Friday, 13th December 2024

ಅ.31 ರಿಂದ ನ.8ರವರೆಗೆ ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನ : ಚಂದ್ರ ಮೊಗೇರ

ರಾಯಚೂರು: ಹಿಂದೂ ಜನಜಾಗೃತಿ ಸಮಿತಿಯ ದ್ವಿದಶಕ ಪೂರ್ತಿಯ ಅಂಗವಾಗಿ ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನ ಆಗಸ್ಟ್ 31 ರಿಂದ ನವೆಂಬರ್ 8 ರವರೆಗೆ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಮಿತಿ ಸಮನ್ವಯಕ ಚಂದ್ರ ಮೊಗೇರ ಹೇಳಿದರು.

ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತ ನಾಡಿ, ಈ ಅಭಿಯಾನದ ಅಂಗವಾಗಿ ದೇಶಾದ್ಯಂತ 2 ಸಾವಿರ ಕ್ಕೂ ಹೆಚ್ಚು ಸ್ಥಳಗಳಲ್ಲಿ ಹಿಂದೂ ರಾಷ್ಟ್ರದ ಪ್ರತಿಜ್ಞೆ ತೆಗೆದುಕೊಳ್ಳಲಾಗುತ್ತದೆ ಎಂದರು.

ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನದಲ್ಲಿ ಒಂದೂ ರಾಷ್ಟ್ರ ಸಂಕಲ್ಪ ಅಭಿ ಯಾನದ ಹಿಂದೂ ರಾಷ್ಟ್ರದ ಅವಶ್ಯಕತೆ,ಹಿಂದೂ ಧರ್ಮದ ಮಹಾನ,ಶೌರ್ಯ ಜಾಗೃತಿಯ ಅಗತ್ಯ, ಲವ್ ಜಿಹಾದ್,ಹಲಾಲ್ ಜಿಹಾದ್, ಇತ್ಯಾದಿ ವಿಷಯ ಗಳಲ್ಲಿ 3 ಸಾವಿರ ಸ್ಥಳಗಳಲ್ಲಿ ಪ್ರವಚನಗಳು.

2 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಮೂಡಿಸುವ ಫಲಕಗಳ ಪ್ರದರ್ಶನ ಮಾಡಲಾಗುತ್ತದೆ ಎಂದ ಅವರು,೧೦೦ ದೇವಾಲಯ ಗಳ ಮತ್ತು 250 ಐತಿಹಾಸಿಕ ಸ್ಥಳಗಳ ಸ್ವಚ್ಛತೆ , 350 ಮಹಿಳಾ ಸಂಘಟನೆ ಗಳ ಉಪಕ್ರಮ ಮತ್ತು 200 ಸ್ಥಳಗಳಲ್ಲಿ ಮಹಿಳೆಯರಿಗೆ ಸ್ವರಕ್ಷಣೆಯ ತರಬೇತಿ ಉಪಕ್ರಮಗಳನ್ನು ನಡೆಸ ಲಾಗುತ್ತದೆ.

ಅಲ್ಲದೇ 30 ಕ್ಕೂ ಹೆಚ್ಚು, ಹಿಂದೂ ರಾಷ್ಟ್ರ ಸಂಘಟನೆ ಸಮ್ಮೇಳನ,50 ಕಡೆಗಳಲ್ಲಿ ವಾಧ್ಯ ತ್ಯುತ್ಸವ ಸಮಾರಂಭಗಳು ,50 ಕಡೆಗಳಲ್ಲಿ ಹಿಂದೂ ರಾಷ್ಟ್ರ ವಿಚಾರ ಸಂಕಿರಣ, 70 ಕಡೆ ಬೀದಿ ನಾಟಕಗಳು,200 ಕ್ಕೂ ಹೆಚ್ಚು ವಿವಿಧ ಸಂಘಟನೆಗಳ ಸಭೆಗಳು, 60 ಕ್ಕೂ ಹೆಚ್ಚು ವಕೀಲರ ಸಭೆ ಇತ್ಯಾದಿ ಉಪಕ್ರಮಗಳನ್ನು ದೇಶದಾದ್ಯಂತ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರಮೇಶ ಶಿಂದೆ, ವೆಂಕಟರಮಣ ನಾಯಕ ಇದ್ದರು.