Wednesday, 11th December 2024

ACKO: ಮೋಟಾರು ವಿಮಾ ಸ್ಕ್ಯಾಮ್ ವಿರುದ್ಧ ಕ್ರಮ ಕೈಗೊಂಡ ACKO; ಲಕ್ಷಾಂತರ ಬೈಕ್ ಮಾಲೀಕರನ್ನು ಸಂರಕ್ಷಿಸಿ ಜಾಗೃತಿ ಪ್ರೋತ್ಸಾಹಿಸಿದೆ

ಬೆಂಗಳೂರು: ಮುಂಚೂಣಿ ಗ್ರಾಹಕರಿಗೇ-ನೇರ ವಿಮಾ ಸಂಸ್ಥೆಯಾದ ACKO, ಮಹತ್ತರವಾದ ಆನ್‌ಲೈನ್ ಮೋಟಾರು ವಿಮಾ ಸ್ಕ್ಯಾಮ್ ಬಯಲು ಮಾಡಿದೆ. ಸಂಸ್ಥೆಯು ಇಲ್ಲಿಯವರೆಗೆ, ಖರೀದಿಯ ವೇಳೆ ತಪ್ಪಾಗಿ ಪ್ರತಿ ನಿಧಿಸುವ ಮೂಲಕ ತಮ್ಮ ಖಾಸಗಿ ನಾಲ್ಕು ಚಕ್ರ ವಾಹನಗಳು ಹಾಗೂ ವಾಣಿಜ್ಯ ವಾಹನಗಳಿಗೆ ದ್ವಿ-ಚಕ್ರ ವಾಹನ ವಿಮಾ ಪಾಲಿಸಿಗಳನ್ನು ಖರೀದಿಸುವ ವ್ಯಕ್ತಿಗಳ 200ಕ್ಕಿಂತ ಹೆಚ್ಚಿನ ವಂಚನೆಯ ಸಂದರ್ಭಗಳನ್ನು ಗುರುತಿಸಿದೆ. ಭಾರತೀಯ ದಂಡ ಸಂಹಿತೆಯ 420 ಅನುಚ್ಛೇದದಡಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ACKO ದೇಶಾದ್ಯಂತ ಇಂತಹ ವಂಚಕರ ವಿರುದ್ಧ ದೂರುಗಳನ್ನು ದಾಖಲಿಸಿದೆ.

ವಿಮಾ ವಂಚನೆಯಲ್ಲಿ ತೊಡಗಿಕೊಳ್ಳುವುದು ಗಂಭೀರವಾದ ಅಪರಾಧವಾಗಿದ್ದು ಇದು ತೀವ್ರತರವಾದ ಪರಿಣಾಮ ಗಳನ್ನು ಹೊಂದಿರುತ್ತದೆ. ವಿಮಾ ವಂಚನೆ ಮಾಡುತ್ತಿದ್ದಾರೆ ಎಂದು ಕಂದು ಬಂದ ವ್ಯಕ್ತಿಗಳು, ದಂಡ ಮತ್ತು ಸೆರೆ ವಾಸ ಒಳಗೊಂಡಂತೆ, ಅಪರಾಧಿಕ ಆರೋಪಗಳನ್ನು ಎದುರಿಸಬಹುದಾಗಿದೆ. ವಿಮಾ ಉದ್ದಿಮೆಯ ನ್ಯಾಯ ಪರತೆ ಮತ್ತು ವಿಶ್ವಾಸ ಕಾಪಾಡಲು, ವಿಮೆಯನ್ನು ಖರೀದಿಸುವಾಗ ಮತ್ತು ಕ್ಲೇಮು ಮಾಡುವಾಗ ಪ್ರಾಮಾಣಿಕ ಪದ್ಧತಿ ಗಳನ್ನು ಅನುಸರಿಸುವುದು ಅತ್ಯಾವಶ್ಯಕ.

ಭಾರತದ ದಕ್ಷಿಣಾತ್ಯ ಪ್ರದೇಶಗಳಲ್ಲಿ, ನಿರ್ದಿಷ್ಟವಾಗಿ ಕರ್ನಾಟಕ, ಆಂಧ್ರಪ್ರದೇಶ, ಕೇರಳ ಹಾಗೂ ತಮಿಳುನಾಡು ಪ್ರದೇಶಗಳಲ್ಲಿ ಡಿಜಿಟಲ್ ಮೋಟಾರು ವಿಮಾ ವಂಚನೆಯಲ್ಲಿ ಆತಂಕವನ್ನುಂಟು ಮಾಡುವ ಏರಿಕೆಯನ್ನು ACKO ಗಮನಿಸಿದೆ.

ಇಂತಹ ಸ್ಕ್ಯಾಮುಗಳನ್ನು ACKO ಪರಿಗಣಿಸಿ, ಮಾಹಿತಿಯ ತಪ್ಪಾದ ಪ್ರತಿನಿಧಿತ್ವದ ಆಧಾರದ ಮೇಲೆ ನೀಡಲಾದ ಪಾಲಿಸಿಗಳನ್ನು ಅಮಾನ್ಯಗೊಳಿಸಿರುವುದಷ್ಟೇ ಅಲ್ಲದೆ ಕಟ್ಟುನಿಟ್ಟಾದ ಕಾನೂನುಕ್ರಮವನ್ನೂ ಕೈಗೊಂಡಿದೆ. ವಂಚನೆಗೆ ಸುಮ್ಮನೆ ಪ್ರತಿಕ್ರಿಯೆ ನೀಡುವುದರಾಚೆ ಬ್ರ್ಯಾಂಡ್ ನಡೆದಿದೆ. ಇಂತಹ ವಂಚನೆಯ ಪದ್ಧತಿಗಳ ಕುರಿತು ACKO ಪಾಲಿಸಿದಾರರಿಗೆ ಒಂದು ಸಾರ್ವಜನಿಕ ಸೂಚನೆ ಹೊರಡಿಸಿದೆ.

ತನ್ನ ಗ್ರಾಹಕರಲ್ಲಿ ಅರಿವು ಮೂಡಿಸಿ ಅವರನ್ನು ಸಬಲಗೊಳಿಸುವಲ್ಲಿ ಸಂಸ್ಥೆಯು ಸಕ್ರಿಯ ಪ್ರೋತ್ಸಾಹಗಳನ್ನು ಕೈಗೊಳ್ಳುತ್ತಿದೆ. ಈ ಬದ್ಧತೆಯು, ಅದು ನೀಡಿರುವ ಸಾರ್ವಜನಿಕ ಸೂಚನೆ ಮತ್ತು ತನ್ನ ಪರಿಶೀಲಿಸಲ್ಪಟ್ಟ ಆಪ್ ಮತ್ತು ವೆಬ್‌ಸೈಟ್‌ನಿಂದ ನೇರವಾಗಿ ಪಾಲಿಸಿಗಳನ್ನು ಖರೀದಿಸುವುದರ ಮೇಲೆ ಒತ್ತುನೀಡುವುದರಲ್ಲಿ ಸ್ಪಷ್ಟವಾಗಿದೆ

ಈ ಸ್ಕ್ಯಾಮ್ ಬಗ್ಗೆ ಮಾತನಾಡುತ್ತಾ, ACKO ದ ಲಿಟಿಗೇಶನ್ ಮತ್ತು ಪರಿಶೋಧನೆ ವಿಭಾಗದ ವಿಪಿ ರಾಜೇಶ್ ಧಾನೆ ” ACKO ದಲ್ಲಿ ನಮಗೆ ಗ್ರಾಹಕರ ಹಕ್ಕುಗಳು ಮತ್ತು ಸುಭದ್ರತೆ ಅತಿಮುಖ್ಯವಾದುದಾಗಿದೆ. ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಯಾವುದೇ ವಂಚನೆಯ ವಿಮಾ ಚಟುವಟಿಕೆಗಳನ್ನು ಬೆಳಕಿಗೆ ತರಲು ನಾವು ನಿರಂತರವಾಗಿ ಶ್ರಮಿಸುತ್ತಿರುತ್ತೇವೆ.

ಇತ್ತೀಚೆಗೆ ಮುನ್ನೆಲೆಗೆ ಬಂದಿರುವ ಸಂದರ್ಭಗಳ ಕುರಿತು ಹೇಳುವುದಾದರೆ, ನಾವು ಸ್ಥಳೀಯ ಪ್ರಾಧಿಕಾರಗಳೊಡನೆ ಸಕ್ರಿಯ ಸಹಯೋಗ ಏರ್ಪಡಿಸಿಕೊಂಡು ವಂಚಕರು ಬಂಧಿತರಾಗುವಂತೆ ಮಾಡಿದ್ದೇವೆ. ಇಂತಹ ಸ್ಕ್ಯಾಮ್‌ಗಳನ್ನು ಗುರುತಿಸಿ ನಿವಾರಿಸುವ ನಮ್ಮ ಪ್ರಯತ್ನಗಳು, ಎಲ್ಲಾ ನಗರಗಳಾದ್ಯಂತ ವಿಸ್ತಾರ ಗೊಳ್ಳುತ್ತದೆ ಮತ್ತು ನಾವು ಈ ಪದ್ಧತಿಯ ನಿರ್ಮೂಲನೆ ಮಾಡುತ್ತೇವೆ ಎಂಬ ಆತ್ಮವಿಶ್ವಾಸವಿದೆ.” ಎಂದು ಹೇಳಿದರು.

ಈ ಸಕ್ರಿಯಾತ್ಮಕ ದೃಷ್ಟಿಕೋನವು, ತನ್ನ ಗ್ರಾಹಕರನ್ನು ರಕ್ಷಿಸುವ ಮತ್ತು ವಿಮಾ ವಂಚನೆ ಎದುರಿಸುವ ACKOದ ಅಚಲ ಬದ್ಧತೆಯನ್ನು ಪ್ರದರ್ಶಿಸುತ್ತದೆ.

ಭಾರತದಲ್ಲಿ ಕಾರು ವಿಮಾ ಸ್ಕ್ಯಾಮ್‌ಗಳು, ಪಾಲಿಸಿದಾರರು ಹಾಗೂ ವಿಮಾ ಸಂಸ್ಥೆಗಳಿಬ್ಬರಿಗೂ ಆತಂಕದ ವಿಷಯ ವಾಗಿರುವುದರಿಂದ, ವಂಚಕರು ಎಸಗುವ ಅಪರಾಧಗಳನ್ನು ಗುರುತಿಸುವ ಬಗೆಯನ್ನು ಅರ್ಥಮಾಡಿ ಕೊಳ್ಳುವುದು ಅತ್ಯಾವಶ್ಯಕ.

  1. ವಿಮಾ ಸಂಸ್ಥೆಯಿಂದಲೇ ನೇರವಾಗಿ ವಿಮಾ ಪಾಲಿಸಿ ಖರೀದಿಸಿ: ನಿಜವಾದ ವಿಮಾ ಪಾಲಿಸಿಯ ಖರೀದಿಯನ್ನು ಖಾತರಿಪಡಿಸಲು, ಗ್ರಾಹಕರು, IRDAI ದೊಂದಿಗೆ ನೋಂದಣಿಯಾಗಿರುವ ACKOದಂತಹ ವಿಮಾ ಸಂಸ್ಥೆಯಿಂದ ನೇರವಾಗಿ ವಿಮೆಯನ್ನು ಖರೀದಿಸಬೇಕು.
  2. ವಿಮೆಯ ಪ್ರೀಮಿಯಮ್ ರಸೀತಿಯನ್ನು ಕೇಳಿ: ಗ್ರಾಹಕರು ಯಾವಾಗಲೂ ವಿಮೆಯ ಪ್ರೀಮಿಯಮ್ ರಸೀತಿಯನ್ನು ಕೋರಬೇಕು, ಒಂದೊಮ್ಮೆ ಗ್ರಾಹಕರು ಪಾಲಿಸಿಯು ನಕಲಿಯಾದುದು ಎಂದು ಕಂಡು ಕೊಂಡಲ್ಲಿ, ವಂಚನೆಯ ವಿಮಾಸಂಸ್ಥೆಯ ವಿರುದ್ಧ ಕಾನೂನು ಹೋರಾಟ ನಡೆಸುವಾಗ ಅವರು ಪುರಾವೆ ಯಾಗಿ ಈ ರಸೀತಿಯನ್ನು ಉಪಯೋಗಿಸಬಹುದು.
  3. ಪಾಲಿಸಿಯ ಸೂಕ್ಷ್ಮ ಮುದ್ರಣವನ್ನು ಕೂಡ ಓದಿ: ವಿಮೆಯ ಪ್ರಯೋಜನಗಳು ಹಾಗೂ ಅಂಶಗಳನ್ನು ಅರ್ಥ ಮಾಡಿಕೊಳ್ಳಲು, ವಿಮಾ ಪಾಲಿಸಿಯ ಷರತ್ತುಗಳು ಮತ್ತು ನಿಬಂಧನೆಗಳನ್ನು ಚೆನ್ನಾಗಿ ಓದುವುದನ್ನು ಖಾತರಿಪಡಿಸಿಕೊಳ್ಳಿ. ಗ್ರಾಹಕರಿಗೆ ಪಾಲಿಸಿಯಲ್ಲಿ ಏನಾದರೂ ತಪ್ಪು ಕಂಡು ಬಂದಲ್ಲಿ, ಅದನ್ನು ವಿಮಾ ಸಂಸ್ಥೆಯೊಂದಿಗೆ ಸರಿಪಡಿಸಿಕೊಳ್ಳುವುದು ವಿವೇಚನಾಯುಕ್ತವಾದುದು.
  4. ಚೆಕ್/ಆನ್‌ಲೈನ್ ಪಾವತಿ ವಿಧ/ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿ: ಇದು ವಿಮಾ ಸಂಸ್ಥೆಗೇ ನೇರವಾಗಿ ಪಾವತಿಯಾಗುವುದನ್ನು ಖಾತರಿಪಡಿಸುತ್ತದೆ ಮತ್ತು ಪಾವತಿ ವರ್ಗಾವಣೆ ಮಾಡುವ ಮುನ್ನ ಯಾವಾಗಲೂ ಗ್ರಾಹಕರು ಬ್ಯಾಂಕ್ ವಿವರಗಳನ್ನು ಮರುಪರಿಶೀಲಿಸಬೇಕು.
  5. QR ಕೋಡ್ ಮೂಲಕ ಪರಿಶೀಲಿಸಿಕೊಳ್ಳಿ: IRDAI ನೀಡಿರುವ ಮಾರ್ಗಸೂಚಿಗಳ ಪ್ರಕಾರ, ಪ್ರತಿಯೊಂದು ವಿಮಾ
    ಪಾಲಿಸಿಗೂ QR ಕಡ್ಡಾಯವಾಗಿದೆ. ಪಾಲಿಸಿಯು ನಿಜವಾದುದೇ ಅಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳಲು ಗ್ರಾಹಕರು ಕೋಡ್‌ಅನ್ನು ಸ್ಕ್ಯಾನ್ ಮಾಡಬಹುದು. ಪಾಲಿಸಿಯ ಈ QR ಕೋಡ್, ವಿಮಾ ಯೋಜನೆಯ ಸ್ಥಿತಿಗತಿ ಮತ್ತು ವಿವರಗಳನ್ನು ಹೊಂದಿದ್ದು, ನೀವು ಪಾಲಿಸಿಯ ನೈಜತೆಯನ್ನು ಪರಿಶೀಲಿಸಿಕೊಳ್ಳಲು ನೆರವಾಗುತ್ತದೆ.
  6. ಖಾಲಿ ನಮೂನೆ(ಫಾರ್ಮ್) ಅಥವಾ ಚೆಕ್ಕುಗಳ ಮೇಲೆ ಸಹಿ ಹಾಕಬೇಡಿ: ಗ್ರಾಹಕರು ತಮ್ಮ ಪಾಲಿಸಿ ದಾಖಲೆ ಗಳನ್ನು ತಾವೇ ಸ್ವತಃ ಭರ್ತಿ ಮಾಡುವಂತೆ ಆಗ್ರಹಿಸಲಾಗುತ್ತದೆ. ವಂಚನೆ ತಪ್ಪಿಸಲು, ಖಾಲೆ ಹಾಳೆ/ನಮೂನೆ ಅಥವಾ ಚೆಕ್ ಮೇಲೆ ಸಹಿ ಹಾಕಬೇಡಿ. ಖಾಲಿ ದಾಖಲೆ ಅಥವಾ ಚೆಕ್ ಮೇಲೆ ಸಹಿ ಮಾಡುವುದರಿಂದ, ಗ್ರಾಹಕರು ಸಹಿ ಮಾಡಿರುವ ನಮೂನೆಯನ್ನು ಉಪಯೋಗಿಸಿ ಬೇರೆ ವಿಮಾ ಉತ್ಪನ್ನವನ್ನು ಖರೀದಿಸುವುದಕ್ಕೆ ನಕಲಿ ಅಥವಾ ಕಾನುನುಬದ್ಧ ಏಜೆಂಟ್‌ಗೆ ಅವಕಾಶ ಸಿಕ್ಕಂತಾಗುತ್ತದೆ.
  7. ವಾಸ್ತವತೆ ಇಲ್ಲದ ಪ್ರಯೋಜನಗಳಿಗೆ ಮರುಳಾಗಬೇಡಿ: ಅವಾಸ್ತಿಕವಾದ ಪ್ರಯೋಜನಗಳು ಅಥವಾ ನಿಜವಿರ ಬಹುದೆಂದು ನಂಬಲಸಾಧ್ಯವಾದ ಅಂಶಗಳನ್ನು ಒದಗಿಸುವ ಏಜೆಂಟ್‌ಗಳಿಂದ ಬರುವ ಕರೆ ಅಥವಾ ಸಂದರ್ಶನಗಳನ್ನು ಸಂದೇಹಿಸುವುದು ಒಳ್ಳೆಯದು. ಇಂತ ಸೇವೆಗಳನ್ನು ಒದಗಿಸುವ ಏಜೆಂಟುಗಳು ಅಥವಾ ವಿಮಾ ಸಂಸ್ಥೆಗಳು, ಪಾಲಿಸಿಯ ವ್ಯಾಪ್ತಿಯಾಚೆ ಇರುವ ಪ್ರಯೋಜನಗಳನ್ನು ಒದಗಿಸಲಾರವು.
  8. ಆದ್ದರಿಂದ, ನಕಲಿ ಕೊಡುಗೆಗಳಿಗೆ ಮರುಳಾಗುವ ಮುನ್ನ ವಿಮಾ ಸಂಸ್ಥೆಯನ್ನು ಸಂಪರ್ಕಿಸಿ ಎರಡೆರೆಡು ಬಾರಿ ಪರಿಶೀಲಿಸಿ ಖಾತರಿಪಡಿಸಿಕೊಳ್ಳಿ.