗಾಡಿದರು ಕೂಡ ಬೆಳಗಾವಿ ಕರ್ನಾ ಟಕದ ಅವಿಭಾಜ್ಯ ಅಂಗವಾಗಿದೆ.

ಮಹಾರಾಷ್ಟ್ರದಲ್ಲಿ ಕುಳಿತು ಕನ್ನಡದ ವಿರುದ್ದ ಮಾತನಾಡಿದರೆ ಅದಕ್ಕೆ ಪ್ರತಿಕ್ರಿಯಿಸಲ್ಲ. ಬೆಳಗಾವಿಗೆ ಬಂದು ಮಾತನಾಡಲಿ ಎಂದು ಸವಾಲು ಹಾಕಿದರು.