Friday, 18th June 2021

ಸಾವಿನ ಸಂಕಟ; ಇಲಾಖೆಗಳ ಕಚ್ಚಾಟ

ವಿಶೇಷ ವರದಿ: ಶಿವಕುಮಾರ್‌ ಬೆಳ್ಳಿತಟ್ಟೆ, ಬೆಂಗಳೂರು

ಕೋವಿಡ್ ಸೋಂಕು ಇಳಿಯುತ್ತಿದ್ದಂತೆ ಸರಕಾರದ ವಿವಿಧ ಇಲಾಖೆಗಳ ನಡುವೆ ಸಾವಿನ ಆಟ ಆರಂಭವಾಗಿದೆ! ಸಾವಿನ ಲೆಕ್ಕ ಪಕ್ಕಾ ಇಲ್ಲ ಎನ್ನುವ ಮಾತು ಸಾರ್ವಜನಿಕವಾಗಿ ಚರ್ಚೆಯಾಗುತ್ತಿದ್ದರೂ ಸರಿಪಡಿಸಿಕೊಳ್ಳದ ಸರಕಾರ ಇನ್ನಷ್ಟು ತಪ್ಪುಗಳನ್ನು ಮಾಡುತ್ತಾ ಸಿಕ್ಕಿಕೊಳ್ಳುತ್ತಿದೆ.

ಅಂದರೆ, ಕೋವಿಡ್ ಸೋಂಕು ಗಣನೀಯವಾಗಿ ಕಡಿಮೆಯಾಗುತ್ತಿದ್ದರೂ ಸಾವಿನ ಸಂಖ್ಯೆ ಏರಿಕೆಯಾಗುವುದನ್ನು ಹಿಂದೆಯೇ ಸಂಘಟನೆಗಳು, ಮಾಧ್ಯಮಗಳು ಟೀಕಿಸಿದ್ದವು. ಇದನ್ನು ಲೆಕ್ಕಿಸದ ಸರಕಾರ ತಪ್ಪನ್ನು ಮುಂದುವರಿಸಿತ್ತು. ಪರಿಣಾಮ ಈಗ ಕೋವಿಡ್ ಸಾವಿನ ಲೆಕ್ಕವೇ ಸಿಗದೆ ಸರಕಾರದ ಇಲಾಖೆಗಳ ನಡುವೆಯೇ ಕಚ್ಚಾಟ ಶುರುವಾಗಿದೆ.

ಅಂದರೆ ಸಾವಿನ ಲೆಕ್ಕ ಕೊಡುವಂತೆ ಸಾಂಕಿಕ ಇಲಾಖೆ ಆರೋಗ್ಯ ಇಲಾಖೆಯನ್ನೂ, ಆರೋಗ್ಯ ಇಲಾಖೆ ಪೌರಾಡಳಿತ ಇಲಾಖೆಯನ್ನು, ಬಿಬಿಎಂಪಿ ಆರೋಗ್ಯ ಇಲಾಖೆಯನ್ನೂ ಪೀಡಿಸುತ್ತಾ ಜಗಳಕ್ಕಿಳಿದಿವೆ. ಇಲ್ಲಿ ಆರೋಗ್ಯ ನೈಜ ಲೆಕ್ಕ ಕೊಡುತ್ತಿಲ್ಲ.
ಬಿಬಿಎಂಪಿಯವರು ಇದು ನಮ್ಮ ಜವಾಬ್ದಾರಿಯಲ್ಲ ಎಂದು ಜಾರಿಕೊಳ್ಳುತ್ತಿದೆ. ಇವೆರಡರ ಮಧ್ಯೆ, ರಾಜ್ಯದ ಸ್ಥಳೀಯ ಸಂಸ್ಥೆಗಳು ತಪ್ಪು ಮಾಹಿತಿ ನೀಡಿ ಸಾಂಕಿಕ ಇಲಾಖೆಗೆ ಗೊಂದಲ ತಂದಿವೆ.

ಇನ್ನು ರಾಜ್ಯದ ಅತಿ ಹೆಚ್ಚು ಸಾವುಗಳನ್ನು ದಾಖಲಿಸುತ್ತಿರುವ ಬಿಬಿಎಂಪಿ ಸಾವಿನ ಸಂಖ್ಯೆಯಲ್ಲಿ ಕದ್ದಾಡುತ್ತಿದ್ದು, ಇದರಿಂದಾಗಿ
ಸಾವಿನ ನಿಖರ ಸಂಖ್ಯೆ ಸಿಗದೆ ಎಲ್ಲಾ ಅಯೋಮಯ ಎನ್ನುವಂತಾಗಿದೆ. ಸಮಸ್ಯೆ ಈಗ ಗಂಭೀರವಾಗುತ್ತಿದ್ದು, ಸಾಂಕಿಕ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಹಿರಿಯ ಅಧಿಕಾರಿಗಳು ಸದ್ಯದ ಸಭೆ ನಡೆಸಿ ಲೆಕ್ಕ ಪತ್ತೆ ಮಾಡುವ ನಿರ್ಧಾರ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಸಾವಿನ ಆಟ ?: ರಾಜ್ಯದಲ್ಲಿ ಕಳೆದ ಏಪ್ರಿಲ್ 30ರಂದು ಸೋಂಕಿತ ಸಂಖ್ಯೆ 50 ಸಾವಿರ ಇದ್ದಾಗ ಸಾವಿನ ಸಂಖ್ಯೆ 250 ಇತ್ತು. ಆದರೆ ಈಗ ಸೋಂಕು 10 ಸಾವಿರ ಮಂದಿಗೆ ಇರುವಾಗಲೂ ಸಾವಿನ ಸಂಖ್ಯೆ ಅಷ್ಟೇ ಇದೆ. ಅದರಲ್ಲೂ ಬೆಂಗಳೂರಿನಲ್ಲಿ ಈ ಹಿಂದೆ ನಿತ್ಯ 26,756 ಸೋಂಕು ಇದ್ದಾಗ ಸಾವು ಬರೀ 93 ಕೇಸು ಮಾತ್ರ ಇತ್ತು. ಹಾಗೆ ನೋಡಿದರೆ ಆ ಸಂದರ್ಭದಲ್ಲಿ ಆಸ್ಪತ್ರೆ ಗಳಲ್ಲಿ ಹಾಸಿಗೆ, ಆಕ್ಸಿಜನ್, ವೆಂಟಿಲೇಟರ್ ಸೌಲಭ್ಯ ತೀರಾ ಕಡಿಮೆಯಾಗಿತ್ತು. ಈಗ ಎಲ್ಲಾ ಸೌಲಭ್ಯಗಳೂ ಸಿಗುತ್ತಿವೆ.  ಸೋಂಕಿನ ಪ್ರಮಾಣವೂ 1900ಕ್ಕೆ ಇಳಿದಿದೆ.

ಆದರೂ ಸಾವು ನಿತ್ಯ 200ಕ್ಕಿಂತ ಇಳಿಯುತ್ತಲೇ ಇಲ್ಲ. ಇದಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು  ನೀಡುವ ಕಾರಣ ತಿಂಗಳಿನಿಂದ
ಆಸ್ಪತ್ರೆಯಲ್ಲಿದ್ದವರು ಚಿಕಿತ್ಸೆ ವಿಫಲವಾಗಿ ಈಗ ಸಾಯುತ್ತಿದ್ದಾರೆ ಎನ್ನುವುದು. ಇದು ಸ್ವಲ್ಪ ಮಟ್ಟಿಗೆ ವಾಸ್ತವ ಎನಿಸಿದರೂ ಆರಂಭದಿಂದಲೂ ಸಾವಿನ ಸಂಖ್ಯೆ ಆರಂಭ ಕಾಲದಿಂದ ಅದೇ ಪ್ರಮಾಣದಲ್ಲಿರುವುದಕ್ಕೆ ಈ ಕಾರಣ ನೀಡಲಾಗದು. ಅಂದರೆ ಈ ಹಿಂದೆ ತೀರಿಕೊಂಡಿದ್ದ ಕೋವಿಡ್ ಸೋಂಕಿತರ ಲೆಕ್ಕವನ್ನು ಮುಚ್ಚಿ ಹಾಕಿದ್ದ ಅಧಿಕಾರಿಗಳು ಈಗ ತಡವಾಗಿ ದಿನಕ್ಕೊಂದಷ್ಟು
ಸೇರಿಸಿ ಪ್ರಕಟಿಸುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ.

ಅಷ್ಟೇ ಅಲ್ಲ, ಇನ್ನೂರೆ ಸಿಗುವುದಿಲ್ಲ ಹಾಗೂ ಅನುಕಂಪ ಆಧಾರಿತ ಹುದ್ದೆಗಳು ಕೈ ತಪ್ಪುತ್ತವೆ ಎನ್ನುವ ಕಾರಣಕ್ಕೆ ಅನೇಕ ಜಿಗಳಲ್ಲಿ ಸ್ಥಳೀಯ ಆರೋಗ್ಯ ಅಧಿಕಾರಿಗಳು ಸಾವಿನ ಕಾರಣವನ್ನು ಕೋವಿಡ್ ಎಂದು ಬರೆಯುವ ಬದಲು ಉಸಿರುಕಟ್ಟಿ ಸಾವು ಎಂದು ದಾಖಲಿಸಿzರೆ ಎಂದು ದಾಖಲಿಸಿzರೆ ಎನ್ನಲಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಗೊಂದಲ ತಂದಿದೆ.

ಸಾವಿನ ಸಂಖ್ಯೆ ಕಳ್ಳಾಟ ಹೇಗಿರುತ್ತೆ ? ಸೋಂಕಿತರು ಸಾಯುವ ತನಕ ಬಿಯು ನಂಬರ್ ಅಥವಾ ಎಸ್‌ಆರ್‌ಎಫ್ ನಂಬರ್
ಮೂಲಕ ಗುರುತಿಸಲ್ಪಡುತ್ತಾರೆ. ಒಂದೊಮ್ಮೆ ಅವರು ತೀರಿಕೊಂಡರೆ ನಂತರ ಆ ನಂಬರ್‌ಗಳು ಮುಂದುವರಿಯುವುದಿಲ್ಲ ಬದಲಾಗಿ ಆತನ ಹೆಸರು ಮತ್ತು ಮೂಲ ದಾಖಲೆಗಳ ಪ್ರಕಾರ ಮಾಹಿತಿ ಸರಕಾರಕ್ಕೆ ಹೋಗುತ್ತದೆ. ಈ ಸಂದರ್ಭದಲ್ಲಿ
ಅಧಿಕಾರಿಗಳು ಯಾವ ಹಂತದದರೂ ಸಂಖ್ಯೆ ಮರೆಮಾಚಬಹುದು ಎಂದು ಮೂಲಗಳು ಹೇಳಿವೆ.

ಹೀಗಾಗಿಯೇ ರಾಜ್ಯ ಸಾಂಕಿಕ ಇಲಾಖೆಗೆ ಜಿಲ್ಲೆಗಳಿಂದ ಆರೋಗ್ಯಾಧಿಕಾರಿಗಳು ಕಳುಹಿಸುವ ಮಾಹಿತಿಗಳು ಅಪೂರ್ಣಗೊಂಡಿವೆ. ಅದರಲ್ಲೂ ಬೆಂಗಳೂರಿನಲ್ಲಿ ಬಿಬಿಎಂಪಿ ಅಧಿಕಾರಿಗಳು ಸಾಂಕಿಕ ಇಲಾಖೆಗೆ ಮಾಹಿತಿಯನ್ನೂ ನೀಡುತ್ತಿಲ್ಲ. ಇನ್ನು ಕೋವಿಡ್ ಸಾವುಗಳ ನೈಜ ಮಾಹಿತಿ ಹೊಂದಿರುವ ಆರೋಗ್ಯ ಇಲಾಖೆ ಒಟ್ಟಿಗೆ ವರ್ಷದ ಕೊನೆಯಲ್ಲಿ ಸರಕಾರಕ್ಕೆ ಸಲ್ಲುತ್ತೇವೆ ಎಂದು ಜಾರಿಗೊಳ್ಳುತ್ತಿದೆ. ಇದರಿಂದ ಪ್ರತಿ ತಿಂಗಳು ಸಾವಿನ ಲೆಕ್ಕ ಸಂಗ್ರಹಿಸಿ ಸರಕಾರಕ್ಕೆ ನೀಡಬೇಕಾದ ಸಾಂಕಿಕ ಇಲಾಖೆ ಲೆಕ್ಕ ಸಿಗದೆ ಒzಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

***

ಸಾವಿನ ಸಂಖ್ಯೆಯನ್ನು ನಾವು ಬಯಲು ಮಾಡುವಂತಿಲ್ಲ. ಮಾಧ್ಯಮಗಳಿಗೂ ಹೇಳುವಂತಿಲ್ಲ. ಈ ಬಗ್ಗೆ ಸರಕಾರಕ್ಕೇ
ಮಾಹಿತಿ ನೀಡುತ್ತೇವೆ.

-ಉಮಾದೇವಿ ಬಳಿಗಾರ್ ಅಧಿಕ್ಷಕ ಎಂಜಿನಿಯರ್,

(ಚಿತಾಗಾರಗಳ ಉಸ್ತುವಾರಿ)

ಕೋವಿಡ್ ಸಾವಿನ ಸಂಖ್ಯೆ ಎಷ್ಟು ಏನು ಎನ್ನುವುದು ನಮಗೆ ತಿಳಿಯುತ್ತಿಲ್ಲ. ನಾವೇ ಸಾಂಕಿಕ ಇಲಾಖೆ ಕೇಳಿ ಪಡೆಯುತ್ತೇವೆ.
– ಮಂಗಳದಾಸ್

ಜನನ-ಮರಣ ವಿಭಾಗ ಜಂಟಿ ನಿರ್ದೇಶಕರು

Leave a Reply

Your email address will not be published. Required fields are marked *