Tuesday, 7th December 2021

ಕ್ರಿಕೆಟ್ ದಿಗ್ಗಜ ಗೌತಮ್ ಗಂಭೀರ್ ಗೆ ಕೊಲೆ ಬೆದರಿಕೆ

ನವದೆಹಲಿ: ಭಾರತೀಯ ಕ್ರಿಕೆಟ್ ದಿಗ್ಗಜ ಗೌತಮ್ ಗಂಭೀರ್ ಗೆ ಐಸಿಸ್ ಉಗ್ರರು ಕೊಲೆ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಒಂದೆಡೆ ಭಾರತೀಯ ಸೇನೆಯಿಂದ ಐಸಿಸ್ ಉಗ್ರರನ್ನು ಸದೆ ಬಡಿಯುವ ಕಾರ್ಯ ನಡೆದಿ ದ್ದರೆ, ಮತ್ತೊಂದೆಡೆ ಐಸಿಸ್ ಉಗ್ರರ ಬೆದರಿಕೆ ಮುಂದುವರೆದಿದೆ.

ಈ ಕುರಿತಂತೆ ಕ್ರಿಕೆಟಿಗ ಗೌತಮ್ ಗಂಭೀರ್ ಆರೋಪಿಸಿದ್ದು, ತಮಗೆ ಐಸಿಸ್ ಉಗ್ರರು ಕಾಶ್ಮೀರದಿಂದ ಕರೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾಗಿ ತಿಳಿಸಿದ್ದಾರೆ. ಈ ಮೂಲತ ತಮಗೆ ಜೀವ ಬೆದರಿಕೆ ಇರುವುದನ್ನು ಬಹಿರಂಗ ಪಡಿಸಿದ್ದಾರೆ.

ಭಾರತೀಯ ಸೇನೆಯಿಂದ ಜಮ್ಮು-ಕಾಶ್ಮೀರದಲ್ಲಿ ಉಗ್ರರನ್ನು ಹೊಡೆದುರುಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸು ತ್ತಿರುವ ಭಾರತೀಯ ಸೇನೆ, ನಾಶ ಪಡಿಸುವ ಕಾರ್ಯದಲ್ಲಿ ತೊಡಗಿದೆ.