Monday, 9th December 2024

Actor Darshan: ಜೀವ ಇರೋವರೆಗೂ ನಟ ದರ್ಶನ್ ನನ್ನ ಮಗನೇ ಎಂದ ಸುಮಲತಾ ಅಂಬರೀಶ್‌

Actor Darshan

ಬೆಂಗಳೂರು: ನಾನು ಯಾವಾಗಲೂ ನಟ ದರ್ಶನ್ ಪರವಾಗಿಯೇ ಇದ್ದೇನೆ. ನನ್ನ ಜೀವ ಇರೋವರೆಗೂ ದರ್ಶನ್ (Actor Darshan) ನನ್ನ ಮಗನೇ. ನಮ್ಮದು ತಾಯಿ-ಮಗನ ಸಂಬಂಧ, ಖಂಡಿತಾ ಅವರ ಪರ ನಾನು ಇದ್ದೇನೆ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್‌ (Sumalatha Ambareesh) ಹೇಳಿದ್ದಾರೆ.

ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ನಾನು ದರ್ಶನ್ ಪತ್ನಿ ವಿಜಯಲಕ್ಷ್ಮಿ ಜತೆಗೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ಅವರಿಂದ ದರ್ಶನ್ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ದರ್ಶನ್ ಮುಂದೆ ಈಗ ಹಲವು ಸವಾಲುಗಳು ಇವೆ. ಸದ್ಯ ಅವರಿಗೆ ಚಿಕಿತ್ಸೆ ಬೇಕು. ಆರೋಗ್ಯ ಸರಿಯಾಗಬೇಕು ಎಂದು ತಿಳಿಸಿದ್ದಾರೆ.

ದರ್ಶನ್‌ಗೆ ಬೆನ್ನು ನೋವು ಜಾಸ್ತಿ ಇದೆ. ಆದರೆ, ಅವರಿಗೆ ಸರ್ಜರಿ ಮಾಡಿಸಿಕೊಳ್ಳುವ ಇಷ್ಟ ಇಲ್ಲ ಎಂದು ತಿಳಿದುಬಂದಿದೆ. ಆಪರೇಷನ್‌ ಮಾಡಿದ್ರೆ ರಿಕವರಿ ಆಗುವುದು ತುಂಬಾ ನಿಧಾನ ಆಗುತ್ತದೆ. ಅರ್ಧಕ್ಕೆ ನಿಂತಿರುವ ಸಿನಿಮಾಗಳು ಇರುತ್ತವೆ. ಚಿತ್ರರಂಗದಲ್ಲೂ ತುಂಬಾ ನಷ್ಟ ಆಗುತ್ತಿರುವ ಪರಿಸ್ಥಿತಿ ಇದೆ. ಹೀಗಾಗಿ ಅವರು ಬೇಗನೇ ಸರಿ ಹೋಗಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.

ನಟ ದರ್ಶನ್ ಬೇಲ್ ಬಗ್ಗೆ ಲೀಗಲ್ ಚಾಲೆಂಜ್ ಇದೆ. ಅದನ್ನೆಲ್ಲ ದರ್ಶನ್ ಸರಿ ಮಾಡಿಕೊಂಡು ಹೊರಗೆ ಬರುತ್ತಾರೆ ಎಂಬ ಆಸೆ ಇದೆ. ನನ್ನ ನಿಲುವು ಏನು ಎಂಬುದನ್ನು ಈಗಾಗಲೇ ಸ್ಪಷ್ಟವಾಗಿ ತಿಳಿಸಿದ್ದೇನೆ. ನಮ್ಮ ಸಂಬಂಧ ಇನ್ಮುಂದೆಯೂ ಹೀಗೆ ಇರಲಿದೆ. ನನ್ನ ಲೈಫ್ ಇರೋವರೆಗೂ ದರ್ಶನ್ ನನ್ನ ಮಗನೇ ಎಂಬುದಾಗಿ ತಿಳಿಸಿದ್ದಾರೆ.

ಚಿತ್ರರಂಗಕ್ಕೆ ದರ್ಶನ್‌ ಅವರು ದೊಡ್ಡ ಪಿಲ್ಲರ್‌ ಇದ್ದ ಹಾಗೆ. ಕಳೆದ ವರ್ಷ ಕಾಟೇರ ಮೂಲಕ ಬಿಗ್ಗೆಸ್ಟ್‌ ಹಿಟ್‌ ನೀಡಿದ್ದರು. ಅವರ ಫ್ಯಾನ್‌ ಫಾಲೋಯಿಂಗ್‌, ಅವರ ಸಿನಿಮಾ ಕಲೆಕ್ಷನ್‌ ಇರಬಹುದು… ಅಂತಹ ಶಕ್ತಿಯನ್ನು ಚಿತ್ರರಂಗ ಕಳೆದುಕೊಂಡು, ಎಲ್ಲರೂ ನಷ್ಟ ಅನುಭವಿಸುವಂತಾಗಿದೆ. ಅವರಿಗಾಗಿ ಚಿತ್ರರಂಗದ ಎಲ್ಲರೂ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | Actor Darshan: ಜೀವ ಇರೋವರೆಗೂ ನಟ ದರ್ಶನ್ ನನ್ನ ಮಗನೇ ಎಂದ ಸುಮಲತಾ ಅಂಬರೀಶ್‌

ಈಗ ನಡೆದಿರುವ ಬಗ್ಗೆ ಎಲ್ಲರೂ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ನಡೆದಿರುವುದು ಎಲ್ಲರಿಗೂ ನೋವಾಗುವ ವಿಚಾರ. ಆದರೆ, ಇದರ ಬಗ್ಗೆ ನಾನು ಹೆಚ್ಚಾಗಿ ಮಾತನಾಡಲ್ಲ. ದರ್ಶನ್‌ ಒಬ್ಬ ಒಳ್ಳೆ ಗುಣಗಳಿರುವ ವ್ಯಕ್ತಿ, ಅವರನ್ನು ದೇವರು ಕಾಪಾಡುತ್ತಾನೆ ಎಂಬ ನಂಬಿಕೆ ಇದೆ. ಪ್ರಕರಣದಲ್ಲಿ ತಪ್ಪು ಯಾರದು ಎಂಬುದು ಕೋರ್ಟ್‌ನಲ್ಲಿ ತೀರ್ಮಾನವಾಗಲಿದೆ. ನಮ್ಮದು ತಾಯಿ-ಮಗನ ಸಂಬಂಧ, ಖಂಡಿತಾ ಅವರ ಪರ ನಾನು ಇದ್ದೇನೆ ಎಂದು ತಿಳಿಸಿದ್ದಾರೆ.