ಚಿತ್ರದುರ್ಗ: ಐವತ್ತು ವರ್ಷಗಳ ಹಿಂದೆ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದ ವ್ಯಕ್ತಿ ಗ್ರಾಮದಲ್ಲಿ ದಿಢೀರ್ ಪ್ರತ್ಯಕ್ಷಗೊಂಡ ಹಿನ್ನೆೆಲೆ ಕುಟುಂಬಸ್ಥರು ಹಾಗೂ ಗ್ರಾಾಮಸ್ಥರು ಅಚ್ಚರಿಗೊಂಡಿರುವ ಘಟನೆ ಇಲ್ಲಿನ ಚಿತ್ರನಾಯಕನಹಳ್ಳಿಯಲ್ಲಿ ನಡೆದಿದೆ ಎನ್ನಲಾಗಿದ್ದು, ಸಮಾಧಿಯಿಂದ ಮೃತದೇಹವನ್ನು ಅಲೆಮಾರಿಗಳು ಹೊತ್ತೊಯ್ದು ಮರುಜೀವ ನೀಡಿರಬಹುದೆಂಬ ನಾನಾ ಚರ್ಚೆಗಳು ಜನರ ನಡುವೆ ನಡೆಯುತ್ತಿದೆ.
ಸಣ್ಣ ಈರಣ್ಣ ಎಂಬಾತ 50 ವರ್ಷಗಳ ಹಿಂದೆ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದರಂತೆ, ಬಳಿಕ ಮೃತದೇಹವನ್ನು ಮಣ್ಣು ಮಾಡಿದ್ದ ಕುಟುಂಬ, ಮರುದಿನ ಗುಂಡಿಯನ್ನು ನೋಡಿದಾಗ ಮೃತದೇಹ ಇರಲಿಲ್ಲವಂತೆ. ಮಣ್ಣಲ್ಲಿ ಮಣ್ಣಾಾಗಿದ್ದ ವ್ಯಕ್ತಿ ಹೇಗೆ ಬದುಕಿ ಬಂದ ಎನ್ನುವುದೇ ಇದೀಗ ಆಶ್ಚರ್ಯವಾಗಿದೆ.
50 ವರ್ಷಗಳ ಬಳಿಕ ಮರಳಿ ಊರಿಗೆ ಬಂದಿರುವ ಸಣ್ಣ ಈರಣ್ಣ ತನ್ನ ಪತಿಗೆ ಎತ್ತು ಇರಿದು ಹೊಲಿಗೆ ಹಾಕಿಸಿರುವುದನ್ನು ಪತ್ತೆೆ ಹಚ್ಚಿಿದ್ದಾರೆ. ಈರಮ್ಮ, ಸಹೋದರರಾದ ಬೇವಣ್ಣ, ಅಜ್ಜಪ್ಪ ಹಾಗೂ ಮಕ್ಕಳಾದ ಈರಣ್ಣ, ಮರಿಯಪ್ಪರನ್ನು ಗುರುತಿಸಿದ್ದಾರೆ.
ಇಷ್ಟು ವರ್ಷ ಆಂಧ್ರಪ್ರದೇಶದ ಅನಂತಪುರ ತಾಲೂಕಿನ ಗುಮ್ಮಗಟ್ಟೆೆಯಲ್ಲಿ ವಾಸವಿದ್ದ ಸಣ್ಣ ಈರಣ್ಣ, ಕುರಿ ಗೊಬ್ಬರಕ್ಕಾಗಿ ಆಂಧ್ರಪ್ರದೇಶಕ್ಕೆೆ ಹೋಗಿದ್ದಾಗ ಸಂಬಂಧಿಕರಿಗೆ ಸಿಕ್ಕಿಿದ್ದಾನೆ. ಗುಮ್ಮಗಟ್ಟೆೆಯಲ್ಲಿ ಜೋಗಿ ಸಮುದಾಯದ ಜತೆ ಈರಣ್ಣ ಇದ್ದರು. ಅಲ್ಲಿಯೇ ಜೋಗಿ ಸಮುದಾಯದ ಅಕ್ಕ-ತಂಗಿಯನ್ನು ಮದುವೆ ಆಗಿದ್ದಾರೆ. ಸದ್ಯ ಈರಣ್ಣ ಮೂವರು ಹೆಂಡಿರ ಮುದ್ದಿನ ಗಂಡನಾಗಿದ್ದಾರೆ. ಸದ್ಯ ಈರಣ್ಣನನ್ನು ನೋಡಲು ಅಕ್ಕಪಕ್ಕದ ಗ್ರಾಾಮದವರು ದಂಡು ದಂಡಾಗಿ ಬರುತ್ತಿದ್ದಾರೆ.