ತುಮಕೂರು: ಸಿಎಸ್‌ಐ ವೆಸ್ಲಿ ಚರ್ಚ್ 175ನೇ ವರ್ಷಾಚರಣೆ ಅಂಗವಾಗಿ ಅಕ್ಟೋಬರ್ 12 ರಿಂದ 22ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ವೆಸ್ಲಿಂ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೆಸ್ಲಿ ಚರ್ಚ್ ಸಭಾಪಾಲಕರಾದ ರೆವರೆಂಡ್ ಫಾದರ್ ಮಾರ್ಗನ್ ಸಂದೇಶ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ,1848ರಲ್ಲಿ ಕ್ರೈಸ್ತ ಮಿಷನರಿ ಜಾನ್ ವೆಸ್ಲಿ ಅವರಿಂದ ಆರಂಭವಾದ ಮೊಟ್ಟ ಮೊದಲ ಸಿಎಸ್‌ಐ ವೆಸ್ಲಿ ದೇವಾಲಯ ಇದಾಗಿದ್ದು,ತುಮಕೂರಿನ ಪ್ರತಿ ಹಂತದ ಬೆಳೆವಣಿಗೆಯೊಂದಿಗೆ ತನ್ನನ್ನು ಬೆಸದುಕೊಂಡಿದೆ ಎಂದರು.
ತುಮಕೂರು ಭಾಗದಲ್ಲಿ 1837ರಲ್ಲಿ ಗುಬ್ಬಿಯಲ್ಲಿ ಮೊದಲ ಕ್ರೈಸ್ತ ಮಿಷನರಿ ಆರಂಭವಾಗಿದ್ದು,ಸುವಾರ್ತೆ ಪ್ರಸಾರದ ಜತೆಗೆ, ಶಿಕ್ಷಣ ಮತ್ತು ಆರೋಗ್ಯ ಸೇವೆಗೆ ತೊಡಗಿಕೊಂಡಿದ್ದು,ಅದರ ಮುಂದುವರೆದ ಭಾಗವಾಗಿ 1848ರಲ್ಲಿ ವೆಸ್ಲಿ ಚರ್ಚ್ ಆರಂಭ ವಾಯಿತು.ಇದರ ಮೊದಲ ಸಭಾ ಪಾಲಕರಾಗಿ ಥಾಮಸ್‌ಬೈರ್ ಕಾರ್ಯ ನಿರ್ವಹಿಸಿದ್ದರು.ಮಾರ್ಗನ್ ಸಂದೇಶ ಆದ ನಾನು 97ನೇ ಸಭಾಪಾಲಕನಾಗಿ ಕಳೆದ 5 ವರ್ಷಗಳಿಂದ ಕಾರ್ಯ ನಿರ್ವಹಿಸು ತಿದ್ದೇನೆ. ವೆಸ್ಲಿ ಚರ್ಚ್ ಶಾಖೆಗಳಾಗಿ ಪ್ರಾರಂಭವಾದವು.ಆನಂತರದಲ್ಲಿ ಶಾಂತಿನಗರ, ಕುರಿಪಾಳ್ಯ, ರಂಗಾಪುರ,ಬಿ ಷಪ್ ಸಾರ್ಜೆಂಟ್ ಶಾಲೆಯ ಆವರಣ ಸೇರಿದಂತೆ 8 ಚರ್ಚ್ ನಡೆಯುತ್ತಿವೆ ಎಂದರು.
ತುಮಕೂರಿಗೆ 1877-80ರಲ್ಲಿ ಬೀಕರ ಬರ,ಕ್ಷಾಮ,ಕಾಲರ ಮತ್ತು ಪ್ಲೇಗ್ ಬಂದಂತಹ ಸಂದರ್ಭದಲ್ಲಿ ಈಗಿನ ಬಿಷಪ್ ಶಾಲೆಯ ಅವರಣದಲ್ಲಿ ಗಂಜಿ ಕೇಂದ್ರ ತೆರೆದು ಜಾತಿ,ಧರ್ಮ ಬೇಧವಿಲ್ಲದೆ ಎಲ್ಲರಿಗೂ ಊಟೋಪಚಾರ,ಔಷಧಿ ನೀಡುವ ಕೆಲಸವನ್ನು ವೆಸ್ಲಿ ಚರ್ಚ್ ವತಿಯಿಂದ ಮಾಡಲಾಗಿತ್ತು.ಅದೇ ಸಂದರ್ಭದಲ್ಲಿ ಐಟಿಐ ಕೇಂದ್ರ ತೆರೆದು ಗಂಡು ಮಕ್ಕಳಿಗೆ ಮರಗೆಲಸ, ಹೆಣ್ಣು ಮಕ್ಕಳಿಗೆ ಹೊಲಿಗೆ ತರಬೇತಿ ಆರಂಭಿಸಿದ್ದು,ಇಂದಿಗೂ ನಡೆದುಕೊಂಡು ಬರುತ್ತಿದೆ.ಅಲ್ಲದೆ ಸಮುದಾಯದ ವಯೋವೃದ್ದರಿಗೆ, ವಿಧವೆಯವರಿಗೆ ಪಿಂಚಣಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ವೆಸ್ಲಿ ದೇವಾಲಯದ 175ನೇ ವರ್ಷಾಚರಣೆ ಅಂಗವಾಗಿ ವೆಸ್ಲಿ ಹಬ್ಬದ ಹೆಸರಿನಲ್ಲಿ ಅಕ್ಟೋಬರ್ 15 ರಿಂದ 20ವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು,ಅ.15ರ ಭಾನುವಾರ ರಾಜ್ಯಮಟ್ಟದ ಗಾಯನ ಸ್ಪರ್ಧೆಯನ್ನು ಹಮ್ಮಿಕೊಳ್ಳ ಲಾಗಿದೆ.ಮುಖ್ಯ ಅತಿಥಿಗಳಾಗಿ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ,ವಿಧಾನಪರಿಷತ್ ಸದಸ್ಯರಾದ ಆರ್.ರಾಜೇಂದ್ರ ಭಾಗವಹಿಸಲಿದ್ದಾರೆ.ಹಿರಿಯ ಸಭಾಪಾಲಕರಾದ ವಿನ್ಸೆಂಟ್ ವಿನೋಧ್ ಉಪಸ್ಥಿತ ರಿರುವರು.
ಅಕ್ಟೋಬರ್ 16ರ ಸೋಮವಾರ ಪುನಶ್ಚೇತನ ಅಧ್ಯಾತ್ಮಿಕ ಕೂಟ ನಡೆಯಲಿದೆ.ಅಕ್ಟೋಬರ್ 17 ರಂದು ಗೊಂಬೆ ಮತ್ತು ಮ್ಯಾಜಿಕ್ ಷೋ ಏರ್ಪಡಿಸ ಲಾಗಿದೆ. ಅಕ್ಟೋಬರ್ 18 ರಂದು ಸಿಎಸ್‌ಐ ವೆಸ್ಲಿ ಚರ್ಚ್ ನ ಇಂಟರ್ ಚರ್ಚ್ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ. ಅಕ್ಟೋಬರ್ 19 ರಂದು ಪುನಶ್ಚೇ ತನ ಸಭೆಯನ್ನು ಆಯೋಜಿಸಿದ್ದು,ಅಕ್ಟೋಬರ್ 20 ರಂದು ಸಿಎಸ್‌ಐ ವೆಸ್ಲಿ ಚರ್ಚ್ ತುಮಕೂರು ವಿಭಾಗದಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಅಕ್ಟೋಬರ್ 22ರ ಭಾನುವಾರ ಸಿಎಸ್‌ಐ ವೆಸ್ಲಿ ಚರ್ಚ್ 175ನೇ ವರ್ಷಾಚರಣೆ ನಡೆಯಲಿದ್ದು, ಮುಖ್ಯ ಅತಿಥಿ ಗಳಾಗಿ ಡೆಪ್ಯೂಟಿ ಮಾಡರೇಟರ್ ರೆವರೆಂಡ್ ಫಾದರ್ ಡಾ.ರೂಬೆನ್ ಮಾರ್ಕ್ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಿಎಸ್‌ಐ ವೆಸ್ಲಿ ಚರ್ಚ್ ಸಮಿತಿಯ ಕಾರ್ಯದರ್ಶಿ ಸುರೇಶಬಾಬು, ಖಜಾಂಚಿ ವಿಲಿಯಮ್ ಸುಂದರ್‌ರಾಜ್ ಮತ್ತು ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.