Friday, 2nd December 2022

ಕೇನ್ಸ್​ ಫೆಸ್ಟಿವಲ್​-2022ನಲ್ಲಿ ದೀಪಿಕಾ ಜ್ಯೂರಿಯಾಗಿ ಆಯ್ಕೆ

ಕೇನ್ಸ್​ (ಫ್ರಾನ್ಸ್​): ಕೇನ್ಸ್​ನಲ್ಲಿ ಮಂಗಳವಾರದಿಂದ ನಡೆಯುತ್ತಿರುವ ಕೇನ್ಸ್​ ಫೆಸ್ಟಿವಲ್​-2022ನಲ್ಲಿ ಬಾಲಿವುಡ್​ನ ಚೆಲುವೆ ದೀಪಿಕಾ ಪಡುಕೋಣೆ ಜಡ್ಜ್​ (ಜ್ಯೂರಿ) ಆಗಿ ಆಯ್ಕೆ ಆಗಿದ್ದಾರೆ. ದೀಪಿಕಾ ಇದೇ ಮೊದಲ ಬಾರಿಗೆ ಜ್ಯೂರಿಯಾಗಿ ಪಾಲ್ಗೊಳ್ಳುತ್ತಿದ್ದಾರೆ.

ಸಿನಿಮೋತ್ಸವಕ್ಕೂ ಮುನ್ನ ಜ್ಯೂರಿಗಳಿಗಾಗಿ ಏರ್ಪಡಿಸಿದ್ದ ಔತಣಕೂಟದಲ್ಲಿ ದೀಪಿಕಾ ಭಾಗಿಯಾ ಗಿದ್ದಾರೆ. ದೀಪಿಕಾ, ಕ್ಯಾನ್​ ಫಿಲ್ಮ್ ಫೆಸ್ಟಿವಲ್ ನಿರ್ದೇಶಕ ಥಿಯೆರಿ ಫ್ರೆಮಾಕ್ಸ್, ಅಮೆರಿಕ ಚಲನಚಿತ್ರ ನಿರ್ದೇಶಕ ಮತ್ತು ಅಧಿಕೃತ ಆಯ್ಕೆಯ ತೀರ್ಪುಗಾರ ಸದಸ್ಯರಾದ ಜೆಫ್ ನಿಕೋಲ್ಸ್, ಬ್ರಿಟಿಷ್ ನಟಿ ರೆಬೆಕಾ ಹಾಲ್ ಮತ್ತು ಇಟಾಲಿಯನ್ ನಟಿ ಜಾಸ್ಮಿನ್ ಟ್ರಿಂಕಾ ಜತೆ ಈ ಕೂಟದಲ್ಲಿ ಭಾಗವಹಿಸಿ ದ್ದಾರೆ.

ಲೂಯಿ ವಿಟಾನ್ ಅವರ ಫಾಲ್ 2021 ಸಂಗ್ರಹದಿಂದ ದೀಪಿಕಾ ಸೀಕ್ವಿನ್ಡ್ ಡ್ರೆಸ್ ಆಯ್ಕೆ ಮಾಡಿಕೊಂಡಿದ್ದು. ಅದಕ್ಕೆ ಸರಿ ಹೊಂದುವ ಕಂದು ಬಣ್ಣದ ಎತ್ತರದ ಬೂಟುಗಳನ್ನು ಧರಿಸಿ ಸುಂದರಿಯಾಗಿ ಕಾಣುತ್ತಿದ್ದು ಇದು ದೀಪಿಕಾ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ.

ದೀಪಿಕಾ ಅವರೊಂದಿಗೆ ತೀರ್ಪುಗಾರರ ಪ್ಯಾನೆಲ್‌ನಲ್ಲಿ ನಟಿ-ನಿರ್ದೇಶಕಿ ರೆಬೆಕಾ ಹಾಲ್, ನೂಮಿ ರಾಪೇಸ್ ಮತ್ತು ಇಟಾಲಿಯನ್ ನಟಿ-ನಿರ್ದೇಶಕಿ ಜಾಸ್ಮಿನ್ ಟ್ರಿಂಕಾ, ನಿರ್ದೇಶಕರಾದ ಅಸ್ಗರ್ ಫರ್ಹಾದಿ, ಲಾಡ್ಜ್ ಲೈ, ಜೆಫ್ ನಿಕೋಲ್ಸ್ ಮತ್ತು ಜೋಕಿಮ್ ಟ್ರೈಯರ್ ಸಹ ಇದ್ದಾರೆ.