Saturday, 27th February 2021

ನ್ಯಾಯಯುತ ವಾತಾವರಣದಿಂದ ಪ್ರಜಾಪ್ರಭುತ್ವ ಯಶಸ್ವಿ

ತುಮಕೂರು: ನ್ಯಾಯಯುತ ವಾತಾವರಣದಲ್ಲಿ ಬದುಕುವ ವಾತಾವರಣ ಸೃಷ್ಟಿಯಾದರೆ ಪ್ರಜಾಪ್ರಭುತ್ವ ಯಶಸ್ವಿಯಾದಂತೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಕ| ಪ್ರೊ. ವೈ. ಎಸ್. ಸಿದ್ದೇಗೌಡ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋ ಹಣ ನೆರವೇರಿಸಿ ಮಾತನಾಡಿದರು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಗಣತಂತ್ರ ವ್ಯವಸ್ಥೆಯ ಆಶಯವಾಗಬೇಕು. ಎಲ್ಲರೂ ಸಂತೋಷ ನೆಮ್ಮದಿಗಳಿಂದ ಬದುಕುವಂತಾಗಬೇಕು. ಆತ್ಮಾಭಿಮಾನದ ಜೀವನ ನಡೆಸಬೇಕು ಎಂದರು.

ವಿದ್ಯಾರ್ಥಿಗಳಲ್ಲಿ ವಿಶ್ಲೇಷಣಾತ್ಮಕ ಮನೋಭಾವ ಬೆಳೆಸಬೇಕು. ಬದುಕಿನ ಯಾವುದೇ ಸವಾಲನ್ನೂ ದಿಟ್ಟತನದಿಂದ ಎದುರಿಸುವ ಕೌಶಲಗಳು ಅವರಲ್ಲಿ ಅಭಿವೃದ್ಧಿಯಾಗುವಂತೆ ನೋಡಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಕುಲಪತಿ ಡಾ. ಬಾಲಕೃಷ್ಣ ಪಿ. ಶೆಟ್ಟಿ, ಪ್ರತಿಯೊಬ್ಬರೂ ತಮ್ಮತಮ್ಮ ಕೆಲಸಗಳನ್ನು ಪ್ರೀತಿಸಬೇಕು. ಆಗಲೇ ಅದು ಪರಿಪೂರ್ಣತೆ ಪಡೆಯಲು ಸಾಧ್ಯ ಎಂದರು.
ಕೊರೋನಾಕ್ಕೆ ನಾವೇ ಔಷಧಿ ಕಂಡು ಹಿಡಿದದ್ದಲ್ಲದೆ ಪ್ರಪಂಚದ 50 ದೇಶಗಳಿಗೆ ಲಸಿಕೆಯನ್ನು ನೀಡುವಷ್ಟರ ಮಟ್ಟಿಗೆ ಬೆಳೆದಿ ದ್ದೇವೆ. ಮುಂದಿನ ಕೆಲವೇ ವರ್ಷಗಳಲ್ಲಿ ಭಾರತ ಪ್ರಪಂಚದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದರು.

ಭಾರತ ತನ್ನತನ ಬೆಳೆಸಿಕೊಳ್ಳುವತ್ತ ದಿಟ್ಟ ಹೆಜ್ಜೆಯಿಟ್ಟಿದೆ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ನಾವಿನ್ನೂ ಎತ್ತರಕ್ಕೆ ಏರಬೇಕಿದೆ ಎಂದರು. ತುಮಕೂರು ವಿವಿ ಕ್ರೀಡಾ ಮತ್ತು ದೈಹಿಕ ಶಿಕ್ಷಣ ವಿಭಾಗದ ಸಂಯೋಜಕ ಸುದೀಪ್ ಕುಮಾರ್ ಆರ್. ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಿಬಂತಿ ಪದ್ಮನಾಭ ಕೆ. ವಿ. ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *