Thursday, 12th December 2024

Actor Darshan: ನಿಜವಾಯ್ತು ದರ್ಶನ್ ಕುರಿತು ಗುರೂಜಿ ಹೇಳಿದ್ದ ಭವಿಷ್ಯ ವಾಣಿ; ಆರೋಗ್ಯ ಸಮಸ್ಯೆಗೂ ಪರಿಹಾರ

Actor Darshan

ತುಮಕೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಸಂಕಷ್ಟ ಎದುರಿಸುತ್ತಿರುವ ನಟ ದರ್ಶನ್‌ (Actor Darshan) ಅವರ ಬಗ್ಗೆ ಜಿಲ್ಲೆಯ ಮೂಕಾಂಬಿಕಾ ದೇವಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ಲಕ್ಷ್ಮಿಕಾಂತ ಆಚಾರ್ಯ ಗುರೂಜಿ ಅವರು ನುಡಿದಿದ್ದ ಭವಿಷ್ಯವಾಣಿ ನಿಜವಾಗಿರುವುದು ಕಂಡುಬಂದಿದೆ.

ತುಮಕೂರಿನ ಚಿನಗ ಗ್ರಾಮದಲ್ಲಿ ನೆಲೆಸಿರುವ ಶ್ರೀ ಮೂಕಾಂಬಿಕಾ ದೇವಿ ಕ್ಷೇತ್ರದಲ್ಲಿ ದರ್ಶನ್‌ ಅವರ ಅಭಿಮಾನಿಗಳು ಇತ್ತೀಚೆಗೆ ವಿಶೇಷ ಪೂಜೆ ಮಾಡಿಸಿ, ಅನ್ನ ದಾಸೋಹ ಮಾಡಿದ್ದರು. ನಂತರ ದರ್ಶನ್‌ ಅವರ ಭವಿಷ್ಯದ ಬಗ್ಗೆ ಪ್ರಶ್ನೆ ಕೇಳಿದ್ದರು. ಈ ವೇಳೆ ಆಶ್ವಯುಜ-ಕಾರ್ತಿಕ ಮಾಸದ ಮಧ್ಯ ಭಾಗ ದರ್ಶನ್‌ಗೆ ಬಿಡುಗಡೆ ಭಾಗ್ಯ ಸಿಗಲಿದೆ. ಈ ಬಗ್ಗೆ ಹೂ ಪ್ರಸಾದ ನೀಡುವ ಮೂಲಕ ಮೂಕಾಂಬಿಕಾ ದೇವಿ ಸೂಚನೆ ನೀಡಿದ್ದಾರೆ ಎಂದು ಗುರೂಜಿ ತಿಳಿಸಿದ್ದರು.

ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಗುರೂಜಿ, ಇದು ಶುಭ ಸೂಚನೆಯ ಆರಂಭವಾಗಿದೆ. ನಟ ದರ್ಶನ್‌ಗೆ ಶ್ರೀ ಮೂಕಾಂಬಿಕಾ ದೇವಿಯ ಆಶೀರ್ವಾದ ಸಿಕ್ಕಿದೆ. ದೇವಿ ನುಡಿದಂತೆ ಕರ್ನಾಟಕ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಮಂಜೂರಾಗಿದೆ ಎಂದು ಹೇಳಿದ್ದಾರೆ.

ಇನ್ನು ದರ್ಶನ್ ಆರೋಗ್ಯ ಸಮಸ್ಯೆಗೆ ಪರಿಹಾರ ಸೂಚಿಸಿರುವ ಡಾ.‌ ಲಕ್ಷ್ಮಿಕಾಂತ ಆಚಾರ್ಯ ಗುರೂಜಿ, ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗೋ ಪೂಜೆ ಮಾಡಿದರೆ ಆರೋಗ್ಯ ಸಮಸ್ಯೆ ನಿವಾರಣೆಯಾಗಲಿದೆ. ಸುಮಂಗಲಿ ಕೈಯಲ್ಲಿ ಪೂಜೆ ಮಾಡಿಸಿದರೆ ಆರೋಗ್ಯ ಸಮಸ್ಯೆ ಪರಿಹಾರವಾಗಲಿದೆ. ದರ್ಶನ್‌ ಅವರಿಗೆ ಶುಭ ದಿನಗಳು ಪ್ರಾರಂಭ ಆಗಿವೆ, ಅವರಿಗೆ ಉಜ್ವಲ ಭವಿಷ್ಯ ಇದೆ. ಮಧ್ಯಂತರ ಆದೇಶ ಬಂದರೂ ಜಾತಕ ಫಲ ಶುಭವಿದೆ. ಒಳ್ಳೆಯದು ಕೂಡ ಆಗುತ್ತದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | DK Shivakumar: ಕರಾವಳಿಯಲ್ಲಿ ಕೋಮು ಗಲಭೆ ನಿವಾರಿಸಲು ಪ್ರವಾಸೋದ್ಯಮಕ್ಕೆ ಉತ್ತೇಜನ; ಡಿ.ಕೆ. ಶಿವಕುಮಾರ್