Saturday, 10th June 2023

ಕಲುಷಿತ ನೀರು ಸೇವಿಸಿ 200ಕ್ಕೂ ಹೆಚ್ಚು ಜನ ಅಸ್ವಸ್ಥ

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಮಾಚಗುಂಡಾಳ್‌ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 200ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ.

ಕಲುಷಿತ ನೀರು ಸೇವಿಸಿದ ಪರಿಣಾಮ ಮಕ್ಕಳು, ಹಿರಿಯರು ಸೇರಿ ಗ್ರಾಮದ ಬಹುತೇಕರು ಅಸ್ವಸ್ಥರಾಗಿದ್ದು, ಮೂರ್ನಾಲ್ಕು ದಿನಗಳಿಂದ ಆಸ್ಪತ್ರೆಗೆ ಬರುತ್ತಿರು ತ್ತಿದ್ದಾರೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನ ಬರ್ತಿರೋದ್ರಿಂದ ಆಸ್ಪತ್ರೆ ಫುಲ್‌ ರಶ್‌ ಆಗಿದ್ದು, ಬೆಡ್‌ಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದಲ್ಲಿ ತೆರೆದ ಬಾವಿ ಇದ್ದು, ಇದ್ರಿಂದಾನೇ ಇಡೀ ಗ್ರಾಮದ ಜನರಿಗೆ ನೀರು ಸರಬರಾಜು ಆಗುತ್ತೆ. ಬಾವಿಯಿಂದ ನೀರಿನ ಟ್ಯಾಂಕಿಗೆ ನೀರು ಪೂರೈಕೆ ಆಗುತ್ತಿದ್ದು, ಅಲ್ಲಿಂದ ʼನಲ್ಲಿʼ ಮೂಲಕ ಗ್ರಾಮದ ಮನೆಗಳಿಗೆ ನೀರು ಸರಬರಾಜು ಆಗುತ್ತೆ. ಆದರೆ, ನಲ್ಲಿ ನೀರು ಪೂರೈಕೆ ಆಗಲು ವಾಲ್‌ ತೆರೆಯಬೇಕು. ಈ ವಾಲ್‌ ಬಳಿ ಚರಂಡಿ ನೀರು ಸೇರಿಕೊಂಡಿದ್ದೇ ಜನರ ಆರೋಗ್ಯ ಏರುಪೇರಾಗಲು ಕಾರಣ ಎಂದು ವೈದ್ಯರು ಹೇಳಿದ್ದಾರೆ.

error: Content is protected !!