Saturday, 15th June 2024

ಬಳ್ಳಾರಿ ಜಿಲ್ಲೆಯಲ್ಲಿ ಮತ್ತೊಂದು ಪಾಸಿಟಿವ್:ಅಹಮದಾಬಾದ್ ನಿಂದ ಹರಪನಹಳ್ಳಿಗೆ ಬಂದ ವ್ಯಕ್ತಿ ಸೋಂಕಿತ

ಬಳ್ಳಾರಿ:

ಹರಪನಹಳ್ಳಿ ತಾಲೂಕು ಮೂಲದ ವ್ಯಕ್ತಿಯೊಬ್ಬನಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ನಕುಲ್ ತಿಳಿಸಿದ್ದಾರೆ .

ಅಹಮದಾಬಾದ್ ನಿಂದ ಹಿಂತಿರುಗಿದ ಮೂವರನ್ನು ಚೆಕ್ ಪೋಸ್ಟ್ ನಲ್ಲಿ ಮೆಡಿಕಲ್ ಪರೀಕ್ಷೆಗೆ ಒಳಪಡಿಸಿದಾಗ ಓರ್ವನಿಗೆ ವೈರಸ್ ಸೋಂಕು ತಗುಲಿದ್ದು ಪತ್ತೆಯಾಗಿದೆ ಆತನನ್ನು ಜಿಲ್ಲೆಯ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಿಬ್ಬರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ .

ಅಹಮದಾಬಾದ್ ನಿಂದ ಹಿಂತಿರುಗಿದ ಇವರನ್ನು ಚೆಕ್ ಪೋಸ್ಟ್ ನಲ್ಲಿಯೇ ತಡೆ ಹಿಡಿದು ನೇರವಾಗಿ ಮೆಡಿಕಲ್ ಪರೀಕ್ಷೆಗೆ ಕರೆದೊಯ್ಯಲಾಗಿದೆ ಚೆಕ್ ಪೋಸ್ಟ್ ನಲ್ಲಿ ಬಂದೋಬಸ್ತಿಗೆ ಇದ್ದ ಪಿಎಸ್ಐ ನಾಯಕ್ ಎನ್ನುವವರ ಸಮಯಪ್ರಜ್ಞೆಯಿಂದಾಗಿ ನಿನ್ನೆ ಮಧ್ಯರಾತ್ರಿ ಈ ಮೂವರನ್ನು ನೇರವಾಗಿ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದರಿಂದ ಓರ್ವನಿಗೆ ಸೋಂಕು ಇರುವುದು ಪತ್ತೆಯಾಗಿದೆ ಆತನನ್ನು ನಿಗದಿತ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಇನ್ನಿಬ್ಬರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಇವರಾರು ಹರಪನಹಳ್ಳಿ ತಾಲೂಕನ್ನು ಪ್ರವೇಶಿಸಲಿಲ್ಲ ಹೀಗಾಗಿ ಅಲ್ಲಿ ಕಂಟೈನ್ಮೆಂಟ್ ಝೋನ್ ಮಾಡಲಾಗಿಲ್ಲ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!