Tuesday, 17th September 2024

ಆರೋಪಿ ಬಂಧನ: 2.63 ಲಕ್ಷದ 7 ಬೈಕ್ ವಶ

ತುಮಕೂರು: ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ 2,63,505 ಮೌಲ್ಯದ 7 ದ್ವಿಚಕ್ರ ವಾಹನಗಳನ್ನು ಕ್ಯಾತ್ಸಂದ್ರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತಾಲೂಕಿನ ಮಂಚಕಲ್ ಕುಪ್ಪೆ‌ ನಿವಾಸಿ ಸುನಿಲ್ ಬಂಧಿತ ಆರೋಪಿ.

ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಪಿಎಸ್‌ಐ ಚೇತನ್ ಕುಮಾರ್ , ಸಿಬ್ಬಂದಿಗಳು ಮೇ.11ರಂದು ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊ.ನಂ:124/2024 ಕಲಂ:379 ಐಪಿಸಿ ಪ್ರಕರಣದಲ್ಲಿ ಕಳುವಾಗಿದ್ದ KA-06-HS-2235 ನೇ ದ್ವಿಚಕ್ರ ವಾಹನ ದೊಂದಿಗೆ ಆರೋಪಿ ಸುನೀಲ್ ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಳ್ಳತನ ಪ್ರಕರಣ ಪತ್ತೆಯಾಗಿದೆ.

ಕ್ಯಾತ್ಸಂದ್ರ ಪೊಲೀಸ್ ಠಾಣೆಯ-02, ಕೆಸ್ತೂರು ಪೊಲೀಸ್ ಠಾಣೆಯ-01, ಜಯನಗರ ಪೊಲೀಸ್ ಠಾಣೆಯ-01, ಕೋರಾ ಪೊಲೀಸ್ ಠಾಣೆಯ-01, ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ-01 ಹೆಬ್ಬೂರು ಪೊಲೀಸ್ ಠಾಣೆಯ-01 ಸೇರಿ ಒಟ್ಟು 2,63,505 ಮೌಲ್ಯದ 7 ದ್ವಿ ಚಕ್ರವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪತ್ತೆ ಕಾರ್ಯದಲ್ಲಿ ಡಿವೈಎಸ್ಪಿ ಚಂದ್ರಶೇಖರ್, ಸಿಪಿಐ ರಾಮಪ್ರಸಾದ್, ಪಿಎಸ್ಐ ಚೇತನ್ ಕುಮಾರ್, ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಮಂಜುನಾಥ್, ಗಿರೀಶ್, ಶರಣಪ್ಪ, ಶಶಿಧರ ಮತ್ತು ಸಾಗರ್ ರಾಥೋಡ್ ಇವರುಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *