ನಾಗಮಂಗಲ: ಟೆಂಪೋ ಗ್ಸ್ೂ ಮತ್ತು ಟಾಟಾ ಸುಮೋ ನಡುವೆ ಮುಖಾಮುಖಿ ಡಿಕ್ಕಿಿಯಾಗಿ ಎಂಟು ಮಂದಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಾಗಮಂಗಲದಲ್ಲಿ ನಡೆದಿದೆ.
ನಾಗಮಂಗಲದಿಂದ ಬೆಳ್ಳೂರು ಕಡೆಗೆ ಸಂಚರಿಸುತ್ತಿಿದ್ದ ಟಾಟಾ ಸುಮೋಗೆ ಬೆಳ್ಳೂರಿನಿಂದ ನಾಗಮಂಗಲ ಕಡೆಗೆ ಬರುತ್ತಿಿದ್ದ ಟೆಂಪೋ ಗ್ಸ್ೂ ವಾಹನ ಡಿಕ್ಕಿಿ ಹೊಡೆದಿದ್ದರಿಂದ ಘಟನೆ ಸಂಭವಿಸಿದೆ. ಗಾಯಾಳುಗಳನ್ನು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆೆಗೆ ದಾಖಲಿಸಲಾಗಿದೆ.
ಬಾರ್ಕ್ ಷರೀಫ್ ಬಿನ್ ಇಸ್ಮಾಾಯಿಲ್ (50), ತಾಹೀರ್ ಬಿನ್ ಸುಲ್ತಾಾನ್ ನೌಷದ್ ಬಿನ್ ಮಕ್ಬೂಲ್ ಪಾಷ(45), ಹಸೀನ್ ತಾಜ್ ಕೋಂ ಖಲೀಂ(50), ಮೆಹಬೂಬ್ ಜಾನ್ ಬಿನ್ ದಸ್ತ ಖಾನ್(50), ಮಕ್ಸೂದ್ ಬಿನ್ ಮಹಮ್ಮದ್ (25), ಸಾಹಿದಾ (50), ಅಕ್ಬರ್ ಅಲಿ(40) ಅಪಘಾತದಲ್ಲಿ ಮೃತಪಟ್ಟವರು.
ಮೃತರು ನಾಗಮಂಗಲ ಪಟ್ಟಣದ ನಿವಾಸಿಗಳು ಎಂದು ತಿಳಿದುಬಂದಿದೆ. ಅಲ್ ಫಲಾಹ್ ಅಲ್ಪಸಂಖ್ಯಾಾತರ ಪತ್ತಿಿನ ಸಹಕಾರ ಸಂಘದ ಸದಸ್ಯರಾಗಿದ್ದ ಇವರು, ತಮ್ಮ ಅವಧಿ ಮುಗಿದಿದ್ದರಿಂದ ಔತಣಕೂಟಕ್ಕೆೆ ತೆರಳುತ್ತಿಿದ್ದ ವೇಳೆ ಈ ಅವಘಡ ನಡೆದಿದೆ. ಅಪಘಾತದಿಂದಾಗಿ ಹೆದ್ದಾರಿಯ ವಾಹನ ಅಡ್ಡಿಿಯುಂಟಾಗಿತ್ತು. ಘಟನೆಯಲ್ಲಿ ಜಖಂಗೊಂಡಿದ್ದ ಎರಡೂ ವಾಹನಗಳನ್ನು ತೆರವುಗೊಳಿಸಿದ ಪೊಲೀಸರು ವಾಹನ ಸಂಚಾರಕ್ಕೆೆ ಅನುವು ಮಾಡಿಕೊಟ್ಟರು.