Thursday, 25th July 2024

ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜ‌ನಾ ನಿರ್ದೇಶಕರಿಗೆ ಎಸಿಬಿ ಶಾಕ್

ಗದಗ: ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜ‌ನಾ ನಿರ್ದೇಶಕ ಎಸ್.ಎನ್.ರುದ್ರೇಶ್ ಅವರ ನಿವಾಸ, ಕಚೇರಿ ಸೇರಿದಂತೆ ಮೂರು ಕಡೆ ಗುರುವಾರ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ನಗರದ ನೌಕರರ ಭವನ ಹಿಂಭಾಗದ ಕಂದಾಯ ಇಲಾಖೆ ಅಧಿಕಾರಿಗಳ ವಸತಿ ಬಡಾವಣೆಯಲ್ಲಿರುವ ಮನೆ, ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯ ಮನೆ ಹಾಗೂ ಜಿಲ್ಲಾಡಳಿತ ಭವನದ ಕಚೇರಿಗೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದು, ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದಾರೆ.

ಮನೆಯ ಮೇಲ್ಛಾವಣಿ, ಗಾರ್ಡನ್, ವಾಹನ ಪಾರ್ಕಿಂಗ್ ಜಾಗವನ್ನೂ ಬಿಡದೆ ಶೋಧ ನಡೆಸುತ್ತಿದ್ದಾರೆ. ಬೆಳಗಾವಿ ಎಸಿಬಿ ಡಿಎಸ್ಪಿ ಮಹಾಂತೇಶ್ವರ ಸಿಪಿಐ ಧರ್ನಾಯಕ, ಸಂಜೀವಕುಮಾರ ನೇತೃತ್ವದಲ್ಲಿ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!