Saturday, 15th June 2024

10 ವರ್ಷಗಳಲ್ಲಿ 50ಲಕ್ಷ ಕೋಟಿ ವಿನಿಯೋಗ

ಹೊಸಪೇಟೆ-ಕೊಟ್ಟೂರು-ಹರಿಹರ ಮಾರ್ಗದ ರೈಲು ಸಂಚಾರಕ್ಕೆ ಹಸಿರು ನಿಶಾನೆ

ಬಳ್ಳಾರಿಯ ಹೊಸಪೇಟೆ ರೈಲ್ವೆ ನಿಲ್ದಾಾಣದಲ್ಲಿ ರೈಲ್ವೆ ಖಾತೆ ರಾಜ್ಯಸಚಿವ ಸುರೇಶ ಅಂಗಡಿ, ಸಂಸದರಾದ ದೇವೇಂದ್ರಪ್ಪ, ಸಂಗಣ್ಣ ಕರಡಿ, ಜಿ.ಎಂ. ಸಿದ್ಧೇಶ್ವರ್ ಸೇರಿದಂತೆ ಹಲವರು ಹೊಸಪೇಟೆ-ಕೊಟ್ಟೂರು-ಹರಿಹರ ನೂತನ ರೈಲಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ

ಸಂಸದರಾದ ಸಂಗಣ್ಣ ಕರಡಿ, ಜಿ.ಎಂ.ಸಿದ್ದೇಶ್ವರ್, ಬಳ್ಳಾರಿಯ ವೈ. ದೇವೇಂದ್ರಪ್ಪ ಸೇರಿದಂತೆ ಹಲವರು ಇದ್ದರು

ರೈಲ್ವೆೆ ಇಲಾಖೆಯ ಉನ್ನತೀಕರಣ ಮತ್ತು ಜನರಿಗೆ ಪರಿಣಾಮಕಾರಿ ಸೇವೆ ಒದಗಿಸುವಿಕೆ ಸೇರಿದಂತೆ ರೈಲ್ವೆೆಯ ನಾನಾ ಕಾರ್ಯಗಳಿಗಾಗಿ ಮುಂದಿನ 10 ವರ್ಷಗಳಲ್ಲಿ 50ಲಕ್ಷ ಕೋಟಿ ರು.ವಿನಿಯೋಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರೈಲ್ವೆೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದರು.

ಹೊಸಪೇಟೆ ನಗರದ ರೈಲು ನಿಲ್ದಾಾಣದಲ್ಲಿ ಮಾರ್ಗಕ್ಕೆೆ ಚಾಲನೆ, ಹೊಸಪೇಟೆ-ಕೊಟ್ಟೂರು-ಹರಿಹರ ಪ್ಯಾಾಸೆಂಜರ್ ರೈಲು ಸಂಚಾರಕ್ಕೆೆ ಗುರುವಾರ ಹಸಿರು ನಿಶಾನೆ ನೀಡಿದ ನಂತರ ಮಾತನಾಡಿದರು.

ರೈಲ್ವೆೆ ಇಲಾಖೆಯಲ್ಲಿ ವಿಶೇಷ ಯೋಜನೆಗಳು ಘೋಷಣೆಗಿಂತ ಈಗ ಸದ್ಯ ಅರ್ಧಕ್ಕೆೆ ನಿಂತಿರುವ ಯೋಜನೆಗಳು ಪೂರ್ಣಗೊಳಿಸುವುದಕ್ಕೆೆ ನಮ್ಮ ಸರಕಾರ ಆದ್ಯತೆ ನೀಡಿದೆ ಎಂಬುದನ್ನು ಪುನರುಚ್ಚರಿಸಿದ ರೈಲ್ವೆೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ರೈಲ್ವೆೆ ಯೋಜನೆಗಳಿಗೆ ರಾಜ್ಯ ಸರಕಾರ ಹೆಚ್ಚಿಿನ ಮುತುವರ್ಜಿ ವಹಿಸಿ ಭೂಸ್ವಾಾಧೀನಪಡಿಸಿಕೊಂಡು ಭೂಮಿ ಒದಗಿಸಿಕೊಟ್ಟಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

ಪ್ರೇಕ್ಷಣೀಯ ಸ್ಥಳಗಳ ದರ್ಶನಕ್ಕೆೆ ಅವಕಾಶ ಮಾಡಿಕೊಡುವ ನಿಟ್ಟಿಿನಲ್ಲಿ ಗೋಲ್ಡನ್ ಚಾರಿಟಿ ಟ್ರೈನ್ ಆರಂಭಿಸುವುದಕ್ಕೆೆ ಚಿಂತನೆ ನಡೆಸಲಾಗಿದೆ. ರಾಜ್ಯ ಸರಕಾರ ಕ್ರಮ ಕೈಗೊಳ್ಳದಿದ್ದಲ್ಲಿ ಕೇಂದ್ರ ಸರಕಾರವೇ ಇದನ್ನು ಕೈಗೆತ್ತಿಿಕೊಳ್ಳಲಿದೆ. ಈ ಕುರಿತ ನಿರ್ಧಾರ ಶೀಘ್ರ ಹೊರಬಿಳಲಿದೆ ಎಂದರು.

ಬರುವ 25ರಂದು ಯಶವಂತಪುರ-ವಿಜಯಪುರ, ದ್ರೋಣ-ಬೆಳಗಾವಿ ಟ್ರೈನ್ ಆರಂಭಿಸಲಾಗುತ್ತಿಿದೆ. ಕಲ್ಯಾಾಣ ಕರ್ನಾಟಕ ಪ್ರದೇಶಗಳ ಸಂಪರ್ಕಕ್ಕೂ ಒತ್ತು ನೀಡಲಾಗುವುದು ಎಂದರು.

ರೈಲ್ವೆೆ ಬಜೆಟ್ ತೆಗೆದು ಅದನ್ನು ಮುಖ್ಯ ಬಜೆಟ್‌ನಲ್ಲಿ ಸೇರಿಸಲಾಗಿದೆ. ದೇಶದಾದ್ಯಂತ ಸಂಪರ್ಕಕ್ಕೆೆ ಹೆಚ್ಚಿಿನ ಒತ್ತು, ಸಮರ್ಪಕ ಸೇವೆ, ನಿಗದಿಪಡಿಸಿದ ಅವಧಿಯೊಳಗೆ ಟ್ರೈನುಗಳು ಚಲಿಸುವಿಕೆ, ಕ್ಯಾಾಮೆರಾ ಅಳವಡಿಕೆ, ವೈಫೈ ಸೌಲಭ್ಯ ಒದಗಿಸುವಿಕೆಗೆ ಕ್ರಮಕೈಗೊಳ್ಳಲಾಗುತ್ತಿಿದೆ ಎಂದರು.

ಸಂಸದರಾದ ಜಿ.ಎಂ.ಸಿದ್ದೇಶ್ವರ, ವೈ.ದೇವಿಂದ್ರಪ್ಪ, ಸಂಗಣ್ಣ ಕರಡಿ, ನೈರುತ್ಯ ರೈಲ್ವೆೆ ವಲಯದ ಮ್ಯಾಾನೇಜರ್ ಅಜಯಸಿಂಗ್, ಶಾಸಕರಾದ ಸೋಮಶೇಖರರೆಡ್ಡಿಿ, ಪರಣ್ಣ ಮುನವಳ್ಳಿಿ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್ಪಿಿ ಸಿ.ಕೆ.ಬಾಬಾ ಇದ್ದರು.

ರಾಜ್ಯದಲ್ಲಿ ಗೋಲ್ಡನ್ ಚಾರಿಯೇಟ್ ರೈಲು ಪುನಾರಂಭಿಸಲು ನಡೆಸಲಾಗಿದೆ ಎಂದು ಕೇಂದ್ರ ರೈಲ್ವೆೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದರು.

ಹೊಸಪೇಟೆ ನಗರದ ರೈಲು ನಿಲ್ದಾಾಣದಲ್ಲಿ ಗುರುವಾರ ಹೊಸಪೇಟೆ-ಕೊಟ್ಟೂರು-ಹರಿಹರ ಮಾರ್ಗದ ರೈಲು ಸಂಚಾರಕ್ಕೆೆ ಹಸಿರು ನಿಶಾನೆ ತೋರಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ರೈಲು ಬಳ್ಳಾಾರಿ ವರೆಗೆ ವಿಸ್ತರಿಸಬೇಕೆಂಬ ಬೇಡಿಕೆ ಇದ್ದು, ಆದಷ್ಟು ಶೀಘ್ರ ಇದರ ಬಗ್ಗೆೆ ತೀರ್ಮಾನಕ್ಕೆೆ ಬರಲಾಗುವುದು ಎಂದರು.

ವಿದೇಶಕ್ಕೆ ಹೋಗಿ ವಿಲಾಸಿ ಜೀವನ ಸಾಗಿಸುವ ನಮ್ಮ ಜನರಿಗೆ ಈ ದೇಶದ 15ಕ್ಕೂ ಹೆಚ್ಚಿಿನ ಸ್ಥಳಗಳ ವೀಕ್ಷಣೆ ಮಾಡುವ ಅವಕಾಶವನ್ನು ಹಾಲಿ ಸಿಎಂ ಯಡಿಯೂರಪ್ಪನವರು ಈ ಹಿಂದೆ ಸಿಎಂ ಆಗಿದ್ದಾಗ ಒದಗಿಸಿದ್ದರು. ಆದರೆ, ಕಾಲಕ್ರಮೇಣ ನಿರೀಕ್ಷಿತ ಪ್ರಮಾಣದ ಆದಾಯ ಮೂಲಗಳಿಲ್ಲ ಎಂಬ ಕಾರಣವೊಡ್ಡಿಿ ಈ ರೈಲಿನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು ಎಂದರು.

ಆದರೆ, ಇದೀಗ ಮತ್ತೆೆ ಆ ರೈಲನ್ನು ರಾಜ್ಯದಲ್ಲಿ ಓಡಿಸಲು ಚಿಂತನೆ ನಡೆದಿದೆ. ರೈಲು ಪುನಾರಂಭಿಸಲು ಆಗಿರುವ ಅಡೆತಡೆಗಳ ಬಗ್ಗೆೆ ಅವಲೋಕಿಸಿರುವೆ. ರಾಜ್ಯ ಸರಕಾರದ ಬಳಿ ಗೋಲ್ಡನ್ ಚಾರಿಯೇಟ್ ನಡೆಸಲಿಕ್ಕೆೆ ಆಗದೇ ಹೋದಲ್ಲಿ ಕೇಂದ್ರ ಒಪ್ಪಿಿಸುವಂತೆ ಮನವಿ ಮಾಡಿರುವೆ. ಪ್ರಧಾನಿ ನರೇಂದ್ರ ಮೋದಿಯವರೂ ಕೂಡ ಅಗತ್ಯ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸಚಿವ ಅಂಗಡಿ ತಿಳಿಸಿದರು.

ಈ ರೈಲಿನ ದರ ಹೆಚ್ಚಿಿರುವ ಕಾರಣ ಜನಸಾಮಾನ್ಯರಿಗೆ ಸಂಚಾರ ನಡೆಸಿ ಪ್ರವಾಸ ಕೈಗೊಳ್ಳುವಂತಾಗಿಲ್ಲ. ಹೀಗಾಗಿ ದರ ಕಡಿಮೆ ಮಾಡುವ ಕುರಿತು ಯೋಚಿಸಿ ಪುನಾರಂಭಿಸಲು ಚಿಂತನೆ ನಡೆದಿದೆ. ಆದರೆ ,ಕಡಿಮೆ ಆದಾಯದ ನೆಪವೊಡ್ಡಿಿ ಈ ರೈಲು ಸಂಚಾರ ಬಂದ್ ಮಾಡುವ ಯಾವುದೇ ಉದ್ದೇಶ ಕೇಂದ್ರ ಅಥವಾ ರಾಜ್ಯ ಇಲ್ಲ. ನಮ್ಮದೇ ಸರಕಾರ ಈ ಹಿಂದೆ ಆರಂಭಿಸಿದ ಈ ರೈಲನ್ನು ಮತ್ತೆೆ ಓಡಿಸುವ ಸದುದ್ದೇಶ ನಮಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!