ತುಮಕೂರು: ಕೃಷಿ ಇಲಾಖೆಯಿಂದ “ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಕೃಷಿ ಮಾರುಕಟ್ಟೆಗೆ ಸಂಬ೦ಧಿಸಿದ ವಲಯಗಳಲ್ಲಿ ನಾವೀನ್ಯತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೊಸ ಕೃಷಿ ನವೋದ್ಯಮಿಗಳು ಹಾಗೂ ಈಗಾಗಲೇ ಸ್ಥಾಪಿಸಲಾದ ನವೋದ್ಯಮಗಳ ವಿಸ್ತರಣೆ ಅಥವಾ ಉನ್ನತೀಕರಣಕ್ಕಾಗಿ ಬ್ಯಾಂಕ್ ಸಾಲದ ಮುಖಾಂತರ ಶೇ.50ರಷ್ಟು ಸಹಾಯಧನವನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಹೊಸ ಕೃಷಿ ನವೋದ್ಯಮಿಗಳಿಗೆ(ಕನಿಷ್ಠ 5ಲಕ್ಷ ರೂ.ಗಳಿಂದ ಗರಿಷ್ಠ 20 ಲಕ್ಷ ರು.ಗಳವರೆಗೆ) ಹಾಗೂ ಸ್ಥಾಪಿಸಲಾಗಿರುವ ನವೋದ್ಯಮಗಳ ವಿಸ್ತರಣೆ ಮತ್ತು ಉನ್ನತೀಕರಣ(ಕನಿಷ್ಠ 20 ಲಕ್ಷ ರೂ.ಗಳಿಂದ ಗರಿಷ್ಠ 50 ಲಕ್ಷ ರೂ.ಗಳವರೆಗೆ)ಕ್ಕಾಗಿ ಸಹಾಯ ಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಸಮೀಪದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ರಮೇಶ್ ತಿಳಿಸಿದ್ದಾರೆ.