Saturday, 15th June 2024

ವೈದ್ಯಕೀಯ ಸಲಕರಣೆಗಳಿಗಾಗಿ ರಾಜ್ಯಸಭಾ‌ ಸದಸ್ಯ ಡಾ.ಸೈಯದ್ 1 ಕೋಟಿ ದೇಣಿಗೆ

ಬಳ್ಳಾರಿ:
ಕೊರೋನಾ ವೈರಾಣು(ಕೋವಿಡ್-19) ವನ್ನು ತಡೆಗಟ್ಟಲು ಬಳ್ಳಾರಿ ಜಿಲ್ಲೆಗೆ ಬೇಗಾಗಿರುವ ಅಗತ್ಯ ವೈದ್ಯಕೀಯ ಸಲಕರಣೆಗಳ ಹಾಗೂ ನೈರ್ಮಲೀಕರಣ ಸಲುವಾಗಿ ನಾನು ನನ್ನ ರಾಜ್ಯಸಭಾ ಸದಸ್ಯರ ನಿಧಿಯಿಂದ ಒಂದು ಕೋಟಿ ರೂಪಾಯಿಗಳನ್ನು ನೀಡಲು ಮುಂದಾಗಿದ್ದು; ಬಳ್ಳಾರಿ ಜಿಲ್ಲಾಧಿಕಾರಿಗಳು ಈ ಒಂದು ಕೋಟಿ ರೂಪಾಯಿಗಳ ಮೊತ್ತವನ್ನು ಸದುಪಯೋಗಿಸಿಕೊಳ್ಳಬೇಕು ಎಂದು ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರ ಬಳ್ಳಾರಿ ಜಿಲ್ಲೆಯ ಸಾರ್ವಜನಿಕರು ತಮ್ಮ ಕುಟುಂಬಗಳ ಹಾಗೂ ನಮ್ಮ ದೇಶದ ಹಿತದೃಷ್ಠಿಯಿಂದ ಸರ್ಕಾರವು ಲಾಕ್ ಡೌನ್ ಮಾಡಿರುವ ದಿನಗಳವರಗೆ ತಮ್ಮ ತಮ್ಮ ಮನೆಗಳಲ್ಲಿಯೇ ಸ್ವಚ್ಛ ಹಾಗೂ ಸುರಕ್ಷಿತವಾಗಿ ಇದ್ದು, ಸರ್ಕಾರದ ಹಾಗೂ ಜಿಲ್ಲಾಡಳಿತದ ನಿರ್ದೇಶನಗಳನ್ನು ಕಟ್ಟು-ನಿಟ್ಟಾಗಿ ಪಾಲಿಸಿ ಯಾವುದೇ ರೀತಿಯ ತೊಂದರೆಗೆ ಈಡಾಗಬಾರದೆಂದು‌ ಅವರು‌ ವಿನಂತಿಸಿದ್ದಾರೆ.
ಈ ಕೊರೋನಾ ವೈರಾಣನ್ನು ತಡೆಗಟ್ಟಲು ವಿವಿಧ ದೇಶಗಳು ಸುಮಾರು 3 ರಿಂದ 6 ತಿಂಗಳುಗಳ ಅವಧಿಗೆ ಲಾಕ್ ಡೌನ್ ಅನ್ನು ಮಾಡಿರುತ್ತಾರೆ. ನಮ್ಮ ಸರ್ಕಾರವು ಸಹ ದೇಶಾದ್ಯಂತ 21 ದಿನಗಳ ಕಾಲ (ಅಂದರೆ ದಿನಾಂಕ: 25.03.2020 ರಿಂದ 14.04.2020 ರವರೆಗೆ)
ಲಾಕ್ ಡೌನ್ ಮಾಡಿ ಆದೇಶಿಸಿದೆ. ನಮ್ಮ ದೇಶದಲ್ಲಿ ಈಗಾಗಲೇ ಕೊರೋನಾ ವೈರಾಣು 3 ನೇ ಹಂತದ ಹತ್ತಿರದಲ್ಲಿದ್ದು, ಸದರಿ ವೈರಾಣು ಒಬ್ಬರಿಂದ ಇನ್ನೊಬ್ಬರಿಗೆ ಸಾಂಕ್ರಾಮಿಕವಾಗಿ ಪರಿಣಮಿಸಿದ್ದಲ್ಲಿ, ಶಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳು ಇರುತ್ತವೆ. ಸದರಿ ವೈರಾಣು ನಮಗೆ, ನಮ್ಮ ಮಕ್ಕಳಿಗೆ, ನಮ್ಮ ಕುಟುಂಬಸ್ಥರಿಗೆ, ನಮ್ಮ ಅಕ್ಕ-ಪಕ್ಕದ ಮನೆಯವರಿಗೆ ಹಾಗೂ ಇನ್ನೀತರರಿಗೆ ಸಾಂಕ್ರಮಿಕವಾಗಿ ಹರಡದಿರಲು ನಾವು ಮನೆಯಲ್ಲಿಯೇ ಇರುವುದು ಅನಿವಾರ್ಯ ಪ್ರಸಂಗ ಹಾಗೂ ನಮ್ಮ ಆಧ್ಯ ಕರ್ತವ್ಯವಾಗಿರುತ್ತದೆ ಎಂದು ಅವರು ವಿವರಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಾರ್ವಜನಿಕರಿಗೆ ಬೇಕಾಗಿರುವ ಅಗತ್ಯ ವಸ್ತುಗಳಾದ ತರಕಾರಿ, ಹಾಲು, ಹಣ್ಣು ಹಾಗೂ ಇನ್ನೀತರೆ ದಿನಸಿ ವಸ್ತುಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಬಳ್ಳಾರಿ ಜಿಲ್ಲಾಡಳಿತವು ಪೂರ್ವಭಾಗಿಯಾಗಿ ಸೂಕ್ತ ಸಿದ್ಧತೆಗಳನ್ನು ಮಾಡಿಕೊಂಡಿದ್ದು; ಸಾರ್ವಜನಿಕರು ಯಾವುದೇ ರೀತಿಯ ಆತಂಕವನ್ನು ಪಡದೇ ಜಿಲ್ಲಾಡಳಿತ ಪ್ರಾಧಿಕಾರಗಳ ಮಾರ್ಗಸೂಚಿಗಳನ್ವಯ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಇತರರೊಂದಿಗೆ ನುಗ್ಗಾಟ ಮಾಡದೇ ನಿಗಧಿತ ಅಂತರದಿಂದ ಖರೀದಿಸಲು ಕೋರುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಸದರಿ ಕೊರೋನಾ ವೈರಾಣನ್ನು ತಡೆಗಟ್ಟಲು ಬಳ್ಳಾರಿ ಜಿಲ್ಲಾಡಳಿತ ಪರವಾಗಿ ನಾನು ಮತ್ತು ನನ್ನ ಪಕ್ಷದ ಕಾರ್ಯಕರ್ತರು ಎಲ್ಲಾ ರೀತಿಯಿಂದ ಬೆಂಬಲ ಹಾಗೂ ಸಹಾಯ ಮಾಡಲು ಸಿದ್ಧರಾಗಿರುತ್ತೇವೆ. ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿ ನನ್ನ ತಂಡದವರು ಹಾಗೂ ನನ್ನ ಸ್ನೇಹಿತರು ಬಡವರಿಗೆ, ನಿರಾಶ್ರಿತರಿಗೆ ಹಾಗೂ ವಲಸಿಗರಿಗೆ ಪ್ರತಿನಿತ್ಯ ಸಹಾಯಸ್ತ ಮಾಡುತ್ತಿದ್ದು, ಸಾರ್ವಜನಿಕರು ಸಹ ತಮ್ಮ ಅಕ್ಕ-ಪಕ್ಕದ ಬಡ ಕುಟುಂಬಗಳಿಗೆ ತಮಗೆ ಕೈಲಾದಷ್ಟು ಸಹಾಯ ಮಾಡಲು ಕೋರುತ್ತೇನೆ. ಈ ನಿಟ್ಟಿನಲ್ಲಿ ನಾನು ಸಹ ಬಳ್ಳಾರಿ ಜನತೆಗೆ ಸಹಾಯ ಮಾಡಲು ಎಲ್ಲಾ ರೀತಿಯಿಂದ ಸಿದ್ದನಾಗಿರುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!