ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ಶನಿವಾರ ಕೆನರಾ ಬ್ಯಾಂಕಿನ ೧೧೭ನೇ ಸಂಸ್ಥಾಪಕರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಸುಮಾರು ೧.೫೦ ಲಕ್ಷ ಬೆಲೆ ಬಾಳುವ ೫ ಸೌರ ಶಕ್ತಿ ಬೀದಿ ದೀಪಗಳನ್ನು ಅತ್ಯಂತ ಅವಶ್ಯಕವಿರುವ ಜಾಗದಲ್ಲಿ ಅಳವಡಿಸಲಾಯಿತು. ಇದೇ ವೇಳೆ ೧.೮ ಕೋಟಿ ಮೊತ್ತದ ಸಾಲ ಮಂಜೂರಾತಿ ಪತ್ರಗಳನ್ನು ಗೌರಿಬಿದನೂರು ತಾಲ್ಲೂಕಿನ ಗ್ರಾಹಕರಿಗೆ ವಿತರಿಸಲಾಯಿತು ಹಾಗೂ ೫ನೇ ತರಗತಿಯಿಂದ ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡಿತ್ತಿರುವ ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಪಡೆದ ವರಿಗೆ ವಿದ್ಯಾರ್ಥಿವೇತನವನ್ನು ನೀಡಲಾಯಿತು ಎಂದರು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಬೆಂಗಳೂರು ಗ್ರಾಮಾಂತರ ಪ್ರಾದೇಶಿಕ ಕಚೇರಿಯ ಸಹಾಯಕ ಜನರಲ್ ಮ್ಯಾನೇಜರ್ ಹೆಚ್.ವೈ.ಸಂಜಯ್ ಕುಮಾರ್, ಚಿಕ್ಕಬಳ್ಳಾಪುರ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಹೆಚ್.ಎಸ್.ಆನಂದ್, ಕೆನರಾ ಬ್ಯಾಂಕ್ ಗೌರಿಬಿದನೂರು ಶಾಖೆಯ ಮುಖ್ಯವ್ಯವಸ್ಥಾಪಕ ಕೈಲಾಶ್ ಕಾಂಬ್ಳೇ, ಕೃಷಿ ವಿಸ್ತರಣಾಧಿಕಾರಿ ಚಂದನ್ ಪಿ.ಜಿ ಉಪಸ್ಥಿತರಿದ್ದರು.
೧೯ಸಿಬಿಪಿಎಂ೭: ಗೌರಿಬಿದನೂರು ತಾಲೂಕು ಚೆನ್ನೇನಹಳ್ಳಿ ಶಾಖೆಯಲ್ಲಿ ಕೆನರಾಬ್ಯಾಂಕ್ ಸಂಸ್ಥಾಪಕರ ದಿನಾಚರಣೆ ಆಚರಿಸಲಾಯಿತು.