Friday, 13th December 2024

ಸಿದ್ಧಗಂಗಾ ಹೆಲ್ತ್ ರನ್ 10 ಕೆ ಮ್ಯಾರಥಾನ್ ಲೋಗೋ ಅನಾವರಣ 

ತುಮಕೂರು: ಕ್ರೀಡೆಯನ್ನು ಕೇವಲ ಸಾಧನೆಗಷ್ಟೇ ಪರಿಗಣಿಸದೆ ಅಲ್ಲದೆ ದಿನನಿತ್ಯದ ಭಾಗವಾಗಿ ಅಳವಡಿಸಿಕೊಂಡರೆ ಕ್ರೀಡಾ ಯಶಸ್ಸಿನ ಜೊತೆಗೆ ಸದೃಢ ಆರೋಗ್ಯವನ್ನೂ ಪಡೆಯಬಹುದು ಎಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗ ಮಹಾಸ್ವಾಮೀಜಿ ತಿಳಿಸಿದರು.
ಅವರು ಸಿದ್ದಗಂಗಾ ಆಸ್ಪತ್ರೆ ವತಿಯಿಂದ ಅಕ್ಟೋಬರ್ 1ರಂದು ನಡೆಯಲಿರುವ ಸಿದ್ಧಗಂಗಾ ಹೆಲ್ತ್ ರನ್ 10 ಕೆ ಮ್ಯಾರಥಾನ್ ಅಂಗವಾಗಿ ಲೋಗೋ ಹಾಗೂ ಪ್ರೋಮೋ ವಿಡಿಯೋ ಅನಾವರಣಗೊಳಿಸಿ ಮಾತನಾಡಿ ಸಿದ್ದಗಂಗಾ ಆಸ್ಪತ್ರೆ ಕಳೆದ ಮೂರು ವರ್ಷಗಳಿಂದ ಹೃದ್ರೋಗ ದಿನದ ಅಂಗವಾಗಿ ಮ್ಯಾರಥಾನ್ ಮೂಲಕ ಹೃದಯ ಆರೋಗ್ಯ ಜಾಗೃತಿ ಮೂಡಿಸುತ್ತಿದ್ದು ಪ್ರತಿ ಯೊಬ್ಬರೂ ಈ ಮ್ಯಾರಥಾನ್‍ನಲ್ಲಿ ಭಾಗವಹಿಸಿ ಕ್ರೀಡಾಸ್ಪೂರ್ತಿಯೊಂದಿಗೆ ಆರೋಗ್ಯ ಸಂದೇಶ ಸಾರಬೇಕು ಎಂದರು.
ಸೂಪರ್ ಸ್ಪೆಷಲಾಟಿ ವಿಭಾಗದ ಮುಖ್ಯಸ್ಥರಾದ  ಹೃದ್ರೋಗ ತಜ್ಞ ಡಾ.ಭಾನುಪ್ರಕಾಶ್ ಹೆಚ್.ಎಂ. ಮಾತನಾಡಿ ಸೆ.29 ಕ್ಕೆ ವಿಶ್ವ ಹೃದಯ ದಿನವನ್ನಾಗಿ ಆಚರಿಸಲಾಗುತ್ತಿದೆ ಇದರ ಭಾಗವಾಗಿ ಅಕ್ಟೋಬರ್ 1 ರಂದು ಮ್ಯಾರಥಾನ್ ನಡೆಯಲಿದೆ. ಪ್ರವೇಶ ಉಚಿತವಾಗಿದ್ದು ರಾಜ್ಯಸಭಾ ಸದಸ್ಯ ಜಗ್ಗೇಶ್ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟು ಪ್ರಿಯಾಮೋಹನ್ ಚಾಲನೆ ನೀಡಲಿ ದ್ದಾರೆ.
ಪುರುಷರ ವಿಭಾಗದಲ್ಲಿ 10ಕಿ.ಮೀ, ಮಹಿಳಾ,ಮಕ್ಕಳು ಹಾಗೂ 50 ವರ್ಷ ಮೇಲ್ಪಟ್ಟವರಿಗೆ 5 ಕಿ.ಮೀ., ಮ್ಯಾರಥಾನ್ ನಡೆಯ ಲಿದ್ದು ಮಜಾ ರನ್ ಕೂಡ ಏರ್ಪಡಿಸಲಾಗಿದೆ. ಈಗಾಗಲೇ ನೊಂದಣಿ ಪ್ರಾರಂಭವಾಗಿದ್ದು ಮ್ಯಾರಥಾನ್ ನಕ್ಷೆ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.
ಸಿದ್ಧಗಂಗಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಾಲಿನಿ, ಮೆಡಿಕಲ್ ಮೇಲ್ವಿ ಚಾರಕ ಡಾ.ನಿರಂಜನಮೂರ್ತಿ,ಸಿಇಓ ಡಾ.ಸಂಜೀವ್ ಕುಮಾರ್,  ಅಥ್ಲೆಟಿಕ್ ಅಸೋಸಿ ಯೇಷನ್‍ನ ಪ್ರಭಾಕರ್,ಬಸವರಾಜು, ಕೆಎಂಎಫ್‍ನ ಅಧಿಕಾರಿ ವಿದ್ಯಾನಂದ್, ಗೋಲ್ಡ್‍ಜಿಮ್‍ನ ಜಯಪ್ರತಾಪ್, ರಾಕಿ ಉಪಸ್ಥಿತರಿದ್ದರು.