ಅಧ್ಯಾತ್ಮೀಕತೆಯೇ ಉಸಿರು; ಸರಳತೆಯೇ ಜೀವನ ಶ್ರೀಸಿದ್ದೇಶ್ವರ ಮಹಾಸ್ವಾಮಿಜೀ
ಇಂಡಿ: ಕರ್ನಾಟಕ ಅಧ್ಯಾತ್ಮಿಕ ಪರಂಪರೆ ಅನುಸರಿಸುವ ಸಾವಿರಾರು ಪುಣ್ಯಸ್ಥಾನಗಳು ಇವೆ. ಸಮಾಜ ಸಮಾನತೆಗಾಗಿ ಸಮ-ಸಮಾಜದ ನಿರ್ಮಾಣ ಮಾಡುತ್ತಿರುವ ಮಠಗಳು ಮಂದೀರಗಳು, ತುಮಕೂರಿನ ಸಿದ್ದಗಂಗಾಮಠ, ಸುತ್ತೂರಮಠ, ಇಲಕಲ್ ಶ್ರೀಮಹಾಂತ ಸ್ವಾಮಿಗಳಮಠ, ಚಿತ್ರದುರ್ಗ ಮುರಘಾಮಠ, ಉಡುಪಿ ಪೇಜಾವರಮಠ, ಹುಬ್ಬಳ್ಳಿ ಶಿವಯೋಗಿ ಸಿದ್ಧಾರೋಢ ಮಠ, ಹೀಗೆ ಹತ್ತಾರು ಮಠಗಳು ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಿ ಮಾನವೀಯ ಮೌಲ್ಯಗಳ ಬದುಕು ಸಾಗಿಸಲು ಸಾಕಷ್ಟು ಶ್ರಮಿಸುತ್ತಿವೆ.
ಇನ್ನು ೧೨ನೇ ಶತಮಾನದಲ್ಲಿ ಲಿಂಗ ತಾರತಮ್ಯ ಶೋಷಣೆ,ಅಸ್ಪçಶ್ಯತೆ ಮೋಢನಂಬಿಕೆ ಹೋಗಲಾಡಿಸಲು ಕ್ರಾಂತಿಯೋಗಿ ಅಣ್ಣ ಬಸವಣ್ಣ ,ಕನಕದಾಸ ಅಂಬಿಗರ ಚೌಡಯ್ಯಾ, ಅಕ್ಕಮಹಾದೇವಿ,.ಆಯ್ದಕ್ಕಿ ಲಕ್ಕಮ್ಮ , ಶೀಶುನಾಳ ಷರೀಫ ಅಲ್ಲಂಪ್ರಭು ಹೀಗೆ ಹತ್ತಾರು ಶರಣರು ಸಂತ ಮಹಾಂತರು ನಡೇದು ಬಂದ ದಾರಿಯನ್ನೆ ಭಾವೈಕ್ಯೆ ಬೀಡು ಮಾಡಲು ೨೧ನೇ ಶತಮಾನದಲ್ಲಿ ತಮ್ಮ ಪ್ರವಚನಗಳ ಮೂಲಕ ದೇಶ ವಿದೇಶ ಸುತ್ತಾಡಿ ಅಧ್ಯಾತ್ಮಿಕ ,ಧಾರ್ಮಿಕ ಮಾನವೀಯ ಬದುಕಿಗೆ ಆಸರೆಯಾಗಿರುವ ಪರಂಪರೆಯ ಮಠಗಳಲ್ಲಿ ಶ್ರೀಸಿದ್ದೇಶ್ವರ ಜ್ಞಾನಯೋಗಾಶ್ರಮ ಕೂಡಾ ಒಂದಾಗಿದೆ.
ವಿಜಯಪೂರ ಎಂದಾಕ್ಷಣ ವಿಶ್ವದ ಗೋಳಗುಮ್ಮಟ್ಟ ಎರಡನೆ ಅದ್ಭುತ ಮಹಾಕಾರಣಿಕ ಸಂತ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳು. ವಿಜಯಪೂರ ಜಿಲ್ಲೆ ಶರಣರ,ಸಾಧು ,ಸಂತರ ಬೀಡು ಧಾರ್ಮಿಕ ಪುಣ್ಯಕ್ಷೇತ್ರದ ನೆಲೆಬೀಡುನಡೇದಾಡುವ ದೇವರಸ್ವರೂಪಿ ವಾಗ್ಮೀ,ಜ್ಞಾನದ ಭಂಡಾರವಾಗಿರು ಶ್ರೀಸಿದ್ದೇಶ್ವರ ಮಹಾಸ್ವಾಮಿಗಳು ವಿಜಯಪೂರ ಜ್ಞಾನಯೋಗಶ್ರಮ ಅಧ್ಯಕ್ಷರಾಗಿ ಮುನ್ನಡೇಸಿಕೊಂಡು ಹೋಗುತ್ತಿದ್ದಾರೆ.
ನಿಸ್ವಾರ್ಥಸೇವೆ. ಗುರುಭಕ್ತಿ, ಸಮಾನತೆ, ಸರಳತೆ ಶ್ರೀಗಳ ಜೀವನದ ಮೂಲಸಿದ್ದಾಂತ ಆಶೇಯ ಮೂಲ ದು;ಖಕ್ಕೆ ಕಾರಣ ಆಶೇಗಳ ನಾಶವೇ ಒಳ್ಳೇಯ ಮಾರ್ಗ ಎಂದು ತಮ್ಮ ಜೀವನದ ಬುತ್ತಿಯನ್ನಾಗಿಸಿಕೊಂಡು ಸೀದಾ ಸರಳ ಜೀವನ ಸಾಗಿಸಿದ ಅನುಭಾವಿ ಸಂತ.ಹಣ ಉಡುಪು, ಸಂಪತ್ತು ,ಹೊನ್ನು ,ಮಣ್ಣುಇವುಗಳ ಮೇಲೆ ವ್ಯಾಮೋಹ ಇರಬಾರದು ಎಂದು ಜೇಬು ಇಲ್ಲ ಉಡುಪು ಧರಿಸಿ ಅಧ್ಯಾತ್ಮಿಕತೆಯೇ ಉಸಿರಾಗಿ ಶ್ರೀಗಳು ಪ್ರವಚನದ ಮೂಲಕ ಜನರಿಗೆ ಸನ್ಮಾರ್ಗ ದಡೆ ಸಾಗಿಸಿದ್ದಾರೆ.
ಜನನ; ಶ್ರೀಸಿದ್ದೇಶ್ವರ ಮಹಾಸ್ವಾಮಿಗಳು ವಿಜಯಪೂರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಸಾಮಾನ್ಯ ಕೃಷಿ ಕುಟುಂಬದಲ್ಲಿ ಅಕ್ಟೋಬರ್ ೨೪, ೧೯೪೧ರಲ್ಲಿ ಜನಿಸಿದರು. ಚಿಕ್ಕವಯಸ್ಸಿನಲ್ಲಿಯೇ ಅಪಾರ ವಿದತ್ವ ಹೊಂದಿದ ಅವರು ಜ್ಞಾನದ ದಿವ್ಯಶಕ್ತಿಯಿಂದ ಬಹಳ ಕುಶಾಗ್ರಮತಿಯಾಗಿದ್ದರು. ಇಂತಹ ದಿವ್ಯಚೇತನ ಕಂಡು ಅಂದಿನ ಯೋಗಾಶ್ರಮದ ಗುರು ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳು ತಾವು ಪುರಾಣ ಪ್ರವಚನ ಮಾಡುವಾಗ ಇವರನ್ನು ಕರೆದುಕೊಂಡು ಹೋಗುತ್ತಿದ್ದರು. ಇದರಿಂದ ಪ್ರಭಾವಿತರಾದ ಶ್ರೀಗಳು ಎಲ್ಲ ಧರ್ಮಗ್ರಂಥಗಳು ಅಧ್ಯಾಯನ ಮಾಡಿದರು. ಕರ್ನಾಟಕ ವಿ,ವಿಧ್ಯಾಲಯದಲ್ಲಿ ಪದವಿ ಮುಗಿಸಿ ಕೋಲಾಪೂರ ವಿ. ವಿ ಯಲ್ಲಿ ತತ್ವಶಾಸ್ತç ಅಧ್ಯಾಯನ ಎಂ.ಎ ಮುಗಿಸಿದರು.
ಶ್ರಗಳು ಕನ್ನಡ, ಇಂಗ್ಲೀಷ ಮರಾಠ ಹಿಂದಿ, ಸಂಸ್ಕೃತ ಪಂಚ ಭಾಷೆಗಳ ಪ್ರವಚನ ಮಾಡುವುದಷ್ಠೇ ಅಲ್ಲ ಭಾಷೆಗಳ ಮೇಲೆ ಸಾಕಷ್ಟು ಹಿಡಿತವಿತ್ತು.ಇವರಿಗೆ ಬೇರೆ ರಾಜ್ಯಗಳು ಬೇರೆ ದೇಶಗಳಿಂದ ಪ್ರವಚನಕ್ಕೆ ಅವ್ಹಾನ ಬರುತ್ತಿದ್ದವು ತಿಂಗಳು ವರ್ಷಗಟ್ಟಲೆ ಸರತಿ ಸಾಲುಗಳು ಮುಂಚಿತ ಹೆಸರು ನೊಂದಾಯಿಸಬೇಕಾಗಿತ್ತು.
ಶ್ರೀಗಳ ಪ್ರವಚನ ಇದೆ ಎಂದರೆ ಗ್ರಾಮೀಣ ಭಾಗದಲ್ಲಿ ಜನರು ನಸುಕಿನಲ್ಲಿಯೇ ಎದ್ದು ಮಡಿಸ್ನಾನ ಮಾಡಿ ಕುಟುಂಬ ಸಮೇತ ಎತ್ತಿನ ಬಂಡಿ ಕಟ್ಟಿಕೊಂಡು ಪ್ರವಚನ ಕೇಳಿ ಪಾವನವಾಗುತ್ತಿದ್ದರು ಇವರ ಪ್ರವಚನ ಎಂದರೆ ಸುತ್ತಮುತ್ತಲಿನ ರಾಜ್ಯಗಳಿಂದ ಶ್ರೀಗಳ ಪ್ರವಚನ ಆಲಿಸಲು ಬರುತ್ತಿದ್ದರು. ನಡೆ.ನುಡಿ.ನಿಸರ್ಗ ದೇವರು, ಸೃಷ್ಠಿ, ನೆಲ.ಜಲ, ದೇಶ ,ಭಾಷೆ,ಕರುಣೆ, ಪ್ರೀತಿ, ಧಾನ ,ಧರ್ಮ ಪರೋಪಕಾರ , ಸದ್ಗುಣ ಸಂಸ್ಕೃತಿ ಮಾನವೀಯ ಮದುಕಿನ ಮೌಲ್ಯಗಳು ಪ್ರವಚನದಲ್ಲಿ ಕಂಡು ಬರುತ್ತಿದ್ದವು.
ನಿಸರ್ಗ ಪ್ರೀತಿ: ನಿಸರ್ಗವನ್ನು ಪ್ರೀತಿಸಿದಷ್ಟು ಯಾರನ್ನೂ ಪ್ರೀತಿಸುತ್ತಿರಲ್ಲಿಲ್ಲ ಸುಂದರ ಜಗತ್ತಿನಲ್ಲಿ ದೇವರು ನೀರು.ನೆಲ ಗಾಳಿ, ಆಹಾರ,ಮಳೆ ಬೆಳೆ ಹೀಗೆ ಸಕಲ ಸೀರಿ ಸಂಪ್ತು ನೀಡಿದ್ದಾನೆ ಭಗವಂತ ಒಮ್ಮೇ ಪ್ರೀತಿಯಿಂದ ಪ್ರಕೃತಿ ನೋಡಿ ಎಷ್ಟು ಸುಂದರ ವಾಗಿದೆ ನಿಮಗೆ ಎದನೇಲ್ಲ ಮಾಡಲು ಸಾಧ್ಯವೇ ಎಂದು ಎಚ್ಚರಿಸುತ್ತಿದ್ದರು.
ಹಿಂದೋಮ್ಮೆ ಶಾಸಕ ಯಶವಂತರಾಯಗೌಡ ಪಾಟೀಲ ಸಾವಳಸಂಗ ಗುಡ್ಡಕ್ಕೆ ಅರಣ್ಯ ಇಲಾಖೆಯವರು ಗುಡ್ಡದ ಮೇಲೆ ಗಿಡಗಳು ನೆಟ್ಟು ಪಾಲನೆ ಪೋಷಣೆ ಮಾಡಿರುವ ಪ್ರಯುಕ್ತ ಪೂಜ್ಯ ಶ್ರೀಗಳಿಗೆ ಉದ್ಘಾಟಿಸಲು ಕರೇದುಕೊಂಡು ಹೋದಾಗ ನಿಸರ್ಗ ನೋಡಿ ಸಂತೋಷ ಪಟ್ಟರು ನಗರ ಜೀವನಕ್ಕಿಂತ ಹಳ್ಳಿ ಜೀವನ ಎಷ್ಟು ಸುಂದರವಾಗಿದೆ ನಗರದಲ್ಲಿ ಎಲ್ಲವೂ ಮಲೀನ ಕಲ್ಮಷ ನಗರಗಳಲ್ಲಿ ಎಲ್ಲವೂ ಕಲಬೇರಿಗೆ ,ಹಳ್ಳಿಯಲ್ಲಿ ಇಂತಹ ಸುಂದರ ಗಾಳಿ, ನೀರು ನಿಮ್ಮ ಜೀವನ ಸಂದರವಾಗಿದೆ. ಪ್ರಕೃತಿ ಹಾಳು ಮಾಡಿ ನಮ್ಮ ಬದಕಕೂಡಾ ಹಾಳು ಮಾಡುವುದ ಬೇಡ ನಮ್ಮ ಅವನತಿಗೆ ನಾವೆ ಕಾರಣ ಕೊಡಲಿ ತನ್ನ ಕುಲಕ ಕೆಡಿಸಿತು ಎನ್ನುವುಂತೆ ಹಾಳು ಮಾಡಬೇಡಿ ನಿಮ್ಮ ಮುಂದಿನ ಮಕ್ಕಳಿಗೆ, ಪಿಳೀಗೆಗೆ ಪರಿಸರ ರಕ್ಷಣೆ ಅವಶ್ಯಕ ಎಂದು ಪ್ರಕೃತಿ ಕಾಳಜಿ ನುಡಿಗಳಾಡಿದರು.