ಕೊಲ್ಹಾರ: ತಾಲೂಕಿನ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ಸ್ಥಾವರ ವ್ಯಾಪ್ತಿಯ ಕೂಡಗಿ, ಮಸೂತಿ, ತೆಲಗಿ, ಗೊಳಸಂಗಿ ಹಾಗೂ ಮುತ್ತಗಿ ಗ್ರಾಮದ ಬಾಧಿತ ಸಂತ್ರಸ್ತರು ತಮ್ಮ ವಿವಿಧ ಬೇಡಿಕೆಗಳ ಡೇರಿಕೆಗಾಗಿ ಜೆಡಿಎಸ್ ಮುಖಂಡ ಸೋಮನಗೌಡ(ಅಪ್ಪುಗೌಡ) ಪಾಟೀಲ್ (ಮನಗೂಳಿ) ನೇತೃತ್ವದಲ್ಲಿ ಶುಕ್ರವಾರ ಕೂಡಗಿ ಗ್ರಾಮದಲ್ಲಿ ಸಭೆ ನಡೆಸಿದರು.
ಕೂಡಗಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಅಪ್ಪುಗೌಡ ಪಾಟೀಲ್ ನೇತೃತ್ವದಲ್ಲಿ ಸಭೆ ನಡೆಸಿದ ರೈತರು ಕೂಡಗಿ ವಿದ್ಯುತ್ ಸ್ಥಾವರದ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡಿದ್ದು, ಭೂಮಿ ಪಡೆದುಕೊಳ್ಳುವ ಸಂದರ್ಭದಲ್ಲಿ ಅಧಿಕಾರಿಗಳು ನೀಡಿದ ಭರವಸೆಗಳು ಭರವಸೆಗಳಾಗಿಯೇ ಉಳಿದಿವೆ. ತಮ್ಮ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು ಕೂಡ ಸೂಕ್ತ ಸ್ಪಂದನೆ ದೊರಕುತ್ತಿಲ್ಲ ಬೇಡಿಕೆಗಳ ಈಡೇರಿಕೆಗಾಗಿ ಜೆಡಿಎಸ್ ಮುಖಂಡರಾದ ಅಪ್ಪುಗೌಡರ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕ ಸಚಿವ ಹೆಚ್.ಡಿ ಕುಮಾರಸ್ವಾಮಿಯವರ ಬಳಿ ಸಂತ್ರಸ್ತರ ನಿಯೋಗ ತೆರಳುವ ಒಕ್ಕೋರಲಿನ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖಂಡರು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಅಪ್ಪುಗೌಡ ಪಾಟೀಲ್ ಮಾತನಾಡಿ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ನಿರ್ಮಾಣಕ್ಕಾಗಿ ಭೂಮಿ ಪಡೆದುಕೊಂಡ ರೈತರ ಹಾಗೂ ಸಂತ್ರಸ್ತರ ಸಮಸ್ಯೆಗಳಿರುವ ಕುರಿತು ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕ ಸಚಿವ ಹೆಚ್.ಡಿ ಕುಮಾರ ಸ್ವಾಮಿಯವರ ಗಮನಕ್ಕೆ ತರಲಾಗಿದೆ. ಸಮಸ್ಯೆಗಳ ಹಾಗೂ ಬೇಡಿಕೆಗಳ ಸಮಯ ಸಂಪೂರ್ಣ ವಿವರಣೆ ನೀಡಲು ಕುಮಾರಸ್ವಾಮಿಯವರಲ್ಲಿ ಸಮಯಾವಕಾಶ ಕೇಳಲಾಗಿದ್ದು ಶೀಘ್ರದಲ್ಲಿಯೇ ಭೇಟಿಯಾಗುವ ಭರವಸೆ ನೀಡಿದ್ಧಾರೆ ಬಾಧಿತ ಸಂತ್ರಸ್ತರ ನಿಯೋಗದೊಂದಿಗೆ ಬೆಂಗಳೂರಿಗೆ ತೆರಳಿ ಬೇಡಿಕೆ ಗಳನ್ನು ಕುಮಾರಸ್ವಾಮಿಯವರ ಗಮನಕ್ಕೆ ತರಲಾಗುವುದು ಕುಮಾರಸ್ವಾಮಿಯವರು ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸುತ್ತಾರೆ ಎನ್ನುವ ಭರವಸೆ ಯಿದೆ ಎಂದು ಹೇಳಿದರು.
ಸಭೆಯಲ್ಲಿ ರೈತ ಮುಖಂಡರಾದ ಮೋದಿನಸಾಬ್ ಗಡೆದ್, ಎನ್.ಎಸ್ ಪಾಟೀಲ್, ಶೇಖರ್ ದಳವಾಯಿ, ಶಫೀಕ್ ಇನಾಮದಾರ, ಶಿವಪ್ಪ ಏಳಿಬೇಲ್, ಎಸ್.ಜಿ ವಸ್ತ್ರದ, ಹುಸೇನಸಾಬ ಜಾಗಿರದಾರ, ಮಲ್ಲಿಕಾರ್ಜುನ ವೀರಣ್ಣವರ, ಸುರೇಶ ದಳವಾಯಿ, ಮಲ್ಲಪ್ಪ ಉಪ್ಪಲದಿನ್ನಿ, ರಾಘವೇಂದ್ರ ಕುಲಕರ್ಣಿ, ರಾಯಪ್ಪ ಯಾಳಗಿ, ಹುಮಾಯೂನ್ ಗಡೇದ, ಆರ್.ಪಿ ಕುಂಬಾರ, ಸಯ್ಯದ ಹಿರಿಯಾಳ ಹಾಗೂ ಇನ್ನಿತರು ಇದ್ದರು.