Wednesday, 11th December 2024

ಅಂಗನವಾಡಿ ಮಕ್ಕಳಿಗಾಗಿ ಶಾಲಾಪೂರ್ವ ಶಿಕ್ಷಣ ಬಲವರ್ಧನ ಶಿಬಿರ

ಚಿತ್ತಾಪುರ: ಶಾಲಾಪೂರ್ವ ಶಿಕ್ಷಣ ಬಲವರ್ಧನ ಯೋಜನೆ ಮಾಡುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಮೈಕ್ರೋ ಯೋಜನೆಯಡಿ ಹಾಗೂ ಇಂಡಿಯಾ ಲಿಟರಸಿ ಅಡಿಯಲ್ಲಿ ಶಿಶು ಅಭಿವೃದ್ಧಿ ಯೋಜನೆ ಯಿಂದ ಅಂಗನವಾಡಿ ಕಾರ್ಯಕರ್ತರ ನಾಲ್ಕು ದಿನಗಳ ತರಬೇತಿ ಕಾರ್ಯಗಾರ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳ ಲಾಯಿತು.

ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದಲ್ಲಿ ಅಂಗನವಾಡಿಯಲ್ಲಿ ಬರುವ ಮಕ್ಕಳನ್ನು ಶಾಲಾ ಪೂರ್ವ ಶಿಕ್ಷಣಕ್ಕೆ ಬಲವರ್ಧನೆ ಮಾಡುವ ಉದ್ದೇಶದಿಂದ ನಡೆದ ನಾಲ್ಕನೆ ಹಂತದ ಅಂಗನವಾಡಿ ಕಾರ್ಯಕರ್ತೆಯರಿಗೆ ನಾಲ್ಕು ದಿನಗಳ ಕಾಲ ತರಬೇತಿ ಕಾರ್ಯಗಾರದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿಶು ಅಭಿವೃದ್ಧಿ ಯೋಜನೆಯ ಜಿಲ್ಲಾ ಸಂಯೋಜಕ ಗುರು ಜಬಲಾಪುರ ಮಾತನಾಡಿ ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ಕಾರ್ಯಕರ್ತೆಯರು ಶಿಬಿರದಲ್ಲಿ ಕಲಿತ ಎಲ್ಲಾ ಪಾಠಗಳನ್ನು ತಮ್ಮ ತಮ್ಮ ಅಂಗನವಾಡಿಯಲ್ಲಿರುವ ಎಲ್ಲಾ ಮಕ್ಕಳಿಗೆ ಸಮರ್ಪಕವಾಗಿ ಕಲಿಸಿದಾಗಾ ಮಾತ್ರ ಈ ಶಿಬಿರ ಯಶಸ್ವಿಯಾಗುತ್ತದೆ ಎಂದು ಹೇಳಿದರು.

ಗ್ರಾಮದ ಮುಖಂಡ ರಮೇಶ್ ಕವಡೆ ಮಾತನಾಡಿ ಮಕ್ಕಳು ಶಾಲೆಗೆ ಹೊಡಿಬೇಕಾದರೆ ಮೊದಲು ಸಾಮಾನ್ಯ ಜ್ಞಾನ ಇರಬೇಕು ನಮ್ಮ ಭಾಗದಲ್ಲಿ ಎಸ್ ಎಸ್ ಎಲ್ ಸಿ ಮುಗಿಸಿ ತಮ್ಮ ಜೀವನೋಪಾಯವನ್ನು ರೂಪಿಸಿಕೊಳ್ಳಲು ವಿವಿಧ ಕೆಲಸ ಕಾರ್ಯಗಳಿಗೆ ಮುಂದಾಗುತ್ತಿರುವುದರಿಂದ ವಿದ್ಯಾಬ್ಯಾಸದ ಮಟ್ಟ ಕಡಿಮೆ ಆಗುತ್ತಿದೆ ಆದ್ದರಿಂದ ಅಂಗನವಾಡಿ ಎಂಬುದು ಶಿಕ್ಷಣಕ್ಕೆ ತಳಪಾಯ ವಾಗಿದೆ ಎಲ್ಲ ಅಂಗನವಾಡಿ ಕಾರ್ಯ ಕರ್ತರು ತಮ್ಮ ಶಿಬಿರಗಳಲ್ಲಿ ಕೈಗೊಂಡ ವಿಶೇಷ ಚಟುವಟಿಕೆಗಳು ಮತ್ತು ಕಲಿಕಾ ಮಟ್ಟ ವನ್ನು ಹೆಚ್ಚಿಸುವ ನೆಟ್ಟಿನ ವಿಶೇಷ ಕಾರ್ಯಕ್ರಮಗಳನ್ನು ತಮ್ಮ ಅಂಗನವಾಡಿ ಕೇಂದ್ರಗಳಲ್ಲಿ ಬರುವ ಮಕ್ಕಳಿಗೆ ಶಿಕ್ಷಣ ರೂಪದಲ್ಲಿ ತಿಳಿಸಿ ಶಾಲ್ವಪ್ಪುವ ಶಿಕ್ಷಣಕ್ಕೆ ಬೇಕಾಗಿರುವ ಬುದ್ಧಿಶಕ್ತಿಯನ್ನು ಹೆಚ್ಚಿಸಲು ತಾವೆಲ್ಲರೂ ಮುಂದಾದಾಗ ಮಾತ್ರ ಶಿಕ್ಷಣ ಬಲವರ್ಧನೆ ಆಗುತ್ತದೆ ಇದಕ್ಕೆ ಬೇಕಾಗಿರುವ ಎಲ್ಲಾ ಸೌಲತ್ತುಗಳನ್ನು ನನ್ನ ಕೈಯಿಂದ ಆದಷ್ಟು ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಚಿತ್ತಾಪುರ ದಂಡೋತಿ ವಲಯದ ಮೇಲ್ವಿಚಾರಕಿ ವಿಜಯಲಕ್ಷ್ಮಿ ಮಾತನಾಡಿ ಮೋದಲನೆ ದಿನ ಡೋಡ್ಡ ಮತ್ತು ಚಿಕ್ಕ ಗಾತ್ರಗಳ ಬಗ್ಗೆ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಮಾಹಿತಿ ನೀಡುವುದು, ಎರಡನೆ ದಿನ ಆಕಾರಗಳ ಬಗ್ಗೆ ಮೂರನೆ ದಿನ ಬಣ್ಣಗಳ ಬಗ್ಗೆ, ನಾಲ್ಕನೆ ದಿನ ಸಂಖ್ಯೆಗಳ ಬಗ್ಗೆ ಮಕ್ಕಳಿಗೆ ನೀಡಬೇಕು.

ಅಂಗನವಾಡಿ ಕೇಂದ್ರದಲ್ಲಿ ಮೂರರಿಂದ ನಾಲ್ಕು, ನಾಲ್ಕರಿಂದ ಐದು, ಐದರಿಂದ ಆರು ವರ್ಷದ ಮಕ್ಕಳಿರುವುದರಿಂದ ಎಲ್ಲಾ ಅಂಗನವಾಡಿ ಕಾರ್ಯಕರ್ತರು ಗಮನದಲ್ಲಿಟ್ಟುಕೊಂಡು ನಿಯಮದಂತೆ ಮಕ್ಕಳಿಗೆ ಕಲಿಸುವುದು ಅಗತ್ಯವಾಗಿದೆ ಎಂದು ಹೇಳಿದರು. ಅಂಗನವಾಡಿ ಕಾರ್ಯಕರ್ತೆ ವಿದ್ಯಾನಿಧಿ ಕವಡೆ ಸ್ವಾಗತಿಸಿ ವಂದಿಸಿದರು.

ಈ ಸಂದರ್ಭದಲ್ಲಿ ಚಿತ್ತಾಪೂರ ಅಂಗನವಾಡಿ ಮೇಲ್ವಿಚಾರಕಿ ರಮಾಬಾಯಿ ಸೇರಿದಂತೆ ವಲಯದ ಅಂಗನವಾಡಿ ಕಾರ್ಯಕರ್ತೆ ಯರು ಮತ್ತು ಸಹಾಯಕಿಯರು ಇದ್ದರು.