Wednesday, 1st February 2023

ಸಿದ್ದರಾಮಯ್ಯ ಸರಕಾರದಲ್ಲಿಯೇ ನಮ್ಮ ಕ್ಷೇತ್ರದ ಅಭಿವೃದ್ಧಿ

ಮಂಡ್ಯ: ಕುಮಾರಸ್ವಾಾಮಿ ಸಿಎಂ ಆಗಿದ್ದಗಿಂತಲೂ ಸಿದ್ದರಾಮಯ್ಯ ಸರಕಾರವಿದ್ದಾಗಲೇ ನಮ್ಮ ಹೆಚ್ಚಿಿನ ಅಭಿವೃದ್ಧಿಿ ಕೆಲಸಗಳಾಗಿವೆ ಎನ್ನುವ ಮೂಲಕ ಎಚ್‌ಡಿಕೆ ವಿರುದ್ಧ ಜೆಡಿಎಸ್ ಅನರ್ಹ ಶಾಸಕ ನಾರಾಯಣಗೌಡ ವಾಗ್ದಾಾಳಿ ನಡೆಸಿದರು.
ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ಮಾತನಾಡಿ, ಸಿದ್ದರಾಮಯ್ಯರ ಕಾಂಗ್ರೆೆಸ್ ಸರಕಾರಕ್ಕೆೆ ನಾವು ಮತ ಹಾಕಲಿಲ್ಲ. ಆದರೂ ಅವರ ಅವಧಿಯಲ್ಲಿ ನಮ್ಮ ಕ್ಷೇತ್ರಕ್ಕೆೆ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ನವೋದಯ ಶಾಲೆಗಳು ಮಂಜೂರು ಮಾಡಿದರು.

ಆದರೆ, ನಮ್ಮದೇ ಪಕ್ಷ ಅಧಿಕಾರದಲ್ಲಿದ್ದಾಗ ಅವರು, ಶಾಲೆಗಳಿಗೆ ಕಾಂಪೌಂಡ್ ಹಾಕಿಸಲು ಸಾಧ್ಯವಾಗಲಿಲ್ಲ. ಇದಕ್ಕೆೆ ಕಾರಣ ಕ್ಷೇತ್ರದಲ್ಲಿನ ದು ಕಿಡಿಗೇಡಿಗಳು ಎಂದು ಹರಿಹಾಯ್ದರು.

ನನ್ನ ಕ್ಷೇತ್ರದ ಅಭಿವೃದ್ಧಿಿಗಾಗಿ ನಾನು ನನ್ನ ತಾಲೂಕಿಗೆ 700 ಕೋಟಿ ರು. ಯೋಜನೆ ಸಿದ್ಧಪಡಿಸಿಕೊಂಡಿದ್ದೆೆ. ಇದಕ್ಕಾಾಗಿ ಹದಿಮೂರು ತಿಂಗಳು ತಿರುಗಿ ತಿರುಗಿ ಸಾಕಾಗಿ ಹೋಯಿತು. ಏನಾದರೂ ಮನೆಗೆ ಹೋದರೆ ನನ್ನ ಚಪ್ಪಲಿ ಬಿಡುವ ಜಾಗದಲ್ಲಿ ನಿಲ್ಲಿಸಿದರು. ಎರಡನೆ ಬಾರಿಗೆ ನಮ್ಮದೇ ಸರಕಾರ ಇದೆ, ಈಗಲೂ ಅಭಿವೃದ್ಧಿಿ ಮಾಡಿಲ್ಲ ಅಂದ್ರೆೆ ಜನರಿಗೆ ನಾನು ಏನು ಹೇಳಬೇಕು. ಅದಕ್ಕೋೋಸ್ಕರ ಕ್ಷೇತ್ರದ ಅಭಿವೃದ್ಧಿಿಗಾಗಿ ನಾನು ರಾಜೀನಾಮೆ ನೀಡಿದೆ ಪಕ್ಷ ತೊರೆದ ಕಾರಣ ತೆಗೆದಿಟ್ಟರು.
ನಮ್ಮ ರಾಜೀನಾಮೆ ನೀಡಿದ ಬಳಿಕ ಅದೃಷ್ಟ ಎಂಬಂತೆ ನಮ್ಮ ತಾಲೂಕಿನ ಯಡಿಯೂರಪ್ಪ ಅವರೇ ಸಿಎಂ ಆದರು. ಆಗ ನಾನು ಅವರ ಬಳಿ ಹೋಗಿ 700 ಕೋಟಿ ರು. ಅನುದಾನದ ಬಗ್ಗೆೆ ಕೇಳಿದೆ. ಈ ಕ್ಷೇತ್ರದಲ್ಲಿ ಅವರ ಪಕ್ಷದ ಶಾಸಕರು ಇರದಿದ್ದರೂ ಉದಾರವಾಗಿ 700 ಕೋಟಿ ಅನುದಾನ ನೀಡಿದರು. ಇದರ ಜತೆಗೆ ನಮ್ಮ ತಂದೆಯ ಹೆಸರಿನಲ್ಲಿ ಇನ್ನು 300 ಕೋಟಿ ಸೇರಿ ಒಟ್ಟು ಒಂದು ಕೋಟಿ ನೀಡಿದರು. ಇದರ ಜತೆಗೆ ಕ್ಷೇತ್ರದಲ್ಲಿ ಏನೇ ಕೆಲಸ ಇದ್ದರೂ ಮಾಡಿಕೊಡುತ್ತೇನೆ ಎಂಬ ಅಭಯವನ್ನು ನೀಡಿದರು ಎಂದರು.

ಕ್ಷೇತ್ರದಲ್ಲಿನ ಕೆಲ ಪುಣ್ಯಾಾತ್ಮರಿಗೆ ದೇವೇಗೌಡ, ಕುಮಾರಸ್ವಾಾಮಿ, ರೇವಣ್ಣ ಅವರ ಕಿವಿ ಊದುವುದು ಬಿಟ್ಟರೆ, ಬೇರೆ ಏನು ಕೆಲಸವಿಲ್ಲ. ಇನ್ನು ಆ ಪುಣ್ಯಾಾತ್ಮ ಕೃಷ್ಣಪ್ಪ ಅವರು 30 ವರ್ಷ ಹೇಗಿದ್ದರೋ ನನಗೆ ಗೊತ್ತಿಿಲ್ಲ. ನನಗೆ ಆರೂವರೆ ವರ್ಷ ಇರೋಕೆ ಬಾರಿ ಕಷ್ಟ ಆಯಿತು.
– ನಾರಾಯಣಗೌಡ
ಅನರ್ಹ ಶಾಸಕ

error: Content is protected !!