Friday, 12th July 2024

ಅನುಮತಿ ಇಲ್ಲದೇ ಹೊಸ ಶಾಲೆ, ತರಗತಿ ಪ್ರಾರಂಭಿಸಿದರೆ ಕ್ರಿಮಿನಲ್ ದಾವೆ

ಬೀದರ್ :

ಇಲಾಖಾ ಅನುಮತಿ ಇಲ್ಲದೇ ಆಡಳಿತ ಮಂಡಳಿಯವರು 2020-21 ನೇ ಸಾಲಿಗೆ ಹೊಸ ಶಾಲೆ ಪ್ರಾರಂಭಿಸುವುದಾಗಲಿ ಇಲ್ಲವೇ ಪ್ರಚಾರ ಮಾಡುವುದಾಗಲಿ ಅಥವಾ 1 ರಿಂದ 5ನೇ ತರಗತಿ ಅನುಮತಿ ಪಡೆದು ಇಲಾಖೆ ಅನುಮತಿ ಇಲ್ಲದೇ 6 ರಿಂದ 8ನೇ ವರೆಗೆ ಹೆಚ್ಚಿನ ತರಗತಿ ಪ್ರಾರಂಭಿಸುವುದಾಗಲಿ ಮಾಡಿದ್ದಲ್ಲಿ ಅಂತಹ ಶಾಲೆಗಳನ್ನು ಅನಧಿಕೃತ ಶಾಲೆಯೆಂದು ಪರಿಗಣಿಸಿ ಕರ್ನಾಟಕ ಶಿಕ್ಷಣ ಕಾಯಿದೆ-1983 ರಂತೆ ಕ್ರಿಮಿನಲ್ ದಾವೆ ಹೂಡಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಬೀದರನ ಉಪ ನಿರ್ದೇಶಕರು (ಆಡಳಿತ) ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, 2020-21ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದ್ದು, ಹೊಸ ಶಾಲೆ ಅನುಮತಿ ಕೋರಿ ಆಡಳಿತ ಮಂಡಳಿಯವರು ಈಗಾಗಲೆ ಇಲಾಖೆ ನಿಗದಿ ಪಡಿಸಿರುವ ತಂತ್ರಾಂಶದ ಮುಖಾಂತರ ಪ್ರಸ್ತಾವನೆ ಸಲ್ಲಿಸಿದ್ದು, ಆಡಳಿತ ಮಂಡಳಿಯವರು ಪ್ರಸ್ತಾವನೆ ಸಲ್ಲಿಸಿರುವ ಮಾತ್ರಕ್ಕೆ ಅನುಮತಿ ದೊರೆತಿದೆ ಎಂದು ಭಾವಿಸಿ ಶಾಲೆ ಪ್ರಾರಂಭಿಸುವುದಾಗಲಿ ಅಥವಾ ದಾಖಲಾತಿ ಮಾಡುವಂತೆ ಕೋರಿ ಪ್ರಚಾರ ಮಾಡುವುದಾಗಲಿ ಮಾಡುವಂತಿಲ್ಲ ಹಾಗೂ 1 ರಿಂದ 5ನೇ ತರಗತಿ ಇಲಾಖೆ ಅನುಮತಿ ಪಡೆದು ಮುಂದಿನ ತರಗತಿಗಳು ಅಂದರೆ 6 ರಿಂದ 8ನೇ ತರಗತಿ ಇಲಾಖೆ ಅನುಮತಿ ಇಲ್ಲದೇ ಹೆಚ್ಚಿನ ತರಗತಿಗಳು ಸಹ ಪ್ರಾರಂಭಿಸುವAತಿಲ್ಲ ಎಂದು ಡಿಡಿಪಿಐ ಅವರು ತಿಳಿಸಿದ್ದಾರೆ.

ಪೋಷಕರಲ್ಲಿ ಮನವಿ:

ಪೋಷಕರು ತಮ್ಮ ಮಕ್ಕಳಿಗೆ ಯಾವುದೇ ಖಾಸಗಿ ಶಾಲೆಯಲ್ಲಿ ದಾಖಲಾತಿ ಮಾಡಿಸುವ ಪೂರ್ವದಲ್ಲಿ ಸಂಬಂಧಿಸಿದ ಶಾಲೆಯು ಇಲಾಖೆಯಿಂದ ಅನುಮತಿ ಪಡೆದಿರುವ ಬಗ್ಗೆ ಪ್ರಸ್ತುತ ಸಾಲಿನವರೆಗೆ ಮಾನ್ಯತೆ ಪಡೆದಿರುವ ಬಗ್ಗೆ ಹಾಗೂ ಶಾಲೆ ಯಾವ ಮಾಧ್ಯಮದಲ್ಲಿ ಅನುಮತಿ ಪಡೆಯಲಾಗಿದೆ ಎಂಬುದರ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ತಮ್ಮ ಮಕ್ಕಳಿಗೆ ದಾಖಲಾತಿ ಮಾಡಿಸಲು ಕ್ರಮವಹಿಸುವಂತೆ ತಿಳಿಸಿದೆ.

ಸೂಚನಾ ಫಲಕದಲ್ಲಿ ಪ್ರಕಟಿಸಿ:

ಇಲಾಖೆಯಿಂದ ಅನುಮತಿ ಪಡೆದ ಶಿಕ್ಷಣ ಸಂಸ್ಥೆಯವರು ತಮ್ಮ ಶಾಲೆಯ ಅನುಮತಿ ಪತ್ರ, ಮಾನ್ಯತೆ ನವೀಕರಣ ಶಾಲಾ ಶುಲ್ಕದ ವಿವರಗಳನ್ನು ಪೋಷಕರಿಗೆ ಮನವರಿಕೆಯಾಗುವಂತೆ ಕಡ್ಡಾಯವಾಗಿ ಆಯಾ ಶಾಲೆಯ ಸೂಚನಾ ಫಲಕದಲ್ಲಿ ಪ್ರಕಟಿಸಲು ತಿಳಿಸಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಬೀದರನ ಉಪ ನಿರ್ದೇಶಕರ ಕಚೇರಿಯ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!