Saturday, 23rd November 2024

MLA Pradeep Eshwar: 20 ಸಾವಿರ ಸರಕಾರಿ ಶಾಲಾ ಮಕ್ಕಳಿಗೆ ದೀಪಾವಳಿಗೆ ಹೊಸಬಟ್ಟೆ ವಿತರಿಸಿದ ಶಾಸಕ ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ೧ ರಿಂದ ೧೦ನೇ ತರಗತಿಯ ೨೦ಸಾವಿರ ವಿದ್ಯಾರ್ಥಿಗಳಿಗೆ ದೀಪಾವಳಿ ಹಬ್ಬಕ್ಕೆ ಹೊಸಬಟ್ಟೆ ಕೊಡುವ ಮೂಲಕ ನುಡಿದಂತೆ ನಡೆದ ಶಾಸಕ ಎಂಬ ಖ್ಯಾತಿಗೆ ಒಳಗಾದರು.

ತಾಲ್ಲೂಕಿನ ರಾಮಪಟ್ನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಬಟ್ಟೆವಿತರಿಸಿ ಅವರು ಮಾತನಾಡಿದರು.

ನಾನು ನಂಬಿರುವ ಎರಡು ದೇವಾಲಯಗಳು ಅಂದರೆ ಒಂದು ಸರ್ಕಾರಿ ಶಾಲೆ 20000 ಮಕ್ಕಳಿಗೆ ಮತ್ತು ೫,೦೦೦ ಅಂಗನ ವಾಡಿ ಮಕ್ಕಳಿಗೆ ಹಬ್ಬಕ್ಕೆ ಬಟ್ಟೆ  ವಿತರಿಸಿದ್ದೇನೆ. ಮತ್ತೆ ಈಗ ದೀಪಾವಳಿಗೆ ಸರ್ಕಾರಿ ಶಾಲೆಯ ೨೦,೦೦೦ ಮಕ್ಕಳಿಗೆ  ಬಟ್ಟೆ ವಿತರಣೆ ಮಾಡುತ್ತಿದ್ದೇನೆ. ಇದನ್ನು ಯಾರದೋ ಹಣದಿಂದ ನೀಡುತ್ತಿಲ್ಲ, ಬದಲಿಗೆ ನನ್ನ ದುಡಿಮೆ ಯ ಹಣದಿಂದ ನೀಡುತ್ತಿದ್ದೇನೆ.ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ನಂಬಿರುವವನು ನಾನು.ಬಟ್ಟೆ ವಿತರಣೆಗೆ ತಾಲೂಕಿನ  ರಾಮ ಪಟ್ನ ಶಾಲೆಯಿಂದ ಚಾಲನೆ ನೀಡಿದ್ದೇನೆ. ಹಬ್ಬದ ಒಳಗೆ ಕ್ಷೇತ್ರದ ಎಲ್ಲಾ ಶಾಲಾ ಮಕ್ಕಳಿಗೂ ಹೊಸ ಬಟ್ಟೆತಲುಪಿಸುವ ಕೆಲಸ ಮಾಡಲಾಗಿದೆ ಎಂದರು.  ಅಂಗನವಾಡಿಯ ಐದು ಸಾವಿರ ಮಕ್ಕಳಿಗೆ ಶಿವರಾತ್ರಿ ಹಬ್ಬಕ್ಕೆ ನೀಡಲಾಗುವುದು  ಎಂದರು.

ಬ್ಯಾ0ಕಿನ ಬ್ಯಾಲೆನ್ಸ್ ನೋಡಿದಾಗ ಸಿಗುವ ಖುಷಿಗಿಂತ, ಬಡ ಮಕ್ಕಳ ಮುಖದಲ್ಲಿ ಮಂದಹಾಸ ಕಂಡಾಗ ಸಿಗುವ ಖುಷಿಗೆ ವ್ಯಾಲಿಡಿಟಿ ಜಾಸ್ತಿ. ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥನಾಗಿ ಬೆಳೆದವನು ನಾನು. ಅನ್ನ ಮತ್ತು ಅಕ್ಷರದ ಬೆಲೆ ಅರಿತವನು. ಕ್ಷೇತ್ರದ ಜನತೆಯ ಅಶೀರ್ವಾದದಿಂದ ವಿಧಾನಸೌಧ ತಲುಪಿದ್ದೇನೆ. ಆಸ್ತಿ – ಅಂತಸ್ತಿನ ಮೇಲೆ ವ್ಯಾಮೋಹ ಕಡಿಮೆ. ನನಗೇನೋ ಹಣ ಹೆಚ್ಚಾಗಿದೆ ಅಂತೇಳಿ ಈ ಕಾರ್ಯಗಳನ್ನು ಮಾಡುತ್ತಿಲ್ಲಾ.  ನನ್ನ ಪರಿಶ್ರಮ ಸಂಸ್ಥೆಯ ವಹಿವಾಟು ವಾರ್ಷಿಕ ಸರಾಸರಿ ೩೦೦ ಕೋಟಿಗಳಷ್ಟಿದೆ.ಇದರ ಹಣದಿಂದ ಸಮಾಜಸೇವೆ ಮಾಡುತ್ತಿದ್ದೇನೆ ಎಂದರು.

ಶಾಸಕನಾದ ಕೂಡಲೇ ಪ್ರತಿ ವರ್ಷ ಹೆಣ್ಣು ಮಕ್ಕಳಿಗೆ ವರಮಹಾಲಕ್ಷ್ಮಿ ಹಬ್ಬಕ್ಕೆ ಸುಮಾರು ೭೦,೦೦೦, ಮನೆಗಳಿಗೆ ಅರಿಶಿನ-ಕುಂಕುಮವನ್ನು ಎರಡು ಬಾರಿ ವಿತರಣೆ ಮಾಡಿದ್ದೇನೆ. ಆಟೋ ಚಾಲಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಧನ ರೂಪದಲ್ಲಿ ೫,೦೦೦ ರೂ ಗಳಂತೆ ಸುಮಾರು ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಹಾಯ. ಮಾಡಿದ್ದೇನೆ. ೧೦ನೇ ತರಗತಿಯಿಂದ ಮೇಲ್ಪಟ್ಟು ದ್ವಿತೀಯ ಪಿಯುಸಿ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡುತ್ತಿರುವ ೧೦,೦೦೦ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರದೀಪ್ ಈಶ್ವರ್ ಸ್ಕಾಲರ್‌ಶಿಫ್ ಕೊಡುತ್ತಿದ್ದೇನೆ ಇದು ನನ್ನ ಅಭಿವೃದ್ಧಿಯ ದಾರಿ ಎಂದರು.

ಶಿವರಾತ್ರಿ ಹಬ್ಬಕೆ ತಾಲೂಕಿನ ಅಂಗನವಾಡಿಯ ಸುಮಾರು ೫,೦೦೦ ಮಕ್ಕಳಿಗೆ ಬಟ್ಟೆ ವಿತರಣೆ ಮಾಡಲಿದ್ದು, ಶಿಕ್ಷಣ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಿದ್ದೇನೆ.ಕ್ಷೇತ್ರದಲ್ಲಿ ಪ್ರತಿ ಭಾನುವಾರ ಆರೋಗ್ಯ ತಪಾಸಣೆ ಶಿಬಿರ ನಡೆಸುತ್ತಿದ್ದು ತಾಲೂಕಿನಾದ್ಯಂತ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಿಸುವ ಮೂಲಕ ಗಂಭೀರ ಸಮಸ್ಯೆಗಳಿದ್ದಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆಕೊಡಿಸುವ ಕೆಲಸ ಮಾಡುತ್ತಿದ್ದೇನೆ. ಇದುವರೆಗೆ ೮೦ ಶಿಬಿರಗಳನ್ನು ಮಾಡಿ, ೧೦,೦೦೦ ಕ್ಕೂ ಹೆಚ್ಚು ಜನರ ಅರೋಗ್ಯ ತಪಾಸಣೆಗಳನ್ನು ಮಾಡಿಸಿ, ೧,೦೦೦ಕ್ಕೂ ಅಧಿಕ ಶಸ್ತ್ರ ಚಿಕಿತ್ಸೆ ಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.

ಅಮ್ಮನ ಹೆಸರಿನಲ್ಲಿ ೧೦ ಉಚಿತ ಆಂಬುಲೆನ್ಸ್ ಗಳು, ದಿನದ ೨೪ ಗಂಟೆ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಇದುವ ರೆಗೂ ೩,೦೦೦ಕ್ಕೂ ಹೆಚ್ಚು ಪ್ರಾಣಗಳನ್ನು ಉಳಿಸಿವೆ. ಎಸ್.ಎಸ್.ಎಲ್.ಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯದಲ್ಲೇ ಪ್ರಪ್ರಥಮಬಾರಿಗೆ ಸೂಪರ್ ೬೦ ಕಾರ್ಯಕ್ರಮದ ಮೂಲಕ  ಬೆಂಗಳೂರಿನಲ್ಲಿ ವಸತಿ ಹಾಗೂ ಊಟದ ವ್ಯವಸ್ಥೆಯೊಂದಿಗೆ,ಪ್ರತ್ಯೇಕ ತರಬೇತಿಯನ್ನು ನೀಡಿ ಎಲ್ಲಾ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಲು ಸಹಕರಿಸಿದ್ದೇನೆ. ಚಿಕ್ಕಬಳ್ಳಾಪುರದ ಜಿಲ್ಲೆಯ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಊಟದೊಂದಿಗೆ ಸಿ.ಇ.ಟಿ ಹಾಗೂ ನೀಟ್ ತರಬೇತಿಯನ್ನು ನೀಡಿದ್ದೇನೆ. ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ಮನೆ-ಮನೆಗೆ ಬೇಟಿ ನೀಡಿ, ನಗರದ ೧೩ ವಾರ್ಡಗಳು ಪೂರ್ಣಗೊಳಿದ್ದೇನೆ. ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಕ್ಯೂ-ಆರ್ ಕೋಡ್ ಮುಖಾಂತರ ೫,೦೦೦ಕ್ಕೂ ಹೆಚ್ಚು ಅರ್ಜಿಗಳ ವಿಲೇವಾರಿ ಮಾಡಿದ್ದೇನೆ. ತಂದೆ-ತಾಯಿ ಇಲ್ಲದ ೫೪ ಅನಾಥಮಕ್ಕಳಿಗೆ ತಲಾ ೧ ಲಕ್ಷ ಡೆಪಾಸಿಟ್ ಮಾಡಿ. ವಿದ್ಯಾಭ್ಯಾಸಕ್ಕಾಗಿ ಸಹಾಯಹಸ್ತ ನೀಡುತ್ತಿರುವುದಾಗಿ ತಿಳಿಸಿ,ಇದು ಪ್ರತಿ ವರ್ಷ ಹೀಗೆ ಮುಂದುವರೆಯಲಿದೆ. ಸಾಧ್ಯವಾದರೆ ಜನತೆಯ ಆಶೀರ್ವಾದ ಹೀಗೆ ಮುಂದುವರಿ ಯಲಿ ಎಂದರು.

ಕಾಂಗ್ರೆಸ್ ಶಾಸಕರಿಗೆ ಉಪಚುನಾವಣೆ ಹೊಣೆ:
ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ತಾನು ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದಾಗಿ ಹೇಳಿದ ಶಾಸಕರು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲ ಕಾಂಗ್ರೆಸ್ ಶಾಸಕರೆಲ್ಲ ಒಂದೊAದು ಗ್ರಾಮಪಂಚಾಯಿತಿಯಲ್ಲಿ ಕೆಲಸ ಮಾಡಿ ಅಯಾ ಪಂಚಾಯಿತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲೀಡ್ ದೊರಕಿಸಬೇಕೆಂದು ಆದೇಶ ನೀಡಿದ್ದಾರೆ.ಪಕ್ಷದ ವರಿಷ್ಟರ ಆದೇಶ ಪಾಲಿಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.

ಇದನ್ನೂ ಓದಿ: MLA Pradeep Eshwar: 2ಎ ಮೀಸಲು ಜಾರಿಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ: ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ