Tuesday, 29th November 2022

ಕಂಗನಾಳ ಮಾನನಷ್ಟ ಮೊಕದ್ದಮೆ ವಿಚಾರಣೆ ವರ್ಗಾವಣೆ ಅರ್ಜಿ ತಿರಸ್ಕೃತ

ಮುಂಬೈ: ಸಾಹಿತಿ ಜಾವೇದ್ ಅಖ್ತರ್ ತನ್ನ ವಿರುದ್ಧ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆ ಕುರಿತು ಈಗ ನಡೆಯುತ್ತಿರುವ ವಿಚಾರಣೆ ವರ್ಗಾಯಿಸುವಂತೆ ಕೋರಿ ನಟಿ ಕಂಗನಾ ರಣಾವತ್ ಸಲ್ಲಿಸಿದ್ದ ಅರ್ಜಿಯನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಿರಸ್ಕರಿಸಿದೆ.

ಕಳೆದ ತಿಂಗಳು ರಣಾವತ್ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರ್ಗಾವಣೆ ಮನವಿಯನ್ನು ಸಲ್ಲಿಸಿದ್ದರು. ಅಂಧೇರಿ ಮೆಟ್ರೋ ಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮತ್ತೊಬ್ಬ ನ್ಯಾಯಾಧೀಶರ ಮುಂದೆ ಪ್ರಕರಣವನ್ನು ಮರುಹಂಚಿಕೆ ಮಾಡಬೇಕು. ಏಕೆಂದರೆ ನಾನು ಅದರಲ್ಲಿ ನಂಬಿಕೆ ಕಳೆದುಕೊಂಡಿದ್ದೇನೆ ಎಂದಿದ್ದರು.