Wednesday, 29th May 2024

ಚಿಕ್ಕಮಗಳೂರಿನ ತರಿಕೆರೆಯ ಗರ್ಭಿಣಿಯಲ್ಲಿ ಸೋಂಕು ಇಲ್ಲ; ಜಿಲ್ಲಾಧಿಕಾರಿ

ಚಿಕ್ಕಮಗಳೂರು

ಚಿಕ್ಕಮಗಳೂರು ಜಿಲ್ಲೆಯ ತರಿಕೆರೆಯಲ್ಲಿ ಗರ್ಭಿಣಿಯೋರ್ವರಲ್ಲಿ ಸೋಂಕು ದೃಢಪಟ್ಟಿದೆ ಎಂಬ ಅರೋಗ್ಯ ಇಲಾಖೆಯ ಪ್ರಾಥಮಿಕ ವರದಿ ತಪ್ಪಾಗಿದ್ದು, ಆಕೆಯಲ್ಲಿ ಸೋಂಕು ಇಲ್ಲ ಎಂದು ತಿಳಿದುಬಂದಿದೆ.

ಗರ್ಭಿಣಿಯ ಗಂಟಲ ದ್ರವದ ಮಾದರಿಯನ್ನು ಮತ್ತೆ ಐದು ಬಾರಿ ಪರೀಕ್ಷೆಗೊಳಪಡಿಸಿದ್ದು, ಸೋಂಕು ಇಲ್ಲದಿರುವುದು ಖಚಿತವಾಗಿದೆ. ಜಿಲ್ಲೆಯಲ್ಲಿ ಮತ್ತೆ ಮೂವರಿಗೆ ಕೋವಿಡ್ ಗುರುವಾರ ಪತ್ತೆಯಾಗಿದ್ದು, ಸೋಂಕಿತರ ಸೋಂಕಿತರ ಸಂಖ್ಯೆ 14ಕ್ಕೇರಿಕೆಯಾಗಿದೆ.

ಈ ಮೂವರಲ್ಲಿ ಮೂಡಿಗೆರೆ ತಾಲ್ಲೂಕಿನ ಒಬ್ಬರು ದೆಹಲಿಯಿಂದ ಬಂದಿದ್ದವರು, ಶಂಗೇರಿ ತಾಲ್ಲೂಕಿನ ಇಬ್ಬರು ಮಹಾರಾಷ್ಟ್ರದಿಂದ ಬಂದಿದ್ದವರು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!