Saturday, 23rd September 2023

ಬಾಲಕಿಯರ ವಸತಿ ಸೈನಿಕ ಶಾಲೆ: 47 ಮಂದಿಗೆ ಕೋವಿಡ್ ದೃಢ

ಕಿತ್ತೂರು: ರಾಣಿ ಚನ್ನಮ್ಮ ಸ್ಮಾರಕ ಬಾಲಕಿಯರ ವಸತಿ ಸೈನಿಕ ಶಾಲೆಯ ಮೂವರು ಸಿಬ್ಬಂದಿ ಸೇರಿ 47 ವಿದ್ಯಾರ್ಥಿನಿಯರಿಗೆ ಭಾನುವಾರ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ತಹಶೀಲ್ದಾರ್ ಹಾಲಗಿ ತಿಳಿಸಿದರು.

ಕಚೇರಿ ಸೂಪರಿಂಟೆಂಡೆಂಟ್‌ ಕೂಡ ಸೋಂಕಿತರಾಗಿದ್ದರೆ. 13 ಸಿಬ್ಬಂದಿ ಸೇರಿ 194 ವಿದ್ಯಾರ್ಥಿನಿಯರಿಗೆ ಕೋವಿಡ್ ದೃಢಪಟ್ಟಂತಾಗಿದೆ.

ಕೋವಿಡ್ ಸೋಂಕಿತರ ಪಟ್ಟಿ ಬೆಳೆಯುತ್ತಿದ್ದರೂ, ಶಾಲೆಯಿಂದ ಹೊರಗೆ ಹೋಗುವುದು, ಕೆಲವರು ಸಿಬ್ಬಂದಿ ಕೆಲಸಕ್ಕೆ ಒಳಗೆ ಹೋಗುವುದು ನಡೆದೇ ಇದೆ. ಕಟ್ಟಡ ಕಾಮಗಾರಿಯೂ ಯಾವುದೇ ಅಡೆತಡೆಯಲ್ಲಿ ಸಾಗಿದೆ ಎಂದು ತಿಳಿದುಬಂದಿದೆ.

ತಾಲ್ಲೂಕಿನ ಕಾದ್ರೊಳ್ಳಿ ಕುರುಬುರ ತಗ್ಗು ಪ್ರದೇಶದಲ್ಲೂ ಇಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

error: Content is protected !!