Friday, 7th October 2022

ಟೈಮ್ಸ್ ಪಟ್ಟಿಯಲ್ಲಿ ನಟ ಆಯುಷ್ಮಾನ್: ಹೊಗಳಿದ ದೀಪಿಕಾ

ಮುಂಬೈ: ಟೈಮ್ಸ್ ಮ್ಯಾಗಜೀನ್‍ನ ನೂರು ಮಂದಿ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಭಾರತೀಯ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಒಬ್ಬರೆಂದು ಗೌರವಕ್ಕೆ ಭಾಜರಾಗಿದ್ದು, ನಟಿ ದೀಪಿಕಾ ಪಡುಕೋಣೆ ಹೊಗಳಿದ್ದಾರೆ.

ಇದು ತುಂಬಾ ಗೌರವ ಹಾಗೂ ಹೆಮ್ಮೆಯಾಗಿದೆ ಎಂದು ನಟ ತನ್ನ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಈ ವಿಚಾರ ವನ್ನು ಪ್ರಧಾನಿ ನರೆಂದ್ರ ಮೋದಿಯವರೊಂದಿಗೂ ಹಂಚಿಕೊಂಡಿದ್ದಾರೆ. ‘ಆರ್ಟಿಕಲ್ 15’ ಚಿತ್ರದ ನಟ ಖುರಾನಾ ಮಾಡಿದ ಪೋಸ್ಟ್’ಗೆ ಹಲವು ಲೈಕ್ಸ್ ಗಳು ಹಾಗೂ ಗಣ್ಯವ್ಯಕ್ತಿಗಳು ಶುಭಾಶಯ ಕೋರಿದ್ದಾರೆ.

ದೀಪಿಕಾ ಪಡುಕೋಣೆ ಅವರ ಮಾತಿನಲ್ಲಿ, ಆಯುಷ್ಮಾನ್ ಅವರ ಮೊದಲ ಚಿತ್ರ ವಿಕ್ಕಿ ಡೋನರ್ ನೋಡಿದ್ದೇನೆ. ತಮ್ಮ ನಟನಾ ಪ್ರತಿಭೆಯನ್ನು ತೋರಿಸಿದ್ದಾರೆ. ಸಿನಿಮೆ ಜಗತ್ತಿನ ಭಾಗವಾಗಿದ್ದಾರೆ. ವಿಭಿನ್ನ ನಟನೆ, ಯಾವುದೇ ಪ್ರಮುಖ, ಐತಿಹಾಸಿಕ ಪಾತ್ರಗಳಿಗೆ ಸಮರ್ಥವಾಗಿ ಜೀವ ನೀಡಬಲ್ಲ ನಟ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಬಧಾಯಿ ಹೋ’ ಚಿತ್ರದ ಸಹ ನಟಿ ನೀನಾ ಗುಪ್ತಾ, ಅತ್ಯುತ್ತಮ ಎಂದು ಬರೆದಿದ್ದಾರೆ. ‘ವಿಕ್ಕಿ ಡೋನರ್’ ಮೂಲಕ ಭರ್ಜರಿಯಾಗಿ ಎಂಟ್ರಿ ಕೊಟ್ಟ ಆಯುಷ್ಮಾನ್, ಬಳಿಕ ‘ಅಂಧಾಧುನ್’ ನಲ್ಲಿ ಕುರುಡನಾಗಿ, ‘ಶುಭ ಮಂಗಲ ಸಾವಧಾನ್‍‍’ನಲ್ಲಿ ಅಂಗವೈಕಲ್ಯತೆ ಪಾತ್ರ, ‘ಶುಭ ಮಂಗಲ್ ಜ್ಯಾದಾ ಸಾವಧಾನ್‍’ನಲ್ಲಿ ಗೇ ಪಾತ್ರ, ‘ಬಾಳಾ’ದಲ್ಲಿ ಕೇಶರಾಶಿ ಸಮಸ್ಯೆ ಅನುಭವಿಸುವ ಪಾತ್ರದಲ್ಲಿ ಮನೋಜ್ಞ ವಾಗಿ ನಟಿಸಿದ್ದಾರೆ.

‘ದಮ್‍ ಲಗಾ ಕೇ ಐಸಾ’, ‘ಬರೇಲಿ ಕೀ ಬರ್ಫೀ’, ‘ಆರ್ಟಿಕಲ್ 15’ ಮತ್ತು ‘ಡ್ರೀಮ್ ಗರ್ಲ್’ ಚಿತ್ರಗಳು ಹಿಟ್ ಆಗಿವೆ.