Thursday, 19th September 2024

260 ಅಡಿ ಉದ್ದದ ರಾಷ್ಟ್ರಧ್ವಜ ಯಾತ್ರೆ

ತುಮಕೂರು:ಭಾರತದ 78ನೇ ಸ್ವಾತಂತ್ರ ದಿನದ ಅಂಗವಾಗಿ ವಿ ವೈಶ್ಯ ವತಿಯಿಂದ ಆಗಸ್ಟ್ 15ರಂದು ಬೆಳಗ್ಗೆ 10:30 ಗಂಟೆಗೆ ಮೆಗಾ ಫ್ಲಾಗತಾನ್(ಬೃಹತ್ ಧ್ವಜ ಮೆರವಣಿಗೆ ಗ)ಆಯೋಜಿಸಲಾಗಿದೆ ಎಂದು ವಿ.ವೈಶ್ಯ ಸಂಸ್ಥೆಯ ಅಧ್ಯಕ್ಷ ನವೀನ್ ಲಿಂಗಮ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಅರ್ಯ ವೈಶ್ಯರನ್ನು ಇಂದಿನ ವ್ಯವಹಾರೋದ್ಯಮಕ್ಕೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ವಿ.ವೈಶ್ಯ ಸಂಸ್ಥೆ,ತನ್ನ ಸಾಮಾಜಿಕ ಕಾರ್ಯವಾಗಿ ಮೇಗಾ ಫ್ಲಾಗಾತಾನ್ ಹಮ್ಮಿಕೊಂಡಿದ್ದು, ಆಗಸ್ಟ್ 15ರ ಬೆಳಗ್ಗೆ 10:30ಕ್ಕೆ ನಗರದ ಡಾ.ಶ್ರೀಶಿವಕುಮಾರಸ್ವಾಮೀಜಿ ಸರ್ಕಲ್‌ನಲ್ಲಿರುವ ಎನ್.ಸಿ.ಸಿ.ಕಚೇರಿಯಿಂದ ಹೊರಡುವ ಬೃಹತ್ ಧ್ವಜಯಾತ್ರೆ ಬಿ.ಎಚ್.ರಸ್ತೆ ಮೂಲಕ ಭದ್ರಮ್ಮ ವೃತ್ತದವರೆಗೆ ಆಗಮಿಸಿ, ಅದೇ ರಸ್ತೆಯಲ್ಲಿ ಪುನಃ ಎನ್.ಸಿ.ಸಿ.ಕಚೇರಿಯವರೆಗೆ ಆಗಮಿಸಿ, ಮುಕ್ತಾಯಗೊಳ್ಳಲಿದೆ ಎಂದರು.
ವಿ.ವೈಶ್ಯ ಸಂಸ್ಥೆಯಿAದ ಆಯೋಜಿಸಿರುವ ಮೆಗಾ ಫ್ಲಾಗಾತಾನ್‌ನಲ್ಲಿ 10 ಅಡಿ ಅಗಲ, 260 ಅಡಿ ಉದ್ದದ ಭಾರತದ ರಾಷ್ಟçದ್ವಜದ ಯಾತ್ರೆ ನಡೆಯ ಲಿದ್ದು,ಈ ಮೆರವಣ ಗೆಯಲ್ಲಿ 150ಕ್ಕೂ ಹೆಚ್ಚು ಎನ್.ಸಿ.ಸಿ.,100 ಜನ ಸ್ಕೌಟ್ಸ್, ವಿವಿಧ ಸಂಘ ಸಂಸ್ಥೆಗಳ 100 ಜನರು ಹಾಗೂ ಸಾರ್ವಜನಿಕರು ಸೇರಿ 350ಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದು,ಈ ಮೆಗಾ ಫ್ಲಾಗಾತಾನ್‌ಗೆ ಆರ್ಯ ವೈಶ್ಯ ಮಂಡಳಿ,ತುಮಕೂರು ವಿವಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಸಹಕಾರ ನೀಡಿವೆ.ಈ ಬೃಹತ್ ದ್ವಜ ಮೇರವಣ ಗೆಯಲ್ಲಿ ಉಚಿತವಾಗಿ,ಜಾತಿ,ಭೇಧವಿಲ್ಲದೆ ಎಲ್ಲಾ ಸಾರ್ವಜನಿಕರು ಭಾಗವಹಿಸಬಹುದಾಗಿದೆ. ಭಾಗವಹಿಸಲು ಇಚ್ಚಿಸುವವರು ಕೇಸರಿ,ಬಳಿ ಅಥವಾ ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಎಂದು ನವೀನ್ ಲಿಂಗಮ್ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿ.ವೈಶ್ಯದ ಕಾರ್ಯದರ್ಶಿ ಗುರುಪ್ರಸಾದ್,ಖಜಾಂಚಿ ಪ್ರದೀಪ್, ನಿರ್ದೇಶಕರುಗಳಾದ ಸುಮನ್, ಪ್ರಸಾದ್, ಅಖಿಲ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *