Friday, 12th July 2024

ಕೃಷಿ ವಸ್ತುಗಳ ಮಾರಾಟಕ್ಕೆ ಅವಕಾಶ

ಬೀದರ

ಬೀದರ್ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳು ಮತ್ತು ಮುಂಗಾರು ಬಿತ್ತನೆಗೆ ಸಿದ್ದತೆ ಮಾಡಿಕೊಳ್ಳಲು, ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕಗಳು ಅವಶ್ಯಕ ವಸ್ತುಗಳ ಕಾಯ್ದೆಯಡಿಯಲ್ಲಿ ಬರುವ ಹಿನ್ನಲೆಯಲ್ಲಿ ರೈತರ ಹಿತದೃಷ್ಠಿಯಿಂದ ಹಾಗೂ ಕೇಂದ್ರ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿರುವ ಅಧಿಕೃತ ಪರವಾನಿಗೆ ಪಡೆದ ಕೃಷಿ ಪರಿಕರ ಮಾರಾಟಗಾರರು ತಮ್ಮ ಮಳಿಗೆಗಳಲ್ಲಿ ಮತ್ತು ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ವ್ಯವಹಾರ ಮಾಡಲು ಷರತ್ತುಗಳಿಗೆ ಒಳಪಟ್ಟು ಅನುಮತಿ ನೀಡಿ ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ್ ಅವರು ಆದೇಶ ಹೊರಡಿಸಿದ್ದಾರೆ.
ರಸಗೊಬ್ಬರ, ಕೀಟನಾಶಕ ಹಾಗೂ ಬಿತ್ತನೆ ಬೀಜಗಳ ಉತ್ಪಾದನಾ ಘಟಕಗಳು, ಮಾರ್ಕೆಟಿಂಗ್ ಸಂಸ್ಥೆಗಳ ಸಿಬ್ಬಂದಿಗಳು ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ಅಗ್ರಿ ಆಕ್ಟ್ 71/2020 ರನ್ವಯ ಕಾರ್ಯನಿರ್ವಹಣೆ ಮಾಡಬೇಕು.
ಮಾರಾಟ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಸ್ಕ್ಯಾನರ್ಗಳನ್ನು ಬಳಸದೇ ಓಟಿಪಿ ಮೂಲಕ ವ್ಯವಹಾರ ಮಾಡುವುದು, ಮಾರಾಟ ಕೇಂದ್ರಗಳಲ್ಲಿ ಸ್ಯಾನಿಟೈಸರ್ ಲಿಕ್ವಿಡ್ ಕಡ್ಡಾಯವಾಗಿ ಬಳಸುವುದು, ಮಾರಾಟ ಕೇಂದ್ರಗಳಿಗೆ ಬರುವ ರೈತರ ನಡುವೆ ಒಂದು ಮೀಟರ್ ಅಂತರ ಕಾಯ್ದುಕೊಳ್ಳಲು ಕ್ರಮವಹಿಸುವುದು, ಮಾರಾಟ ಕೇಂದ್ರಗಳಿಗೆ ಬರುವ ರೈತರ ವ್ಯಾಪಾರವಾದ ಕೂಡಲೆ ಮಾರಾಟ ಕೇಂದ್ರದಿಂದ ತಕ್ಷಣವೇ ತೆರಳುವುದು, ನಿಗಧಿಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಅಥವಾ ಯಂತ್ರೋಪಕರಣಗಳಿಗೆ ಹೆಚ್ಚಿನ ಬಾಡಿಗೆ ದರ ಪಡೆದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎನ್ನುವ ಷರತ್ತುಗಳನ್ನು ಪಾಲನೆ ಮಾಡಬೇಕು ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.
ಈಗಾಗಲೆ ಕೆಲವು ತೋಟಗಾರಿಕೆ ಬೆಳೆಗಳು ಇರುವುದರಿಂದ ಹಾಗೂ ಪೂರ್ವ ಮುಂಗಾರು ಮತ್ತು ಮುಂಗಾರು ಆರಂಭಗೊಳ್ಳುವುದರಿಂದ ರೈತರಿಗೆ ಅವಶ್ಯವಾದ ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕಗಳನ್ನು ದಾಸ್ತಾನು ಮಾಡುವುದು ಹಾಗು ರೈತರ ಬೇಡಿಕೆಯನುಸಾರ ವಿತರಿಸಲು ಕ್ರಮಕೈಗೊಳ್ಳಬೇಕಾಗಿದೆ. ಮೇಲಿನ ಪರಿಕರಗಳು ಅವಶ್ಯಕ ವಸ್ತುಗಳ ಕಾಯ್ದೆಯಡಿ ಬರುವ ಹಿನ್ನಲೆಯಲ್ಲಿ ಇವುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವುದು ಅತ್ಯವಶ್ಯಕವಾಗಿರುತ್ತದೆ. ಅಲ್ಲದೇ ರೈತರು ಬಾಡಿಗೆ ಆಧಾರಿತ ಸೇವಾ ಕೇಂದ್ರಗಳಲ್ಲಿರುವ ಯಂತ್ರೋಪಕರಣಗಳನ್ನೂ ಬಳಸಲು ಅವಕಾಶ ಮಾಡಿಕೊಡುವುದು ಅವಶ್ಯಕವಾಗಿರುವುದರಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕರೋನಾ ಹರಡುವಿಕೆ ತಡೆಯಲು ಅಬಕಾರಿ

Leave a Reply

Your email address will not be published. Required fields are marked *

error: Content is protected !!