Saturday, 15th June 2024

ಬಳ್ಳಾರಿ: ಕ್ವಾರಂಟೈನ್​ನಲ್ಲಿದ್ದ ಇಬ್ಬರು ಪರಾರಿ

ಬಳ್ಳಾರಿ:

ತಾಲೂಕಿನ ಯರ್ರಗುಡಿ ಹೊರ ವಲಯದ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್​ನಲ್ಲಿದ್ದ ಇಬ್ಬರು ಪರಾರಿಯಾಗಿದ್ದಾರೆ.

ಪರಾರಿ ಇಬ್ಬರನ್ನು ನೆರೆಯ ಆಂಧ್ರಪ್ರದೇಶದ ಕಣೇಕಲ್ ಮಂಡಲದ ಯರ್ರಗುಂಟ್ಲ ಗ್ರಾಮದ ಮುನಿಸ್ವಾಮಿ, ಹೊನ್ನೂರಸ್ವಾಮಿ ಎಂದು ಗುರುತಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ತಾಲೂಕಿನ ಅಮರಾಪುರ ಗ್ರಾಮದಲ್ಲಿ ನಡೆದಿದ್ದ ಮದುವೆ ಸಮಾರಂಭಕ್ಕೆ ಇವರಿಬ್ಬರು ಅನುಮತಿ ಪಡೆಯದೆ ಆಗಮಿಸಿದ್ದರು.

ಈ ವಿಷಯ ತಿಳಿದ ಆರ್ ​ಆರ್ ತಂಡದ ಮುಖ್ಯಸ್ಥ ಹಾಗೂ ತಹಶೀಲ್ದಾರ್​ ಯು. ನಾಗರಾಜ ಮತ್ತವರ ತಂಡ ಮದುವೆ ಮನೆಗೆ ನುಗ್ಗಿ ವಧುವರ ಸೇರಿದಂತೆ ಅನೇಕ ಜನರನ್ನು ಹೊಸ ಯರ್ರಗುಡಿ ಗ್ರಾಮ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಿದ್ದರು.

ಇಲ್ಲಿರಲು ಸಾಧ್ಯವಾಗದೆ ಈ ಇಬ್ಬರು ವಸತಿ ನಿಲಯದ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ. ಈ ಸಂಬಂಧ ಮೋಕಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!