Wednesday, 1st December 2021

ಇಡೀ ವಿಶ್ವವೇ ಧರ್ಮಸ್ಥಳವಾಗಬೇಕು. ಎಲ್ಲೆಲ್ಲೂ ಧರ್ಮ, ನ್ಯಾಯ, ಶಾಂತಿ-ನೆಮ್ಮದಿ ನೆಲೆಸಬೇಕು

ವಿಶ್ವವಾಣಿ ಸುದ್ದಿಮನೆ ಉಜಿರೆ
ಧರ್ಮಸ್ಥಳದಲ್ಲಿ ಅನ್ನದಾನ, ಔಷಧದಾನ, ವಿದ್ಯಾಾದಾನ ಮತ್ತು ಅಭಯದಾನ ಎಂಬ ಚತುರ್ವಿಧ ದಾನಗಳು ನಿತ್ಯೋೋತ್ಸವವಾಗಿದ್ದು, ನೊಂದು ಬಂದವರಿಗೆ ಸಾಂತ್ವನ ಹೇಳಿ ಧೈರ್ಯ ಮತ್ತು ಆತ್ಮವಿಶ್ವಾಾಸ ಮೂಡಿಸುವ ಅಭಯದಾನ ಅತ್ಯಂತ ಶ್ರೇಷ್ಠ ಹಾಗೂ ವಿಶಿಷ್ಠ ದಾನವಾಗಿದೆ. ಶ್ರೀ ಮಂಜುನಾಥ ಸ್ವಾಾಮಿ ಧರ್ಮಾಧಿಕಾರಿಗಳಾದ ‘ಹೆಗ್ಗಡೆ’ಯವರಿಗೆ ನೀಡಿದ ವಿಶೇಷ ಅನುಗ್ರಹ ಇದಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಶುಕ್ರವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಉಜಿರೆಯಿಂದ ಧರ್ಮಸ್ಥಳಕ್ಕೆೆ ಪಾದಯಾತ್ರೆೆಯಲ್ಲಿ ಬಂದ ಹತ್ತು ಸಾವಿರಕ್ಕೂ ಮಿಕ್ಕಿಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
ಧರ್ಮಸ್ಥಳದ ತೀರ್ಮಾನವೇ ಅಂತಿಮವಾಗಿದೆ. ವ್ಯವಹಾರದಲ್ಲಿ ನಷ್ಟ, ಶಾಪ ದೋಷ, ವಾಕ್‌ದೋಷ, ಕೌಟುಂಬಿಕ ಕಲಹ, ವ್ಯಾಾಪಾರದಲ್ಲಿ ಸೋಲು, ಮನಸ್ತಾಾಪ, ದೈವ – ಪ್ರೇತಗಳ ಬಾಧೆ, ಇತ್ಯಾಾದಿಗಳಿಂದ ನೊಂದವರು ಧರ್ಮಸ್ಥಳಕ್ಕೆೆ ಬಂದು ಹೆಗ್ಗಡೆಯವರಲ್ಲಿ ನಿವೇದನೆ ಮಾಡಿಕೊಂಡಾಗ, ಶ್ರೀ ಸ್ವಾಾಮಿಗೆ ಶರಣಾಗಿ, ಹೆದರಬೇಡಿ, ಧೈರ್ಯವಾಗಿರಿ ಎಂದು ಅವರಿಗೆ ಸಾಂತ್ವನ ಹೇಳಿ ಹೆಗ್ಗಡೆಯವರು ಅಭಯ ನೀಡುತ್ತಾಾರೆ. ಜನರಿಗೆ ಬದುಕು ಕಟ್ಟಿಿಕೊಳ್ಳಲು ಪ್ರೇರಣೆ, ಮಾರ್ಗದರ್ಶನ ನೀಡುತ್ತಾಾರೆ. ಇದು ‘ಹೆಗ್ಗಡೆ’ ಪೀಠಕ್ಕೆೆ ಶ್ರೀ ಮಂಜುನಾಥ ಸ್ವಾಾಮಿ ನೀಡಿದ ವಿಶೇಷ ಅನುಗ್ರಹವಾಗಿದೆ ಎಂದರು.

ಅವರವರ ವೃತ್ತಿಿ, ಪ್ರವೃತ್ತಿಿಯನ್ನು ಪ್ರೀತಿಸಿ, ಗೌರವಿಸಿದಾಗ ಬದುಕು ಪ್ರಿಿಯವಾಗುತ್ತದೆ. ಸುಂದರವಾಗುತ್ತದೆ ಹಾಗೂ ಹಗುರವಾಗುತ್ತದೆ. ಕಷ್ಟಗಳು ಬಂದಾಗ ಒತ್ತಡ ಹೆಚ್ಚಾಾದಾಗ ಬದುಕು ಭಾರವಾಗುತ್ತದೆ. ಧರ್ಮದ ಮೂಲ ಉದ್ದೇಶವೇ ಬದುಕನ್ನು ಸುಖ-ಶಾಂತಿಯಿಂದ, ಪ್ರೀತಿ-ವಿಶ್ವಾಾಸದಿಂದ ಅನುಭವಿಸಲು ಪ್ರೇರಣೆ ನೀಡುವುದೇ ಆಗಿದೆ. ಆದುದರಿಂದಲೇ ಖ್ಯಾಾತ ಗಾಯಕ ರವೀಂದ್ರ ಜೈನ್ ಧರ್ಮಸ್ಥಳದಲ್ಲಿ ನಡೆದ ಮೊದಲ ಬಾಹುಬಲಿ ಮಹಾ ಮಸ್ತಕಾಭಿಷೇಕ ಸಂದರ್ಭದಲ್ಲಿ ‘‘ಸಾರೀ ದುನಿಯಾ ಧರ್ಮಸ್ಥಳ್ ಹೋ’’ ಎಂದು ಆಶಯ ವ್ಯಕ್ತಪಡಿಸಿದ ಹಾಡನ್ನು ಹಾಡಿದರು.

ಎಲ್ಲರೂ ಪರಸ್ಪರ ಪ್ರೀತಿ-ವಿಶ್ವಾಾಸದಿಂದ, ಸೇವಾ ಮನೋಭಾವದಿಂದ ಜೊತೆಯಾಗಿ ಸಾಗಿದರೆ ದೇವರು ಸದಾ ಪರೋಕ್ಷವಾಗಿ ನಮ್ಮ ಜೊತೆ ಇದ್ದು ನಾವು ದೇವರನ್ನು ಸ್ಪರ್ಶಿಸಬಹುದು. ಅನುಭವಿಸಿ ಆನಂದಿಸಬಹುದು. ಇದಕ್ಕಾಾಗಿ ಎಲ್ಲರಲ್ಲಿ ಶುದ್ಧ ಚಾರಿತ್ರ್ಯ, ಆತ್ಮ ವಿಶ್ವಾಾಸ ನಂಬಿಕೆ, ಪ್ರೀತಿ-ವಿಶ್ವಾಾಸ, ಸೇವಾ ಮನೋಭಾವ ಇರಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.

ನಿರಂತರ ಪರಿವರ್ತನಾಶೀಲವಾದ ಜಗತ್ತಿಿನಲ್ಲಿ ನಾವು ಸಂದರ್ಭಕ್ಕೆೆ ಹಾಗೂ ಕಾಲಕ್ಕೆೆ ಸರಿಯಾಗಿ ಹೊಂದಿಕೊಂಡು ಆದರ್ಶ ವ್ಯಕ್ತಿಿತ್ವ ಬೆಳೆಸಿಕೊಳ್ಳಬೇಕು. ಹೊಗಳಿಕೆಗೆ ಹಿಗ್ಗಬೇಡಿ, ತೆಗಳಿಕೆಗೆ ಕುಗ್ಗಬೇಡಿ. ಎಲ್ಲವನ್ನೂ ಆತ್ಮವಿಶ್ವಾಾಸದಿಂದ ಮತ್ತು ಸಮಚಿತ್ತದಿಂದ ಸ್ವೀಕರಿಸಿ ಆದರ್ಶ ಜೀವನ ನಡೆಸಿ ಎಂದು ಸಲಹೆ ನೀಡಿದ ಹೆಗ್ಗಡೆಯವರು ಶ್ರೀ ಮಂಜುನಾಥ ಸ್ವಾಾಮಿಯ ಅನುಗ್ರಹದಿಂದ ಮತ್ತು ಜನರ ಪ್ರೀತಿ ವಿಶ್ವಾಾಸದಿಂದ ಇನ್ನಷ್ಟು ಹೆಚ್ಚು ಸೇವಾಕಾರ್ಯಗಳನ್ನು ಮಾಡಿ ಬೆಳ್ತಂಗಡಿ ತಾಲೂಕನ್ನು ಮಾದರಿ ತಾಲೂಕಾಗಿ ಅಭಿವೃದ್ಧಿಿಪಡಿಸಲಾಗುವುದು ಎಂದು ಹೆಗ್ಗಡೆಯವರು ಭರವಸೆ ನೀಡಿದರು.
ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಉಜಿರೆಯ ಶ್ರೀ ಜನಾರ್ದನ ಸ್ವಾಾಮಿ ದೇವಸ್ಥಾಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆೆಟ್ನಾಾಯ, ಪ್ರೊೊ. ಎಸ್. ಪ್ರಭಾಕರ್, ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಿಯಾ ಹರ್ಷೇಂದ್ರ ಕುಮಾರ್, ಡಾ. ಬಿ. ಯಶೋವರ್ಮ ಇದ್ದರು.,

ವಸ್ತುಪ್ರದರ್ಶನ ಉದ್ಘಾಾಟನೆ
ಕನ್ನಡ ಮಾಧ್ಯಮ ಪ್ರೌೌಢಶಾಲಾ ಆವರಣದಲ್ಲಿ ಆಯೋಜಿಸಿದ ರಾಜ್ಯಮಟ್ಟದ ವಸ್ತುಪ್ರದರ್ಶನವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಾಟಿಸಿ ಶುಭ ಹಾರೈಸಿದರು.
ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆೆಗಳ ಉಪಾಧ್ಯಕ್ಷ ಪ್ರೊೊ. ಎಸ್. ಪ್ರಭಾಕರ್ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಾಟಿಸಿದರು,
ವಸ್ತುಪ್ರದರ್ಶನದಲ್ಲಿ 197 ಮಳಿಗೆಗಳಿದ್ದು ಪ್ರತಿ ದಿನ ಬೆಳಿಗ್ಗೆೆ ಗಂಟೆ 9.00 ರಿಂದ ರಾತ್ರಿಿ 9.00 ಗಂಟೆ ವರೆಗೆ ಉಚಿತ ಪ್ರವೇಶಾವಕಾಶವಿದೆ.